Gold-Silver Rates Today Live Updates: ಚಿನ್ನ-ಬೆಳ್ಳಿ ದರ ದಿಢೀರ್ ಏರಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ
ಏಪ್ರಿಲ್ 2026 ರಲ್ಲಿ ಮುಕ್ತಾಯ MCX ಚಿನ್ನದ ದರ ಶೇ.1% ರಷ್ಟು ಏರಿಕೆಯಾಗಿ 10 ಗ್ರಾಂ.ಗೆ 1,56,800 ರಷ್ಟು ವಹಿವಾಟು ನಡೆಸಿತು. ಆದರೆ ಆರಂಭಿಕ ಬೆಲೆಯಲ್ಲಿ ಬುಲಿಯನ್ 1.57 ಲಕ್ಷ ರೂ. ಸಮೀಪ ತಲುಪಿತ್ತು. ಅಲ್ಲದೇ ಮೇ 2026 ರಲ್ಲಿ ಮುಕ್ತಾಯಗೊಳ್ಳಲಿರುವ MCX ಬೆಳ್ಳಿ 1 ಕೆಜಿಗೆ ರೂ. 2,61,457 ರಷ್ಟು ತಲುಪಿತ್ತು. ಆ ಮೂಲಕ ಬೆಳ್ಳಿ ಶೇ.2% ರಷ್ಟು ಏರಿಕೆ ಕಂಡಿದೆ.
ಈ ಮಧ್ಯೆ, ಸ್ಪಾಟ್ ಬೆಳ್ಳಿ ಬೆಲೆ ಏರಿಕೆ ಕಂಡಿದ್ದು, ಪ್ರತೀ ಔನ್ಸ್ಗೆ $5,020 ಕ್ಕಿಂತ ಹೆಚ್ಚಾಗಿ ವಹಿವಾಟು ನಡೆಸುತ್ತಿದೆ. ಇನ್ನು ಸ್ಪಾಟ್ ಬೆಳ್ಳಿ, ಚಿನ್ನಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ. ಸುಮಾರು 1% ಏರಿಕೆಯಾಗಿ ಪ್ರತೀ ಔನ್ಸ್ಗೆ $81.05 ಸುತ್ತಮತ್ತ ವಹಿವಾಟು ನಡೆಸುತ್ತಿದೆ.
Mar 17, 2026, 3:23 pm IST
ಇಂದಿನ ಚಿನ್ನ-ಬೆಳ್ಳಿ ದರ ಲೈವ್ ಅಪ್ಡೇಟ್: ಇರಾನ್ ಯುದ್ಧದ ಭೀತಿ ನಡುವೆ ಹೂಡಿಕೆಗೆ ಚಿನ್ನ ಬೆಸ್ಟ್ ಅಥವಾ ಬೆಳ್ಳಿಯೇ?
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿಯಿಂದಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಚಿನ್ನವನ್ನು ಖರೀದಿಸುತ್ತಿರುವುದು ಮತ್ತು ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೋದಲ್ಲಿ ವೈವಿಧ್ಯತೆ ಬಯಸುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ, ಕೈಗಾರಿಕಾ ವಲಯದಲ್ಲಿ ಇದಕ್ಕೆ ಬೇಡಿಕೆ ಇದ್ದರೂ ಸಹ, ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಂಡುಬರಬಹುದು ಎಂದು ಪಿಎಲ್ ವೆಲ್ತ್ ವರದಿ ತಿಳಿಸಿದೆ.
Mar 17, 2026, 3:22 pm IST
ಇಂದಿನ ಬೆಳ್ಳಿ ದರ ಲೈವ್ ಅಪ್ಡೇಟ್ಸ್: ನಿಮ್ಮ ನಗರದಲ್ಲಿ 1 ಕೆಜಿ ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿ ಪರಿಶೀಲಿಸಿ
| City | Silver Price Today (per kg) |
| Chennai | ₹2,80,000 |
| Mumbai | ₹2,75,000 |
| Delhi | ₹2,75,000 |
| Kolkata | ₹2,75,000 |
| Bangalore | ₹2,75,000 |
| Hyderabad | ₹2,80,000 |
| Kerala | ₹2,80,000 |
| Pune | ₹2,75,000 |
| Ahmedabad | ₹2,75,000 |
| Nashik | ₹2,75,000 |
ಬೆಳ್ಳಿ ದರದಲ್ಲಿ ಇಂದು ಏರಿಕೆ ಕಂಡುಬಂದಿದೆ. ಚೆನ್ನೈ, ಹೈದರಾಬಾದ್ ಮತ್ತು ಕೇರಳದಲ್ಲಿ 1 ಕೆಜಿ ಬೆಳ್ಳಿ ಬೆಲೆ 2.80 ಲಕ್ಷ ರೂಪಾಯಿ ತಲುಪುವ ಮೂಲಕ ದುಬಾರಿಯಾಗಿದೆ. ಆದರೆ, ಬೆಂಗಳೂರು, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಪ್ರಮುಖ ಮೆಟ್ರೋ ನಗರಗಳಲ್ಲಿ ಬೆಳ್ಳಿ ಬೆಲೆ 5,000 ರೂಪಾಯಿಗಳಷ್ಟು ಅಗ್ಗವಾಗಿದ್ದು, ಪ್ರತಿ ಕೆಜಿಗೆ 2.75 ಲಕ್ಷ ರೂಪಾಯಿ ದಾಖಲಾಗಿದೆ.
Mar 17, 2026, 2:42 pm IST
ಬೆಳ್ಳಿ ದರ ಏರಿಕೆ: ಹಿಂದೂಸ್ತಾನ್ ಜಿಂಕ್ ಷೇರುಗಳಲ್ಲಿ ಭರ್ಜರಿ ಜಿಗಿತ
ಭಾರತದಲ್ಲಿ ಬೆಳ್ಳಿ ಬೆಲೆ ಏರಿಕೆಯಾದ ಬೆನ್ನಲ್ಲೇ, ವೇದಾಂತ ಲಿಮಿಟೆಡ್ ಒಡೆತನದ ಹಿಂದೂಸ್ತಾನ್ ಜಿಂಕ್ (HZL) ಷೇರುಗಳು ಮಂಗಳವಾರ ಶೇ. 3ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಈ ವರ್ಷದ ಜನವರಿ ಅಂತ್ಯದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದರಿಂದ, 2026ರಲ್ಲಿ ಇದುವರೆಗೆ HZL ಷೇರುಗಳು ಮಂದಗತಿಯಲ್ಲಿದ್ದವು. MCX ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಸುಮಾರು 4.20 ಲಕ್ಷ ರೂಪಾಯಿಗಳಿಂದ 2.50 ಲಕ್ಷ ರೂಪಾಯಿ ಆಸುಪಾಸಿಗೆ ಇಳಿಕೆಯಾಗಿತ್ತು. ಆದರೆ, ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆಗಳಿಂದಾಗಿ ಮಾರ್ಚ್ 17 ರಂದು ಬೆಳ್ಳಿ ಬೆಲೆ ಮತ್ತೆ ಏರಿಕೆ ಕಂಡಿದೆ. ಭಾರತದ ಪ್ರಮುಖ ಬೆಳ್ಳಿ ಉತ್ಪಾದನಾ ಕಂಪನಿಗಳಲ್ಲಿ ಹಿಂದೂಸ್ತಾನ್ ಜಿಂಕ್ ಕೂಡ ಒಂದು.
Mar 17, 2026, 10:40 am IST
Gold-Silver Rate Live Updates: MCX ಚಿನ್ನದ ಬೆಲೆ ದಿಢೀರ್ ಏರಿಕೆ
Multi Commodity Exchange (MCX) ನಲ್ಲಿ ಚಿನ್ನದ ಫ್ಯೂಚರ್ಸ್ ಬೆಲೆ 0.1% ಏರಿಕೆ ಕಂಡಿದೆ. ಇದರಿಂದಾಗಿ ₹154 ಹೆಚ್ಚಾಗಿ, ಪ್ರತಿ 10 ಗ್ರಾಂಗೆ ₹1,55,890ಕ್ಕೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ, ಚಿನ್ನದ ಬೆಲೆ ₹1,55,736 ಪ್ರತಿ 10 ಗ್ರಾಂ ಮಟ್ಟದಲ್ಲಿ ಮುಕ್ತಾಯವಾಗಿತ್ತು.
Mar 17, 2026, 10:39 am IST
ಇಂದಿನ ಚಿನ್ನದ ದರ ಲೈವ್ ಅಪ್ಡೇಟ್: ಸ್ಪಾಟ್ ಗೋಲ್ಡ್ ಬೆಲೆ ಹೇಗಿರಲಿದೆ?
ಕಾಮೆಕ್ಸ್ (COMEX) ಚಿನ್ನವು ಪ್ರಸ್ತುತ ,990–,040 ರ ಸಪೋರ್ಟ್ ಬ್ಯಾಂಡ್ನಲ್ಲಿ ವಹಿವಾಟು ನಡೆಸುತ್ತಿದೆ. ದಾಖಲೆಯ ಮಟ್ಟ ತಲುಪಿದ ನಂತರ, ಚಿನ್ನವು ಅಲ್ಪಾವಧಿಯ ತಿದ್ದುಪಡಿ (correction) ಹಂತಕ್ಕೆ ಪ್ರವೇಶಿಸಿದೆ. ಪ್ರಮುಖ ಮೂವಿಂಗ್ ಅವರೇಜ್ಗಳಿಗಿಂತ ಬೆಲೆ ಕುಸಿದಿರುವುದು ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿನ ಹಿನ್ನಡೆಯನ್ನು ಸೂಚಿಸುತ್ತಿದೆ. ,950–,000 ವಲಯದಲ್ಲಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಒಂದು ವೇಳೆ ಬೆಲೆ ಈ ಮಟ್ಟಕ್ಕಿಂತ ಕೆಳಗಿಳಿದರೆ, ,850–,900 ವರೆಗೂ ಕುಸಿತ ಮುಂದುವರಿಯಬಹುದು. ಚಿನ್ನದ ಬೆಲೆ ,000 ಮಟ್ಟಕ್ಕಿಂತ ಮೇಲಿದ್ದರೆ, ಮಾರುಕಟ್ಟೆಯಲ್ಲಿ ಏರಿಕೆಯ ಟ್ರೆಂಡ್ ಮುಂದುವರಿಯಲಿದೆ. ಬೆಲೆ ಮತ್ತೆ ,200–,250 ಮಟ್ಟಕ್ಕೆ ಏರಬೇಕಾದರೆ, ,100–,150 ರ ಪ್ರತಿರೋಧವನ್ನು ದಾಟಬೇಕಾಗುತ್ತದೆ ಎಂದು ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್ ತಿಳಿಸಿದ್ದಾರೆ.
Mar 17, 2026, 10:38 am IST
ಇಂದಿನ ಚಿನ್ನದ ದರ ಲೈವ್ ಅಪ್ಡೇಟ್: ಎಂಸಿಎಕ್ಸ್ ಚಿನ್ನದ ಬೆಲೆ ಹೇಗಿರಲಿದೆ? ಇಲ್ಲಿದೆ ಮಾಹಿತಿ
ಎಂಸಿಎಕ್ಸ್ (MCX) ಚಿನ್ನದ ಫ್ಯೂಚರ್ಸ್ ಸದ್ಯ ₹1,56,500 ರಿಂದ ₹1,57,500 ರ ಆಸುಪಾಸಿನಲ್ಲಿದೆ. ಇದು ಮಾರುಕಟ್ಟೆಯಲ್ಲಿ ಸ್ಥಿರತೆ ಅಥವಾ ಅಲ್ಪ ಪ್ರಮಾಣದ ಲಾಭಾಂಶ ನಗದೀಕರಣದ (profit booking) ಸೂಚನೆಯಾಗಿದೆ. ₹1,55,000 ರಿಂದ ₹1,56,000 ಮಟ್ಟದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ಇದು ಪ್ರಮುಖ ಬೆಂಬಲ ಬೆಲೆಯಾಗಿ (support base) ಮುಂದುವರಿದಿದೆ. ಬೆಲೆಗಳು ಈ ಮಟ್ಟಕ್ಕಿಂತ ಮೇಲಿದ್ದರೆ, ಮಧ್ಯಮ ಅವಧಿಯಲ್ಲಿ ಚಿನ್ನದ ದರ ಏರಿಕೆಯ ಹಾದಿಯಲ್ಲೇ ಇರಲಿದೆ. ಒಂದು ವೇಳೆ ಬೆಲೆ ₹1,59,000 ದಾಟಿದರೆ, ಅದು ₹1,63,000 ರಿಂದ ₹1,65,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್. ತಿಳಿಸಿದ್ದಾರೆ.
Mar 17, 2026, 10:37 am IST
ಇಂದಿನ ಚಿನ್ನದ ದರ ಲೈವ್ ಅಪ್ಡೇಟ್: ಬೆಳ್ಳಿ ಬೆಲೆ ಹೇಗಿರಲಿದೆ? ಇಲ್ಲಿದೆ ತಜ್ಞರ ಮುನ್ಸೂಚನೆ
ಇತ್ತೀಚಿನ ಕುಸಿತದ ಬಳಿಕ ಚೇತರಿಕೆ ಕಂಡಿರುವ ಕಾಮೆಕ್ಸ್ (COMEX) ಬೆಳ್ಳಿಯು ಸದ್ಯ – ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ಏರಿಕೆಯ ಟ್ರೆಂಡ್ ಹಾಗೆಯೇ ಇದ್ದರೂ, ಇತ್ತೀಚಿನ ಬೆಲೆ ಇಳಿಕೆಯಿಂದಾಗಿ ಅಲ್ಪಾವಧಿಯಲ್ಲಿ ಸ್ವಲ್ಪ ಮಟ್ಟಿನ ಮಂದಗತಿ ಕಂಡುಬಂದಿದೆ. ಸದ್ಯಕ್ಕೆ – ಮಟ್ಟದಲ್ಲಿ ಬಲವಾದ ಬೆಂಬಲ (Support) ಇದ್ದು, ಒಂದು ವೇಳೆ ಬೆಲೆ ದಾಟಿದರೆ ಮತ್ತೆ – ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಪಾವಧಿಯ ಏರಿಳಿತಗಳ ಹೊರತಾಗಿಯೂ, ಬೇಡಿಕೆ ಮತ್ತು ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಬೆಳ್ಳಿ ಬೆಲೆ ಆಶಾದಾಯಕವಾಗಿದೆ ಎಂದು ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್. ಅಭಿಪ್ರಾಯಪಟ್ಟಿದ್ದಾರೆ.
Mar 17, 2026, 10:36 am IST
ಇಂದಿನ ಬೆಳ್ಳಿ ದರ ಲೈವ್ ಅಪ್ಡೇಟ್: ಹೇಗಿರಲಿದೆ MCX ಬೆಳ್ಳಿ ಬೆಲೆ? ಇಲ್ಲಿದೆ ತಜ್ಞರ ಮುನ್ಸೂಚನೆ
MCX ಬೆಳ್ಳಿ ಫ್ಯೂಚರ್ಸ್ ಪ್ರಸ್ತುತ ₹2,58,000 ರಿಂದ ₹2,62,000 ಶ್ರೇಣಿಯ ಮೇಲೆ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆಯ ಒಟ್ಟಾರೆ ಟ್ರೆಂಡ್ ಏರಿಕೆಯ ಹಾದಿಯಲ್ಲಿದ್ದರೂ (bullish), ಇತ್ತೀಚಿನ ಬೆಲೆ ಇಳಿಕೆಯು ಅಲ್ಪಾವಧಿಯ ವೇಗಕ್ಕೆ ಸ್ವಲ್ಪ ಅಡ್ಡಿಪಡಿಸಿದೆ. ₹2,47,000 ರಿಂದ ₹2,50,000 ಮಟ್ಟವು ಪ್ರಮುಖ ಸಪೋರ್ಟ್ ಆಗಿದ್ದು, ಏರಿಕೆಯ ಟ್ರೆಂಡ್ ಮುಂದುವರಿಯಲು ಬೆಲೆ ಈ ಮಟ್ಟಕ್ಕಿಂತ ಮೇಲಿರುವುದು ಅತ್ಯಗತ್ಯ. ಒಂದು ವೇಳೆ ಬೆಲೆ ₹2,65,000 ದಾಟಿ ಸ್ಥಿರವಾಗಿದ್ದರೆ, ಅದು ₹2,75,000 ರಿಂದ ₹2,80,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಸಪೋರ್ಟ್ ಮಟ್ಟಕ್ಕಿಂತ ಕೆಳಕ್ಕೆ ಕುಸಿದರೆ ಮಾರಾಟದ ಒತ್ತಡ ಹೆಚ್ಚಾಗಬಹುದು ಎಂದು ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್ ತಿಳಿಸಿದ್ದಾರೆ.
Mar 17, 2026, 10:33 am IST
Gold-Silver Rate Live Updates: MCX ಚಿನ್ನದ ಬೆಲೆ ದಿಢೀರ್ ಏರಿಕೆ
Multi Commodity Exchange (MCX) ನಲ್ಲಿ ಚಿನ್ನದ ಫ್ಯೂಚರ್ಸ್ ಬೆಲೆ 0.1% ಏರಿಕೆ ಕಂಡಿದೆ. ಇದರಿಂದಾಗಿ ₹154 ಹೆಚ್ಚಾಗಿ, ಪ್ರತಿ 10 ಗ್ರಾಂಗೆ ₹1,55,890ಕ್ಕೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ, ಚಿನ್ನದ ಬೆಲೆ ₹1,55,736 ಪ್ರತಿ 10 ಗ್ರಾಂ ಮಟ್ಟದಲ್ಲಿ ಮುಕ್ತಾಯವಾಗಿತ್ತು.
ಮಧ್ಯಪ್ರಾಚ್ಯದ ಸಂಘರ್ಷವು ಹಣದುಬ್ಬರ ಮತ್ತು ಹಣಕಾಸು ನೀತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವ್ಯಾಪಾರಿಗಳು ಗಮನಿಸುತ್ತಲೇ ಇದ್ದಾರೆ. ಈ ಮಧ್ಯೆ ಅಮೆರಿಕ-ಇಸ್ರೇಲ್-ಇರಾನ್ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಾಳಿ ಪ್ರತಿದಾಳಿಗಳು ನಡೆಯುತ್ತಲೇ ಇದೆ.
ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ, ಸಂಘರ್ಷದಿಂದಾಗಿ ಇಂಧನ ಬೆಲೆ ಏರಿಕೆ ಮಾಡಿದೆ. ನಿರಂತರ ಏರಿಕೆಯಿಂದಾಗಿ ಹಣದಬ್ಬರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಮಧ್ಯೆ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಇತರ ರಾಷ್ಟ್ರಗಳಿಂದ ಸಹಾಯಕ್ಕಾಗಿ ಅಧ್ಯಕ್ಷ ಟ್ರಂಪ್ ತಮ್ಮ ಕರೆಯನ್ನು ಮತ್ತೆ ಹೇಳಿದರು.
Share This Article
Story first published: Tuesday, March 17, 2026, 10:26 [IST]