ಭಾರತದಲ್ಲಿ ಚಿನ್ನದ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿದ್ದರೆ, ಷೇರು ಮಾರುಕಟ್ಟೆಯು ಕಳೆದ ವರ್ಷದಿಂದ ನಿರಂತರ ಕುಸಿತವನ್ನು ಅನುಭವಿಸುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರು ಕಂಗಾಲಾಗಿದ್ದರೆ, ಚಿನ್ನದಲ್ಲಿ ಹೂಡಿಕೆ ಮಾಡಿದವರು ಮಾತ್ರ ನಿರಾಳರಾಗಿದ್ದಾರೆ. ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದರು ಅದನ್ನು ಕೊಂಡುಕೊಳ್ಳುವವರು ಮಾತ್ರ ಹಿಂದೆ ಬಿದ್ದಿಲ್ಲ.

ಫೆ.18 ರ ಮಂಗಳವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 86,950 ರೂಪಾಯಿಗಳಾಗಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 79,700 ರೂಪಾಯಿಗಳು. ಸೋಮವಾರಕ್ಕೆ ಹೋಲಿಸಿದರೆ, 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿಗಳ ಏರಿಕೆ ಕಂಡುಬಂದಿದೆ. ಕಳೆದ ವಾರ ಶುಕ್ರವಾರ, ಶೇಕಡಾ 99.99 ರಷ್ಟು ಶುದ್ಧತೆಯ ಚಿನ್ನದ ಬೆಲೆ 1,300 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 89,400 ರೂ.ಗಳಿಗೆ ತಲುಪಿತ್ತು.
ಸುಮಾರು 10 ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ?
ಸುಮಾರು 10 ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ಎಂದು ತಿಳಿದ್ರೆ ನೀವು ಆಶ್ಚರ್ಯಚಕಿತರಾಗಬಹುದು. ವಿಶ್ವ ಚಿನ್ನ ಮಂಡಳಿಯ ಅಂಕಿಅಂಶಗಳ ಪ್ರಕಾರ, ಫೆಬ್ರವರಿ 19, 2015 ರಂದು ಚಿನ್ನದ ಬೆಲೆ 10 ಗ್ರಾಂಗೆ 24,150 ರೂ. ಆಗಿತ್ತು. ಫೆಬ್ರವರಿ 10, 2025 ರಂದು ಅದರ ಬೆಲೆ 10 ಗ್ರಾಂಗೆ 81,803 ರೂ.ಗಳಷ್ಟಿತ್ತು. ಅಂದರೆ, 10 ವರ್ಷಗಳಲ್ಲಿ ಚಿನ್ನದ ಬೆಲೆ ಸುಮಾರು 3.4 ಪಟ್ಟು ಹೆಚ್ಚಾಗಿದೆ.
ಮತ್ತೊಂದೆಡೆ, ನಾವು ಷೇರು ಮಾರುಕಟ್ಟೆಯ ಬಗ್ಗೆ ಮಾತನಾಡಿದರೆ, ಫೆಬ್ರವರಿ 19 ರಂದು ಬಿಎಸ್‌ಇ ಸೆನ್ಸೆಕ್ಸ್ 29,462.27 ಪಾಯಿಂಟ್‌ಗಳಲ್ಲಿ ಮುಕ್ತಾಯವಾಯಿತು. ಆದರೆ ಫೆಬ್ರವರಿ 10, 2025 ರಂದು ಅದು 77,311.8 ಅಂಕಗಳಲ್ಲಿ ಮುಕ್ತಾಯವಾಯಿತು. ಅಂದರೆ, 10 ವರ್ಷಗಳಲ್ಲಿ ಷೇರು ಮಾರುಕಟ್ಟೆಯು ಸುಮಾರು 2.6 ಪಟ್ಟು ಹೆಚ್ಚಾಗಿದೆ.
ಕಳೆದ 10 ವರ್ಷಗಳಲ್ಲಿ ಯಾರು ಹೆಚ್ಚು ಆದಾಯವನ್ನು ನೀಡಿದ್ದಾರೆ?
ಕಳೆದ 10 ವರ್ಷಗಳಲ್ಲಿ ಚಿನ್ನ ಮತ್ತು ಸೆನ್ಸೆಕ್ಸ್‌ನ ದತ್ತಾಂಶಗಳನ್ನು ನಾವು ವಿಶ್ಲೇಷಿಸಿ ನೋಡುವುದಾದರೆ, ಅದು ಬಹಳಷ್ಟು ಕುತೂಹಕಾರಿ ಸಂಗತಿಗಳನ್ನು ಹೊರಗೆಡವುತ್ತದೆ. ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆ ಶೇ. 237.5 ರಷ್ಟು ಹೆಚ್ಚಾಗಿದೆ. ಅಂದರೆ, ಚಿನ್ನವು 10 ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ. 237.5 ರಷ್ಟು ಭಾರಿ ಲಾಭವನ್ನು ನೀಡಿದೆ.
ಮತ್ತೊಂದೆಡೆ, ಶೇರು ಮಾರುಕಟ್ಟೆ ಬಗ್ಗೆ ನೋಡುವುದಾದರೆ ಕಳೆದ 10 ವರ್ಷಗಳಲ್ಲಿ ಸೆನ್ಸೆಕ್ಸ್ ಶೇ. 162.40 ರಷ್ಟು ಏರಿಕೆ ಕಂಡಿದೆ. ಅಂದರೆ, ಕಳೆದ 10 ವರ್ಷಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಶೇ.162.40 ರಷ್ಟು ಲಾಭವನ್ನು ನೀಡಿದೆ. ಕಳೆದ 10 ವರ್ಷಗಳಲ್ಲಿ, ಷೇರು ಮಾರುಕಟ್ಟೆಗೆ ಹೋಲಿಸಿದರೆ ಚಿನ್ನವು ಅಪಾರ ಪ್ರಮಾಣದಲ್ಲಿ ಆದಾಯವನ್ನು ನೀಡಿದೆ ಎಂಬುದು ದತ್ತಾಂಶದಿಂದ ಸ್ಪಷ್ಟವಾಗಿದೆ.
ಚಿನ್ನವು ಒಂದು ಸಾರ್ವತ್ರಿಕ ಮೌಲ್ಯವನ್ನು ಹೊಂದಿದ್ದು, ಅಂದರೆ ಅದು ಪ್ರಪಂಚದಾದ್ಯಂತ ಜನರು ಮತ್ತು ಸರ್ಕಾರಗಳಿಂದ ಮೌಲ್ಯಯುತವೆಂದು ಪರಿಗಣಿಸಲ್ಪಡುತ್ತದೆ. ಆದರೆ ಷೇರುಗಳು ಅದಕ್ಕಿಂತ ಭಿನ್ನವಾಗಿದೆ, ಅವು ಕೇವಲ ಒಂದು ನಿರ್ದಿಷ್ಟ ಕಂಪನಿ ಅಥವಾ ದೇಶದಲ್ಲಿ ಮೌಲ್ಯಯುತವಾಗಿರುತ್ತವೆ. ಸಾರ್ವತ್ರಿಕ ಮೌಲ್ಯವನ್ನು ಹೊಂದಿರುವುದರಿಂದ, ಚಿನ್ನವು ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ತನ್ನ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ
ಈ ಅಂಕಿಅಂಶಗಳು ಚಿನ್ನವು ಷೇರು ಮಾರುಕಟ್ಟೆಗಿಂತ ಹೆಚ್ಚು ಸ್ಥಿರವಾದ ಹೂಡಿಕೆಯಾಗಿದೆ ಎಂದು ಸೂಚಿಸುತ್ತವೆ. ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆ 3.4 ಪಟ್ಟು ಹೆಚ್ಚಾಗಿದೆ, ಆದರೆ ಷೇರು ಮಾರುಕಟ್ಟೆಯು 2.6 ಪಟ್ಟು ಹೆಚ್ಚಾಗಿದೆ. ಆದರೂ , ಹೂಡಿಕೆ ಮಾಡುವ ಮೊದಲು ನಿಮ್ಮ ಆರ್ಥಿಕ ಗುರಿಗಳನ್ನು ಪರಿಗಣಿಸುವುದು ಮುಖ್ಯ.


Click it and Unblock the Notifications