ಲಕ್ಷ್ಮಿ ವಿಲಾಸ್ ಅರಮನೆ ಭಾರತದ ಇತಿಹಾಸದ ಹೆಮ್ಮೆಯ ಭಾಗವಾಗಿದೆ. ಇದು ವಿಶ್ವದ ಅತಿ ಪ್ರಸಿದ್ದ ಬಕಿಂಗ್‌ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು ಏಷ್ಯಾದ ಸಿರಿವಂತ ಉದ್ಯಮಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಮುಖೇಶ್ ಅಂಬಾನಿ ಒಡೆತನದ "ಆಂಟಿಲಿಯಾ" ಇದರ ಮುಂದೆ ಏನು ಇಲ್ಲ ಅನ್ನಬಹುದು.
ಗಾಯಕ್ವಾಡ್ ರಾಜವಂಶದ ಭವ್ಯವಾದ ವಾಸಗೃಹವಾಗಿರುವ ಲಕ್ಷ್ಮಿ ವಿಲಾಸ್ ಅರಮನೆಯು ಪ್ರಸ್ತುತ ಗಾಯಕ್ವಾಡ್ ವಂಶದ ಉತ್ತರಾಧಿಕಾರಿ ಮತ್ತು ಬರೋಡಾದ ಅಧಿಕೃತ ಮಹಾರಾಜ ಸಮರ್ಜಿತ್ ಗಾಯಕ್ವಾಡ್ ಅವರ ಒಡೆತನದಲ್ಲಿದೆ. ಅವರು ತಮ್ಮ ಪತ್ನಿ ರಾಧಿಕಾರಾಜೇ ಗಾಯಕವಾಡ್ ಮತ್ತು ಇತರ ಸಂಬಂಧಿಕರೊಂದಿಗೆ ಈ ರಾಜಮನೆಯಲ್ಲಿ ವಾಸಿಸುತ್ತಿದ್ದಾರೆ. ಲಕ್ಷ್ಮೀ ವಿಲಾಸ ಅರಮನೆಯು ನಮ್ಮ ದೇಶದ ರಾಜಪರಂಪರೆಯ ಹೆಮ್ಮೆಯ ಸಂಕೇತವಾಗಿದೆ.

ಸಮರ್ಜಿತ್ ಸಿಂಹ ಗಾಯಕ್ವಾಡ್ ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಹಾಗೂ ಶುಭಾಂಗಿ ನಿರಾಜೆ ಅವರ ಏಕೈಕ ಪುತ್ರ. 2012ರ ಮೇ ನಲ್ಲಿ ಅವರ ತಂದೆಯ ಮರಣದ ನಂತರ ಸಮರ್ಜಿತ್ಸಿಂಹ ಗಾಯಕ್ವಾಡ್ ಅವರು ಮಹಾರಾಜನ ಪಟ್ಟ ಅಲಂಕರಿಸಿದ್ದರು. ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರು ವಿಶ್ವದ ಅತಿದೊಡ್ಡ ಖಾಸಗಿ ನಿವಾಸ ಎಂದು ಖ್ಯಾತಿ ಪಡೆದ ಈ ಅರಮನೆಯ ಮಾಲೀಕರಾಗಿದ್ದಾರೆ. ಇವರು ವಾಂಕನೇರ್ ರಾಜ್ಯದ ರಾಜಮನೆತನದವರಾದ ರಾಧಿಕಾರಾಜೆ ಅವರನ್ನು ಸಮರ್ಜಿತ್ ಸಿಂಹ ಗಾಯಕ್ವಾಡ್ ವಿವಾಹವಾಗಿದ್ದಾರೆ
ಮಹಾರಾಣಿ ರಾಧಿಕಾರಾಜೆ ಹಿನ್ನಲೆ ಮತ್ತು ವಿದ್ಯಾಭ್ಯಾಸ
ಜುಲೈ 19, 1978 ರಂದು ವಂಕನೇರ್ ರಾಜಮನೆತನದಲ್ಲಿ ಜನಿಸಿದ ಮಹಾರಾಣಿ ರಾಧಿಕರಾಜೆ ವಾಂಕನೇರ್ ರಾಜ್ಯದ ರಾಜಮನೆತನ ಡಾ. ಎಂ.ಕೆ. ರಂಜಿತ್‌ಸಿನ್ಹ್ ಝಾಲಾ ಅವರ ಪುತ್ರಿಯಾಗಿದ್ದಾರೆ. ಆದರೆ ಇವರ ತಂದೆ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ತಮ್ಮ ರಾಜಮನೆತನವನ್ನು ತ್ಯಜಿಸಿದ್ದರು. ಮಹಾರಾಣಿ ಕೂಡ ತಂದೆಯಿಂದ ಸ್ಪೂರ್ತಿ ಪಡೆದು ಅನೇಕ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ವಿದ್ಯಾಭ್ಯಾಸದ ಬಗ್ಗೆ ನೋಡುವುದಾದರೆ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ, ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್ (LSR) ನಿಂದ ಮಧ್ಯಕಾಲೀನ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
2002 ರಲ್ಲಿ, ಬರೋಡಾದ ಮಹಾರಾಜ, ಕ್ರಿಕೆಟಿಗ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದು ಈ ದಂಪತಿಗಳಿಗೆ ರಾಜಕುಮಾರಿ ಪದ್ಮಜಾರಾಜೆ ಮತ್ತು ರಾಜಕುಮಾರಿ ನಾರಾಯಣರಾಜೆ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ರಾಧಿಕರಾಜೆ ಗಾಯಕ್ವಾಡ್ ಮತ್ತು ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರ ಸಂಪತ್ತಿನ ಬಗ್ಗೆ ಯಾವುದೇ ಸಾರ್ವಜನಿಕ ಮಾಹಿತಿ ಲಭ್ಯವಿಲ್ಲದಿದ್ದರೂ, ವಿವಿಧ ವರದಿಗಳು ದೇಶಾದ್ಯಂತ ಕುಟುಂಬದ ಒಡೆತನದ ವ್ಯಾಪಕ ಶ್ರೇಣಿಯ ಆಸ್ತಿಗಳ ಆಧಾರದ ಮೇಲೆ ಹಲವಾರು ವರದಿಗಳು ರಾಯಲ್ ದಂಪತಿಗಳ ನಿವ್ವಳ ಮೌಲ್ಯವು ಸರಿಸುಮಾರು ರೂ 20,000 ಕೋಟಿ ಎಂದು ಅಂದಾಜಿಸಲಾಗಿದೆ.
ಇವರು ನೆಲೆಸಿರುವ ಲಕ್ಷ್ಮಿ ವಿಲಾಸ್ ಅರಮನೆಯು Housing.com ಪ್ರಕಾರ, 3,04,92,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಆದರೆ ಮುಕೇಶ್ ಅಂಬಾನಿಯ ಆಂಟಿಲಿಯಾ 48,7800 ಚದರ ಅಡಿ ಪ್ರದೇಶದಲ್ಲಿ ಇದೆ. ಲಕ್ಷ್ಮಿ ವಿಲಾಸ್ ಅರಮನೆಯು 170 ಕೊಠಡಿಗಳನ್ನು ಹೊಂದಿದೆ. ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯು 828,821 ಚದರ ಅಡಿಗಳನ್ನು ಒಳಗೊಂಡಿದೆ. ಲಕ್ಷ್ಮಿ ವಿಲಾಸ್ ಅರಮನೆಯನ್ನು ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರು 1890ರಲ್ಲಿ ನಿರ್ಮಿಸಿದ್ದಾರೆ. ಐಷಾರಾಮಿ ಅರಮನೆಯು ಗಾಲ್ಫ್ ಕೋರ್ಸ್ ಅನ್ನು ಕೂಡ ಹೊಂದಿದೆ. ಅರಮನೆಯ ಕೆಲವು ಭಾಗಗಳನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇದರೊಳಗೆ ಪ್ರವೇಶಕ್ಕಾಗಿ ಭಾರತೀಯ ಪ್ರವಾಸಿಗರು ತಲಾ 250 ರೂಪಾಯಿ ಟಿಕೇಟು ಖರೀದಿಸಬೇಕು. ತಿಂಗಳಿಗೆ ಇಲ್ಲಿಂದಲೇ ಸುಮಾರು 20 ಲಕ್ಷ ಆದಾಯ ಬರುತ್ತದೆ!


Click it and Unblock the Notifications