ಇಪಿಎಫ್‌ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ, ಇಲ್ಲಿದೆ ವಿವರ

ಬೆಂಗಳೂರು, ಮಾರ್ಚ್‌ 26: ಕೆಲವರಿಗೆ ಕೂತು ತಿಂದರೂ ದುಡ್ಡು ಕರಗೋದಿಲ್ಲ, ಆದರೆ ಬಡವನಿಗೆ ದುಡಿದು ಬರದೇ ಇದ್ದರೆ ಆ ದಿನ ಒಂದು ಹೊತ್ತಿನ ಗಂಜಿ ಕೂಡ ಸಿಗುವುದಿಲ್ಲ. ಹೀಗೆ ಶ್ರಮ ಜೀವಿಗಳು ಕಷ್ಟಪಟ್ಟು ತಮ್ಮ ರಕ್ತ ಬಸಿದು, ಬೆವರು ಹರಿಸುತ್ತಾ ಒಂದೊಂದು ರೂಪಾಯಿ ಕೂಡಿ ಇಡುತ್ತಾರೆ. ಅದರಲ್ಲೂ ಪ್ರತಿ ನೌಕರ ಕೂಡ ತನ್ನ ನೌಕರರ ಭವಿಷ್ಯ ನಿಧಿ ಎಂದರೆ ಇಪಿಎಫ್‌ಒ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಈಗ ಭರ್ಜರಿ ಸುದ್ದಿಯು ಹೊರಬಿದ್ದಿದೆ.

ಅಷ್ಟಕ್ಕೂ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2024 ರ ಜನವರಿಯಲ್ಲಿ 16.02 ಲಕ್ಷ ಚಂದಾದಾರರು ಸೇರ್ಪಡೆ ಆಗಿದ್ದಾರೆ. ಜನವರಿ ತಿಂಗಳಲ್ಲೇ, ಸುಮಾರು 8.08 ಲಕ್ಷ ಸದಸ್ಯರು ಮೊದಲ ಬಾರಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇದೀಗ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಮೂಲಕ ಭಾರತದ ಇಪಿಎಫ್‌ಒ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ, ಸದ್ದು ಕೂಡ ಮಾಡಿದೆ. ಹಾಗಾದರೆ, ಈಗ ಇಪಿಎಫ್‌ಒಗೆ ಸೇರ್ಪಡೆ ಆಗಿರುವವರ ವಯಸ್ಸು ಎಷ್ಟಿರಬಹುದು ಎಂಬ ಬಗ್ಗೆ ಮಾಹಿತಿ ನಿಮಗೆ ತಿಳಿದಿದೆಯೇ?

ಇಪಿಎಫ್‌ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ

ಯುವಕರಿಗೆ ಹೆಚ್ಚಿನ ಉದ್ಯೋಗ ಸಿಕ್ಕಿದೆ!

ಈಗ 18ರಿಂದ 25 ರ ವಯೋಮಾನದವರ ನೋಂದಣಿಯು, ಸೇರ್ಪಡೆಗೊಂಡ ಹೊಸ ಸದಸ್ಯರಲ್ಲಿ ಶೇ 56 ರಷ್ಟು ಇದೆ. ಈ ಮೂಲಕ ಹೆಚ್ಚಿನ ಯುವ ಜನರು ಕೆಲಸಕ್ಕೆ ಸೇರ್ಪಡೆ ಆಗುತ್ತಿರುವುದು ಈ ಅಂಕಿ & ಅಂಶದಿಂದ ಗೊತ್ತಾಗುತ್ತದೆ. ಅಂದಾಜು 12.17 ಲಕ್ಷ ಸದಸ್ಯರು 'EPFO' ದಿಂದಲೇ ಹೊರ ನಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಂತರ ಅವರು, ಮರು ಸೇಪರ್ಡೆ ಆಗಿದ್ದಾರೆ ಎಂದು ವೇತನದಾರರ ಅಂಕಿ & ಅಂಶ ಮಾಹಿತಿ ತಿಳಿಸಿದೆ. 8.08 ಲಕ್ಷ ಹೊಸ ಸದಸ್ಯರ ಪೈಕಿ ಒಟ್ಟು 2.05 ಲಕ್ಷ ಮಹಿಳೆಯರು ಇದ್ದಾರೆ ಎಂಬುದು ಮತ್ತೊಂದು ಪ್ರಮುಖ ವಿಚಾರವಾಗಿದೆ.

ಕೇಂದ್ರ ಸರ್ಕಾರದಿಂದ ಬೆಂಬಲ

ಮತ್ತೊಂದು ಕಡೆ ಉದ್ಯಮವಾರು ಮಾಸಿಕ ಅಂಕಿ ಅಂಶ ತಯಾರಿಕೆ, ಮಾರುಕಟ್ಟೆ ಸೇವೆ ಸೇರಿದಂತೆ, ಆಸ್ಪತ್ರೆ ಇತ್ಯಾದಿ ಕೆಲಸದಲ್ಲಿ ತೊಡಗಿದವರ ವಿವರ ನೀಡುತ್ತಿದೆ. ಒಟ್ಟು ಸದಸ್ಯತ್ವದಲ್ಲಿ, ಸುಮಾರು ಶೇ 40.71 ರಷ್ಟು ಪರಿಣತ ಸೇವೆಗಳನ್ನ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಮೂಲಕ ದೇಶ ಹೊಸ ಬದಲಾವಣೆ ಕಾಣುತ್ತಿದ್ದು, ಇಪಿಎಫ್‌ಒ ನೋಂದಣಿ ಸಂಖ್ಯೆ ಕೂಡ ದಾಖಲೆ ಪ್ರಮಾಣದ ಏರಿಕೆಯನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ಕೂಡ ನೌಕರರ ಭವಿಷ್ಯ ನಿಧಿಗೆ ಒತ್ತು ನೀಡುತ್ತಿದೆ.

ನೌಕರರು ಕೂಡ ತಮ್ಮ ಜೀವನ ಪೂರ್ತಿ ದುಡಿದು ಸಂಗ್ರಹಿಸಿದ ಹಣದಿಂದ, ತಮ್ಮ ನಿವೃತ್ತಿಯ ಜೀವನ ಸುಖಕರವಾಗಿ ಇರಲಿ ಎಂದು ಆಶಿಸುತ್ತಿದ್ದಾರೆ. ಅವರ ಈ ಆಶಯಕ್ಕೆ ಇಪಿಎಫ್‌ಒ ಸಂಸ್ಥೆ ಕೂಡ ಬೆಂಬಲ ನೀಡುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ನೌಕರರ ನಿವೃತ್ತಿ ಜೀವನಕ್ಕಾಗಿ, ಅಗತ್ಯ ಇರುವ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+