ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda Airport) ಇತ್ತೀಚೆಗೆ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತೆಗೆದುಕೊಂಡ ಕ್ರಮ ಚಾಲಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಪ್ರಯಾಣಿಕರೂ ಕೂಡಾ ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಆದರೆ ಇದೀಗ ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 1 ರಲ್ಲಿ ಜಾರಿಗೊಳಿಸಲಾದ ಪಿಕ್-ಅಪ್ ಮತ್ತು ಕರ್ಬ್‌ಸೈಡ್ ವ್ಯವಸ್ಥೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೌದು, ಪ್ರಯಾಣಿಕರು ಮತ್ತು ಚಾಲಕರಿಂದ ಇತ್ತೀಚೆಗೆ ಬಂದ ಅಭಿಪ್ರಾಯವನ್ನು ಪರಿಕಣಿಸಿದ ಬಿಐಎಎಲ್ ಉಚಿತ ಪಾರ್ಕಿಂಗ್ ಅವಧಿಯನ್ನು ವಿಸ್ತರಿಸುವ ಮೂಲಕ ನಿಯಮದಲ್ಲಿ ಸಡಿಲಿಕೆ ಮಾಡಿದೆ.
ಏನಿದು ಹೊಸ ನಿಯಮ?
ಡಿಸೆಂಬರ್ 13 ರಂದು BIAL ಏರ್‌ಪೋರ್ಟ್‌ನಲ್ಲಿ ಹೊಸ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರುತ್ತೆ. ಅಂದರೆ, ಟರ್ಮಿನಲ್ 1 ರಲ್ಲಿ ಜಾರಿಗೆ ಬಂದ ಹೊಸ ಪಿಕಪ್ ನಿಯಮಗಳ ಪ್ರಕಾರ, ಕಮರ್ಷಿಯಲ್ ವಾಹನಗಳು ಏರ್‌ಪೋರ್ಟ್‌ನ P3 ಮತ್ತು P4 ನಲ್ಲಿ ಮಾತ್ರ ಕಾಯಬೇಕು. ಅಲ್ಲದೇ ಅಲ್ಲಿ ಚಾಲಕರು ಕೇವಲ 10 ನಿಮಿಷಗಳ ಕಾಲ ಮಾತ್ರ ಉಚಿತವಾಗಿ ಕಾಯಬೇಕು. ಒಂದು ವೇಳೆ ಅವಧಿ ಮೀರಿದ ಶುಲ್ಕ ಪಾವತಿಸಬೇಕಾಗಿತ್ತು. ಆದ್ರೆ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ದೂರನ್ನು ಪರಿಗಣಿಸು ಉಚಿತ ಕಾಯುವ ಸಮಯವನ್ನು 10 ರಿಂದ 15 ನಿಮಿಷಕ್ಕೆ ವಿಸ್ತರಿಸಲಾಗಿದೆ. ಆದರೆ 15 ನಿಮಿಷದ ಬಳಿಕ ಟ್ಯಾಕ್ಸಿ ಚಾಲಕರ ಅರ್ಧ ಗಂಟೆಯ ಸ್ಲಾಟ್‌ಗೆ 100 ರೂ. ಮತ್ತು ಪ್ರತೀ ಹೆಚ್ಚುವರಿ ಗಂಟೆಗೆ 50 ರೂ. ಪಾವತಿಸಬೇಕು. ಪ್ರಸ್ತುತ ಈ ನಿಯಮ ಡಿಸೆಂಬರ್ 26 ರಿಂದ ಜಾರಿಗೆ ಬಂದಿದೆ.
ಚಾಲಕರ ಆಕ್ರೋಶ!
ಇನ್ನು ಕ್ಯಾಬ್, ಟ್ಯಾಕ್ಸಿ ಚಾಲಕರು ಏರ್‌ಪೋರ್ಟ್ ಪಾರ್ಕಿಂಗ್ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ಎರಡು ವಾರಗಳಿಂದ ವ್ಯಾಪಾರವೇ ಕುಸಿದು ಹೋಗಿದೆ ಎಂದು ಹೇಳಿದ್ದಾರೆ. ಇನ್ನು "ಪ್ರಯಾಣಿಕರು P4 ವರೆಗೆ ಲಗೇಜ್‌ನೊಂದಿಗೆ ನಡೆದು ಬರಲು ಬಯಸುವುದಿಲ್ಲ. ಹೊಸ ನಿಯಮಗಳ ಬಗ್ಗೆ ಅರಿವಿಲ್ಲದ ಕಾರಣ, ಪ್ರಯಾಣಿಕರು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ಯಾಬ್ ಬುಕ್ ಮಾಡುತ್ತಾರೆ. P4 ಗೆ ಬರಬೇಕು ಎಂದು ಗೊತ್ತಾದ ತಕ್ಷಣ ಬಿಕ್ ಮಾಡಿದ ಟ್ರಿಪ್ ಕ್ಯಾನ್ಸಲ್ ಮಾಡುತ್ತಾರೆ. ಹೆಚ್ಚಿನ ಚಾಲಕರು ಸದ್ಯ ವಿಮಾನ ನಿಲ್ದಾಣದ ಹೊರಗೆಯೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಟ್ರಿಪ್ ರದ್ದಾದರೆ, ಇಂಧನಕೂಡಾ ವ್ಯರ್ಥವಾಗುತ್ತಿದೆ," ಎಂದು 43 ವರ್ಷದ ಟ್ಯಾಕ್ಸಿ ಚಾಲಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕೆ ಹೊಸ ವ್ಯವಸ್ಥೆ!
ಇನ್ನು P3 ಮತ್ತು P4 ಪಾರ್ಕಿಂಗ್ ಸ್ಥಳ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರ ಇರುವುದರಿಂದ ಪಿಕ್-ಅಪ್ ಪ್ರದೇಶಗಳಿಗೆ ತಲುಪಲು ಅನುಕೂಲವಾಗುವ ದೃಷ್ಟಿಯಿಂದ ಪ್ರತೀ 7 ನಿಮಿಷಕ್ಕೊಮ್ಮೆ ಶಟಲ್ ಬಸ್‌ಗಳು, 6 ಕಾರುಗಳು ಮ್ತು 10 ಬಗ್ಗಿಳ ವ್ಯವಸ್ಥೆಯನ್ನು ವಿಮಾನ ನಿಲ್ದಾಣ ಕಲ್ಪಿಸಿದೆ. ಅದರಲ್ಲೂ ಈ ಬಗ್ಗಿ ಸೇವೆಗಳು ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ, ಮಕ್ಕಳು, ವಿಶೇಷ ಚೇತನರಿಗೆ ವಿಶೇಷವಾಗಿ ನೆರವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications