ನವದೆಹಲಿ: ಭಾರತ ಸರ್ಕಾರ ನವೆಂಬರ್ 21, 2025ರಂದು ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ, ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವ ದೃಷ್ಟಿಯಿಂದ ಹೊಸ ಸಂಹಿತೆಯನ್ನು (Labour Laws) ಜಾರಿಗೆ ತಂದಿದೆ. ಈ ಮೂಲಕ ಹಿಂದಿನ 29 ಕೇಂದ್ರೀಯ ಕಾರ್ಮಿಕ ಕಾನೂನು ನಿಯಮಗಳನ್ನು ರದ್ದು ಮಾಡಿ, ಹೊಸ ಸಂಹಿತೆಗಳನ್ನು ಜಾರಿಗೆ ತಂದಿದೆ. ಜಾಗತಿಕವಾಗಿ ಇದು ಅನುಷ್ಠಾನಗೊಳ್ಳಲಿದ್ದು, ಇದರಿಂದ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ (Central Govt) ನಿರೀಕ್ಷಿಸಿದೆ.

ಒಂದು ವರ್ಷದಲ್ಲಿ ಗ್ರಾಚ್ಯುಟಿ!
ಭಾರತದ ಕಾರ್ಮಿಕ ಕಾನೂನುಗಳ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಶುಕ್ರವಾರ ಹೊಸ ಸಂಹಿತೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಪರ್ಮನೆಂಟ್ ನೌಕರರು ಮಾತ್ರವಲ್ಲದೇ ನಿಗದಿತ ಅವಧಿಯ ಉದ್ಯೋಗಿಗಳು (Fixed Term Employees) ಸಹ ಗ್ರಾಚ್ಯುಟಿ ಪಡೆಯಬಹುದು. ಕೇವಲ ಒಂದು ವರ್ಷದ ಸೇವೆಯ ನಂತರ, ನಿಗದಿತ ಅವಧಿಯ ಉದ್ಯೋಗಿಗಳು ಗ್ರಾಚ್ಯುಟಿ (Gratuity) ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ಹಿಂದಿನ ಕಾನೂನಿನಲ್ಲಿ ಪರ್ಮನೆಂಟ್ ನೌಕರರು ಮಾತ್ರ ಐದು ವರ್ಷಗಳ ಕಾಲ ನಿರಂತ ಸೇವೆ ಸಲ್ಲಿಸಿ ಗ್ರಾಚ್ಯುಟಿ ಪಡೆಯಬೇಕಿತ್ತು. ಆದ್ರೆ ಇನ್ಮೇಲೆ ಒಂದು ಸಂಸ್ಥೆಯಲ್ಲಿ ಒಂದು ವರ್ಷ ಪೂರೈಸಿದ ನಿಗದಿತ ಅವಧಿಯ ನೌಕರರು ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ..
ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಾರ, ಈ ಹೊಸ ಸಂಹಿತೆಯು ಉತ್ತಮ ವೇತನ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರಿಗೆ ಉತ್ತಮ ಆರೋಗ್ಯ ಸಂಬಂಧಿತ ರಕ್ಷಣೆಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಸರ್ಕಾರವು ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ಇದೀಗ ನಾಲ್ಕು ಸರಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ.
ನಿರ್ದಿಷ್ಟ ಅವಧಿಗೆ ನೇಮಕಗೊಂಡ ಅಥವಾ ಕೆಲಸದ ಅವಧಿ ಮುಗಿದ ನಂತರ, ಅಂದರೆ ಅವರ ಕಂಪನಿಯು ನೀಡಿದ ಅವಧಿಯವರೆಗೆ ಕೆಲಸ ಮಾಡುವ ನೌಕರರನ್ನು ನಿಗದಿತ ಅವಧಿಯ ನೌಕರರು ಎಂದು ಪರಿಗಣಿಸಲಾಗುತ್ತದೆ. ಇನ್ನು ಸರ್ಕಾರದ ಹೊಸ ಸಂಹಿತೆ, ಅನೌಪಚಾರಿಕ ಕಾರ್ಮಿಕರು (ಗುತ್ತಿಗೆ ಕೆಲಸ, ಚಿಕ್ಕ ಅಂಗಡಿ, ದಿನಗೂಲಿ, ಸ್ವಯಂ ಉದ್ಯೋಗ), ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಮಹಿಳಾ ನೌಕರರಿಗೂ ಅನ್ವಯಿಸುತ್ತವೆ.
ಮಹತ್ವ ಪಡೆದ ಹೊಸ ಸಂಹಿತೆ!
ಹೊಸ ಸಂಹಿತೆ, ಗ್ರಾಚ್ಯುಟಿ ಅರ್ಹತೆಗೆ ಸಂಬಂಧಿಸಿದ್ದಾಗಿದ್ದು ಅತ್ಯಂತ ಮಹತ್ವ ಪಡೆದಿದೆ. ಇದು ಲಕ್ಷಾಂತರ ನೌಕರರಿಗೆ ಅನುಕೂಲವಾಗಲಿದೆ.
ಗ್ರಾಚ್ಯುಟಿ ಪಾವತಿ ಕಾಯಿದೆ ಅಡಿಯಲ್ಲಿ, ಈ ಮೊದಲು ಪರ್ಮನೆಂಟ್ ನೌಕರರು 5 ವರ್ಷಗಳ ನಿರಂತರ ಸೇವೆಯ ನಂತರ ಮಾತ್ರ ಗ್ರಾಚ್ಯುಟಿಗೆ ಅರ್ಹರಾಗುತ್ತಿದ್ದರು. ಆದರೆ, ಜಾರಿಗೆ ಬಂದ ಹೊಸ ಕಾರ್ಮಿಕ ಸಂಹಿತೆಗಳು ನಿಗದಿತ ಅವಧಿಯವರೆಗೆ ಕೆಲಸ ಮಾಡುವ ನೌಕರರಿಗೂ ಅನುಕೂಲವಾಗಲಿದೆ
ಅಂದರೆ ಇನ್ಮೇಲೆ ನಿಗದಿತ ಅವಧಿಯಲ್ಲಿ ಕೆಲಸ ಮಾಡುವ ನೌಕರರು ಕೇವಲ ಒಂದು ವರ್ಷ ಸೇವೆ ಸಲ್ಲಿಸಿದರೆ ಸಾಕು, ನಂತರ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಈ ಬದಲಾವಣೆಯ ಹಿಂದಿನ ಉದ್ದೇಶವು ಪರ್ಮನೆಂಟ್ ನೌಕರರಿಗೆ ನೀಡುವ ಪ್ರಯೋಜನಗಳನ್ನು ಫಿಕ್ಸೆಡ್ ಟರ್ಮ್ ನೌಕರರು ಕೂಡಾ ಪಡೆಯಬೇಕೆಂಬುದು.
ಹೊಸ ನಿಯಮಗಳ ಅಡಿಯಲ್ಲಿ, ನಿಗದಿತ ಅವಧಿ ನೌಕರರು (Fixed Term Employees) ಸಾಮಾನ್ಯ ಉದ್ಯೋಗಿಗಳಂತೆ ಅದೇ ವೇತನ, ರಜೆ ಸೌಲಭ್ಯಗಳು, ವೈದ್ಯಕೀಯ ಪ್ರಯೋಜನಗಳು ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯುವುದಾಗಿದೆ. ಈ ಬದಲಾವಣೆಗಳು ಗುತ್ತಿಗೆ ನೌಕರರ ಮೇಲಿನ ಅತಿಯಾದ ಅವಲಂಬನೆಯನ್ನು ನಿರುತ್ಸಾಹಗೊಳಿಸಿ, ಕಂಪನಿಗಳಲ್ಲಿ ಪಾರದರ್ಶಕತೆ ಮತ್ತು ನೇರ ನೇಮಕಾತಿಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.
ಗ್ರಾಚ್ಯುಟಿ ಎಂದರೇನು?
ಗ್ರಾಚ್ಯುಟಿ ಎಂದರೆ ದೀರ್ಘಾವಧಿ ಸೇವೆ ಸಲ್ಲಿಸಿದ ಉದ್ಯೋಗಿಗೆ ಉದ್ಯೋಗದಾತ ಅಥವಾ ಒಂದು ಸಂಸ್ಥೆ ನೀಡುವ ಆರ್ಥಿಕ ಪ್ರಯೋಜನ. ಹಿಂದಿನ ಸಂಹಿತೆ ಪ್ರಕಾರ, ಐದು ವರ್ಷಗಳ ಕಡ್ಡಾಯ ಸೇವಾ ಅವಧಿ ಪೂರ್ಣಗೊಂಡ ನಂತರ ಉದ್ಯೋಗಿ ರಿಸೈನ್ ಮಾಡಿದ ನಂತರ, ನಿವೃತ್ತಿಯಾದಾಗ ಅಥವಾ ಸಂಸ್ಥೆಯಿಂದ ಬೇರ್ಪಟ್ಟಾಗ ಈ ಒಟ್ಟು ಮೊತ್ತವನ್ನು ನೀಡಲಾಗುತ್ತಿತ್ತು.
ಆದರೆ ಹೊಸ ಸಂಹಿತೆ ಪ್ರಕಾರ, ನಿಗದಿತ ಅವಧಿಯ ಒಪ್ಪಂದದ ಅಡಿಯಲ್ಲಿರುವ ನೌಕರರು ಇನ್ಮೇಲೆ ಗ್ರಾಚ್ಯುಟಿ ಮೊತ್ತಕ್ಕೆ ದೀರ್ಘಾವಧಿ ಕಾಯಬೇಕಿಲ್ಲ. ಬದಲಾಗಿ, ಒಂದು ವರ್ಷದ ಸೇವೆಯ ನಂತರ ಗ್ರಾಚ್ಯುಟಿ ಪಡೆಯುತ್ತಾರೆ. ಉದ್ಯೋಗ ಬದಲಾಯಿಸುವ ಸಂದರ್ಭದಲ್ಲಿ ಇದು ಅನುಕೂಲವಾಗಲಿದೆ.
ಗ್ರಾಚ್ಯುಟಿ ಪಾವತಿ ಕಾಯಿದೆಯು ಕಾರ್ಖಾನೆಗಳು, ಗಣಿಗಳು, ತೈಲ ಕ್ಷೇತ್ರಗಳು, ಬಂದರುಗಳು ಮತ್ತು ರೈಲ್ವೆ ಸೇರಿದಂತೆ ಉತ್ತಮ ಆದಾಯ ಹೊಂದಿರುವ ಸಂಸ್ಥೆಗಳಲ್ಲಿ ಇರುತ್ತದೆ. ಈ ಹಿಂದೊಮ್ಮೆ ಅರ್ಹತಾ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಗುತ್ತದೆ ಎಂದು ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ 1 ವರ್ಷಕ್ಕೆ ಇಳಿಸಿ ಮಹತ್ವದ ಬದಲಾವಣೆ ತಂದಿದೆ.
ನಿಮ್ಮ ಗ್ರಾಚ್ಯುಟಿಯನ್ನು ಲೆಕ್ಕಾಚಾರ ಮಾಡುವುದು ಹೇಗೆ?
ಗ್ರಾಚ್ಯುಟಿ ಮೊತ್ತವನ್ನು, ಕೊನೆಯದಾಗಿ ಪಡೆದ ಸಂಬಳ (15/26) x ಸೇವಾ ವರ್ಷಗಳ ಸಂಖ್ಯೆ. ಇಲ್ಲಿ, ಕೊನೆಯದಾಗಿ ಪಡೆದ ಸಂಬಳವು ಮೂಲ ವೇತನ ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿದೆ.
ಉದಾಹರಣೆಗೆ, ಒಬ್ಬ ಉದ್ಯೋಗಿ ಕಂಪನಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ ಮತ್ತು ಅವರ ಅಂತಿಮ ಮೂಲ ವೇತನ ಜೊತೆ ಡಿಎ (DA) ಸಂಬಳ ₹50,000 ಆಗಿದ್ದರೆ, ಗ್ರಾಚ್ಯುಟಿ ಹೀಗಿರುತ್ತದೆ: 50,000 x (15/26) x 5 = ₹1,44,230. ಈ ಹೊಸ ನೀತಿಯು ಕಾಂಟ್ರಾಕ್ಟ್‌ನಲ್ಲಿ ಅಂದರೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications