Pension Scheme: ಪಿಂಚಣಿದಾರರಿಗೆ ಸಿಗುತ್ತಾ ಗುಡ್‌ ನ್ಯೂಸ್?‌ ಇನ್ಮೇಲೆ ತಿಂಳಿಗೆ ಸಿಗುತ್ತಾ 7,500 ರೂ.?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಬರುವ EPS-95 ಪಿಂಚಣಿದಾರರ ಕನಿಷ್ಠ ಪೆನ್ಷನ್‌ ಹಣವನ್ನು ಹೆಚ್ಚಿಸಬೇಕೆಂಬ ಬೇಡಿಕೆ, ಇದೀಗ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಮತ್ತೆ ಮುನ್ನೆಲೆಗೆ ಬಂದಿದೆ. ಡಿಸೆಂಬರ್ 1, 2025 ರಂದು ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರವಾಗಿ, ಸರ್ಕಾರವು EPS-95 ಯೋಜನೆಯಡಿ ಪಿಂಚಣಿ ಹೆಚ್ಚಳ ಮತ್ತು ತುಟ್ಟಿ ಭತ್ಯೆ (DA) ಕುರಿತು ತನ್ನ ನಿಲುವೇನು ಎಂಬುದನ್ನು ಮತ್ತೆ ಸ್ಪಷ್ಟಪಡಿಸಿದೆ.

ಇನ್ಮೇಲೆ ತಿಂಳಿಗೆ 7,500 ರೂ ಪಿಂಚಣಿ ಸಿಗುತ್ತಾ? ಸರ್ಕಾರ ನಿರ್ಧಾರವೇನು

ಸಂಸದ ಬಾಲ್ಯಾ ಮಾಮಾ ಸುರೇಶ್ ಗೋಪಿನಾಥ್ ಮ್ಹಾತ್ರೆ ಅವರು ಪ್ರಸ್ತುತ 1,000 ರೂಪಾಯಿಗಳ ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಏರಿಕೆ ಮಾಡುವುದರ ಬಗ್ಗೆ ಸರ್ಕಾರದ ಚಿಂತೆ ಏನು ಎಂದು ಪ್ರಶ್ನಿಸಿದ್ದರು. ಈ ಬೇಡಿಕೆಯನ್ನು ದೇಶಾದ್ಯಂತ ಲಕ್ಷಾಂತರ ಪಿಂಚಣಿದಾರರು ಹಲವು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಮುಂದಿಡುತ್ತಿದ್ದಾರೆ. ಆದ್ದರಿಂದ ಇದೀಗ ಸಂಸತ್‌ನಲ್ಲೂ ಪ್ರಶ್ನೆ ಎತ್ತಿದರು

EPS-95 ಎಂದರೇನು?
EPS-95 ಯೋಜನೆ ಎಂದರೆ, ಭಾರತದ ಖಾಸಗಿ ಮತ್ತು ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ನೀಡಲಾಗುವ ಅತಿ ದೊಡ್ಡ ಪಿಂಚಣಿ ಯೋಜನೆಯಾಗಿದೆ. ಇದು ಸದ್ಯ 80 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರನ್ನು ಒಳಗೊಂಡಿದೆ. 1995 ರಲ್ಲಿ ಪರಿಚಯಿಸಲಾದ ಈ ಯೋಜನೆಯು ಉತ್ತಮ ಕೊಡುಗೆ ಹಾಗೂ ನಿಶ್ಚಿತ ಲಾಭದ ಸಾಮಾಜಿಕ ಭದ್ರತಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ನಿಧಿ ಸಂಗ್ರಹಕ್ಕಾಗಿ ಇಪಿಎಫ್‌ಒ ಉದ್ಯೋಗದಾತರಿಂದ ನೌಕರರ ವೇತನದ 8.33% ಮತ್ತು ಕೇಂದ್ರ ಸರ್ಕಾರದಿಂದ (15,000 ರೂ. ವೇತನದ ಮಿತಿಯವರೆಗೆ) 1.16% ರಷ್ಟು ದೇಣಿಗೆಗಳನ್ನು ಪಡೆಯುತ್ತದೆ. ವೃದ್ಧಾಪ್ಯದಲ್ಲಿ, ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಗಿದೆ. 2014 ರಲ್ಲಿ 1000 ರೂ. ನೀಡುವಂತೆ ನಿಗದಿಯಾಗಿದ್ದರೂ, ಹೆಚ್ಚುತ್ತಿರುವ ಬೆಲೆಗಳು, ಜೀವನ ವೆಚ್ಚ ಮತ್ತು ಹಣದುಬ್ಬರದಿಂದಾಗಿ ಸಾಕಾಗುತ್ತಿಲ್ಲ ಎಂದು ಪಿಂಚಣಿದಾರರು ದೂರುತ್ತಿದ್ದಾರೆ.

ಸುಮಾರು ಒಂದು ದಶಕದಿಂದ, EPS-95 ಪಿಂಚಣಿದಾರರ ಸಂಘಟನೆಗಳು ನಿರಂತರವಾಗಿ ಪಿಂಚಣಿಯನ್ನು 7,500 ರೂ.ನಿಂದ 9,000 ರೂ.ಗೆ ಹೆಚ್ಚಿಸಲು, ನಿಯಮಿತ ತುಟ್ಟಿ ಭತ್ಯೆ ನೀಡಲು, ಹೆಚ್ಚಿನ ಪಿಂಚಣಿ ಸೌಲಭ್ಯಗಳನ್ನು ಒದಗಿಸುವಂತೆ ಬೇಡಿಕೆ ಇಡುತ್ತಲೇ ಇದೆ..

ಸಂಸದರು ಕೇಳಿದ ಪ್ರಮುಖ ಪ್ರಶ್ನೆಗಳೆಂದರೆ:
ಸರ್ಕಾರವು ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸಲು ಯೋಜಿಸುತ್ತಿದೆಯೇ? ಇಲ್ಲದಿದ್ದರೆ ಏಕೆ? ಹಣದುಬ್ಬರ ಹೆಚ್ಚಿದ್ದರೂ EPS-95 ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಏಕೆ ನೀಡುತ್ತಿಲ್ಲ? ಪಿಂಚಣಿ ಮೊತ್ತವನ್ನು ಜೀವನಕ್ಕೆ ಯೋಗ್ಯವಾಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆಯೇ? ಪಿಂಚಣಿದಾರರ ಬೇಡಿಕೆಗಳನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆಯೇ? ಹಾಗಿದ್ದರೆ, ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯಿಸಿ, ಯೋಜನೆಯ ಆರ್ಥಿಕ ಅಡೆತಡೆಗಳ ಕುರಿತು ವಿವರವಾದ ಉತ್ತರ ನೀಡಿದರು. ಸದ್ಯಕ್ಕೆ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+