ಇದೀಗ ಕೇಂದ್ರ ಸರ್ಕಾರ (Central Govt) ದೇಶದ ರೈತರಿಗೆ ಗುಡ್ ನ್ಯೂಸ್ ನೀಡುತ್ತಿದೆ. ಪಿಎಂ ಕಿಸಾನ್ ಯೋಜನೆ ಮೂಲಕ ಕೇಂದ್ರ ರೈತರ ಖಾತೆಗೆ 21ನೇ ಕಂತಿನ ಹಣವನ್ನು ನೀಡಲು ಮುಂದಾಗಿದೆ. ಇದು ದೀಪಾವಳಿಗೂ ಮುನ್ನವೇ ರೈತರಿಗೆ ಬಂಪರ್ ನ್ಯೂಸ್ ಅಂತಾನೆ ಹೇಳಬಹುದು. ಈಗಾಗಲೇ ೨೦ ಕಂತಿನವರೆಗೆ ಪಿಎಂ ಕಿಸಾನ್ ಹಣವನ್ನು ನೀಡಿರುವ ಕೇಂದ್ರ, ಇದೀಗ ೨೧ನೇ ಕಂತಿನ ಹಣವನ್ನು ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Yojana Scheme) ಅಡಿಯಲ್ಲಿ ದೀಪಾವಳಿಗೂ ಮುನ್ನವೇ ಈ ಬಾರಿ 2000 ಹಣ ರೈತರ ಕೈ ಸೇರಲಿದೆ.

ರೈತರಿಗೆ ಬಂಪರ್!
ಹೌದು, ಪ್ರತಿ ಬಾರಿ ಪಿಎಂ ಕಿಸಾನ್ ಯೋಜನೆ ಹಣ ಎಲ್ಲಾ ರೈತರಿಗೂ ಒಮ್ಮೆಲೇ ಬಿಡುಗಡೆಯಾಗುತ್ತಿತ್ತು. ಆದ್ರೆ ಈ ಬಾರಿ ಪಿಎಂ ಕಿಸಾನ್ ೨೧ನೇ ಕಂತಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅಂದರೆ ಈ ಬಾರಿ ಎಲ್ಲರಿಗೂ ಒಂದೇ ಬಾರಿ ಹಣ ಖಾತೆಗೆ ಜಮಾ ಆಗಲ್ಲ. ಆದ್ರೆ ದೀಪಾವಳಿ ಮುನ್ನ ಎಲ್ಲಾ ರೈತರ ಖಾತೆಗೂ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಭರವಸೆ ನೀಡಿದೆ. ಕೆಲವು ರೈತರು ಈಗಾಗಲೇ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ, ಆದರೆ ಮುಂದಿನ ದಿನಗಳಲ್ಲಿ ದೇಶದ ಲಕ್ಷಾಂತರ ಜನರ ಅಕೌಂಟ್ಗೆ ಹಣ ಜಮಾ ಆಗಲಿದೆ.
ಕೇಂದ್ರದಿಂದ ಹೊಸ ನಿರ್ಧಾರ
ಮೋಡಿ ಸರ್ಕಾರ ಈ ಹಿಂದೆಲ್ಲ ದೇಶದ ಎಲ್ಲ ರೈತರಿಗೂ ಒಂದೇ ಬಾರಿ ಹಣ ಜಮಾ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ನಿಯಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಅದೇನಂದ್ರೆ, ಈ ವರ್ಷ ದೇಶದ ಹಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದೆ. ವರುಣಾರ್ಭಟಕ್ಕೆ ಅದೆಷ್ಟೋ ರಾಜ್ಯಗಳು ತತ್ತರಿಸಿ ಹೋಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪಕ್ಕೆ ತುತ್ತಾದ ರಾಜ್ಯಗಳ ರೈತರಿಗೆ ಮೊದಲ ಆದ್ಯತೆ ನೀಡಿ, ಅವರಿಗೆ ಬೇಗ ಹಣವನ್ನು ವರ್ಗಾವಣೆ ಮಾಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರವು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ರೈತರಿಗೆ ಈಗಾಗಲೇ ಪಿಎಂ ಕಿಸಾನ್ ಯೋಜನಾ ಹಣವನ್ನು ವರ್ಗಾಯಿಸಿದ್ದು, ಈ ಮೂರು ರಾಜ್ಯಗಳಲ್ಲಿ ಸುಮಾರು 2.7 ಮಿಲಿಯನ್ ರೈತರು ₹2,000 ಹಣ ಪಡೆದಿದ್ದರೆ ಎಂಬುದು ಗಮನಿಸಬೇಕಾದ ಸಂಗತಿ. ಇನ್ನು ಈ ರಾಜ್ಯಗಳಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅದೇ ಕಾರಣದಿಂದ ಇದೀಗ ಸರ್ಕಾರ ಈ ರಾಜ್ಯಗಳಿಗೆ ಮೊದಲ ಆದ್ಯತೆ ನೀಡಿದೆ.
ಎಲ್ಲರ ಖಾತೆಗೆ ಯಾವಾಗ ಬರುತ್ತೆ ಹಣ?
ವರದಿಗಳ ಪ್ರಕಾರ, ದೀಪಾವಳಿಗೆ ಮುನ್ನ ರೈತರ ಖಾತೆಗಳಿಗೆ ೨೧ನೇ ಕಂತಿನ 2,000 ರೂಪಾಯಿ ಹಣ ಜಮಾ ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಅಧಿಕೃತ ದಿನಾಂಕವನ್ನು ಸರ್ಕಾರ ಘೋಷಿಸಿಲ್ಲ, ಆದ್ರೆ ಇದೇ ತಿಂಗಳ ಅಂತ್ಯದೊಳಗೆ ಜಮಾ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications