ಭಾರತದಲ್ಲಿ ಚಿನ್ನದ ಬೆಲೆ (Gold Rate) ಹಿಂದಿನ ಎರಡು ದಿನಕ್ಕೆ ಹೋಲಿಸಿದ್ರೆ ಇಂದು ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ (Investment) ಬೆಸ್ಟ್ ಅಂತಾರೆ. ಆದ್ರೆ ಬೆಲೆ ಏರಿಕೆಯಿಂದಾಗಿ ಇತ್ತೀಚೆಗೆ ಖರೀದಿಸೋದೆ ಬೇಡವೆಂಬಂತಾಗಿದೆ. ಆದ್ರೆ ಇಂದು ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ? ಎಷ್ಟು ಕಡಿಮೆಯಾಗಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:
ದೀಪಾವಳಿಗೂ ಮುನ್ನ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಆದ್ರೆ ದೀಪಾವಳಿ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದೀಗ ನಿನ್ನೆಗಿಂತಲೂ ಇಂದು ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹246 ರೂ.ನಷ್ಟು ಕಮ್ಮಿಯಾಗಿದ್ದು, ಒಟ್ಟು ಬೆಲೆ ₹12,082 ರೂ. ಆಗಿದೆ. ನಿನ್ನೆ ₹12,328 ರೂ ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹96,656 ರೂ. ಆಗಿದ್ದು, ನಿನ್ನೆ ₹98,624 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ 1,968 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,20,820 ರೂ. ಆಗಿದ್ದು, ನಿನ್ನೆಗಿಂತ 2,460 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,08,200 ರೂ. ಆಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
24K ಚಿನಕ್ಕೆ ಹೋಲಿಸಿದ್ರೆ 22K ಚಿನ್ನದ ಬೆಲೆ ಸ್ವಲ್ಪ ಕಡಿಮೆಯೇ ಇರುತ್ತೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,075 ರೂ. ಆಗಿದ್ದು, ನಿನ್ನೆ ₹11,300 ರೂ. ಇತ್ತು. ಈ ಮೂಲಕ ಒಂದೇ ದಿನ ₹225 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹88,600 ರೂ. ಆಗಿದ್ದು, ನಿನ್ನೆಗಿಂತಲೂ ಇಂದು 1,800 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,10,750 ರೂ ಆಗಿದ್ದು, ನಿನ್ನೆ ₹1,13,000 ರೂ ಇತ್ತು. ಇದರಲ್ಲೂ ನಿನ್ನೆಗೆ ಹೋಲಿಸಿದ್ರೆ ಇಂದು 2,250 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,07,500 ರೂ. ಆಗಿದ್ದು, ನಿನ್ನೆ ₹11,30,000 ರೂ. ಇತ್ತು. ಒಟ್ಟು ₹22,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದಲ್ಲಿ ಮಿಶ್ರಣ ಸ್ವಲ್ಪ ಜಾಸ್ತಿ ಇರುವುದರಿಂದ, ಬೆಲೆ ಕೂಡಾ ಕಡಿಮೆ. ಆದ್ರೆ ಇದೀಗ 18K ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, 1 ಗ್ರಾಂ ಚಿನ್ನದ ಬೆಲೆ ಇಂದು ₹9,062 ರೂ. ಆಗಿದ್ದು, ನಿನ್ನೆ 9,246 ರೂ. ಇತ್ತು. ಒಂದೇ ದಿನದಲ್ಲಿ 184 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹72,496 ರೂ. ಆಗಿದ್ದು, ನಿನ್ನೆ ₹73,968 ರೂ ಇತ್ತು. ಒಟ್ಟು 1,472 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ನಿನ್ನೆ 92,460 ರೂ. ಇತ್ತು. ಆದರೆ ಇಂದು 90,620 ರೂ. ಆಗಿದೆ. ಈ ಮೂಲಕ ಒಂದೇ ದಿನ 1,840 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,082, 22K ರೂ. 11,075, 18K ರೂ. 9,200
ಮುಂಬೈ: 24K ರೂ. 12,082, 22K ರೂ. 11,075, 18K ರೂ. 9,062
ದೆಹಲಿ: 24K ರೂ. 12,097, 22K ರೂ. 11,090, 18K ರೂ. 9,077
ಕೋಲ್ಕತ್ತಾ: 24K ರೂ. 12,082, 22K ರೂ. 11,075, 18K ರೂ. 9,062
ಬೆಂಗಳೂರು: 24K ರೂ. 12,082, 22K ರೂ. 11,075, 18K ರೂ. 9,062
ಹೈದರಾಬಾದ್: 24K ರೂ. 12,082, 22K ರೂ. 11,075, 18K ರೂ. 9,062
ಕೇರಳ: 24K ರೂ. 12,082, 22K ರೂ. 11,075, 18K ರೂ. 9,062
ಪುಣೆ: 24K ರೂ. 12,082, 22K ರೂ. 11,075, 18K ರೂ. 9,062
ವಡೋದರಾ: 24K ರೂ. 12,087, 22K ರೂ. 11,080, 18K ರೂ. 9,067
ಅಹಮದಾಬಾದ್: 24K ರೂ. 12,087, 22K ರೂ. 11,080, 18K ರೂ. 9,067
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್‌ನ ಅಕ್ಟೋಬರ್ 28ರ ವರದಿ ಪ್ರಕಾರ, ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆ ಮತ್ತು ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳಿಂದಾಗಿ ಚಿನ್ನದ ಬೆಲೆಗಳು ಮಂಗಳವಾರ ಭಾರೀ ಇಳಿಕೆಯಾಗಿದೆ, ಪ್ರತಿ ಔನ್ಸ್‌ಗೆ $4,000 ಮಟ್ಟಕ್ಕಿಂತ ಹೆಚ್ಚಾಯಿತು.
0141 GMT ರಂತೆ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 0.7% ಏರಿಕೆಯಾಗಿ $4,009.39 ಕ್ಕೆ ತಲುಪಿದೆ, ಸೋಮವಾರ 3% ಕ್ಕಿಂತ ಹೆಚ್ಚು ಕುಸಿದು ಅಕ್ಟೋಬರ್ 10 ರ ನಂತರದ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಭಾರತದಲ್ಲಿ ಇಂದು ಬೆಳ್ಳಿದರದಲ್ಲೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ರೂ. ₹151 ಆಗಿದ್ದು, ನಿನ್ನೆ 155 ರೂ. ಇತ್ತು. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ₹4 ರೂ. ಕಡಿಮೆಯಾಗಿದೆ. ಅಲ್ಲದೇ 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,208 ಆಗಿದೆ. ಆದ್ರೆ ನಿನ್ನೆ ರೂ. 1,240 ಆಗಿತ್ತು. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,100 ಆಗಿದ್ದು, 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,51,000 ಆಗಿದೆ. ಪ್ರತಿಯಾಗಿ 100 ಗ್ರಾಂನಲ್ಲಿ ₹400 ರೂ. ಮತ್ತು 1000 ಗ್ರಾಂನಲ್ಲಿ 4,000 ರೂ. ಇಳಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ ಸೇಫ್ ಅಂತಾನೇ ಹೇಳ್ತಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಹೂಡಿಕೆದಾರರಿಗೆ, ಖರೀದಿದಾರರು ಚಿನ್ನ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಆದ್ರೆ ಚಿನ್ನ ಖರೀದಿ, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡರೆ ಉತ್ತಮ.


Click it and Unblock the Notifications