ಕೇಂದ್ರ ಸರ್ಕಾರಿ ನೌಕರರು ಸದ್ಯ ಕಾಯುತ್ತಿರುವ ಬಹುಮುಖ್ಯ ಘೋಷಣೆಯೆಂದರೆ ಅದು 8ನೇ ವೇತನ ಆಯೋಗ (8th Pay Commission). ಸದ್ಯ 8ನೇ ವೇತನ ಆಯೋಗದ ಬಗ್ಗೆ ಹಲವು ಗೊಂದಲಗಳು, ವದಂತಿಗಳು ಹರಿದಾಡುತ್ತಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರು (Central Govt Employees) ಮತ್ತು ನಿವೃತ್ತರು, ಪಿಂಚಣಿದಾರರು ಸೇರಿ ಕೋಟ್ಯಾಂತರ ಮಂದಿ ಕುತೂಹಲದಿಂದ ಕಾಯುತ್ತಿದ್ದ ಬಹುಮುಖ್ಯ ಸ್ಪಷ್ಟೀಕರಣವನ್ನು ಕೇಂದ್ರ ಹಣಕಾಸು ಸಚಿವಾಲಯ ನೀಡಿದೆ. ಕೆಲದಿನಗಳಿಂದ ಮೂಲ ವೇತನದೊಂದಿಗೆ DA ಮತ್ತು DR ವಿಲೀನಗೊಳಿಸಲಾಗುತ್ತದೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದ್ರೆ ಕೇಂದ್ರ ಸಚಿವಾಲಯ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. 8ನೇ ಕೇಂದ್ರ ವೇತನ ಆಯೋಗ (CPC) ಬರುವ ಮುನ್ನವೇ ವೇತನ ಮತ್ತು ಪಿಂಚಣಿ ರಚನೆಯಲ್ಲಿ ಬದಲಾವಣೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದ ವದಂತಿಗಳಿಗೆ ಈ ಮೂಲಕ ತೆರೆ ಎಳೆದಿದೆ.

ಈ ಸ್ಪಷ್ಟೀಕರಣವನ್ನು ರಾಜ್ಯಸಭೆಯಲ್ಲಿ ಉತ್ತರವಾಗಿ ನೀಡಲಾಗಿದೆ. ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸರ್ಕಾರದ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಿಂದಿನ ವೇತನ ಆಯೋಗಗಳು ಮಾಡಿದಂತೆ, 8ನೇ ವೇತನ ಆಯೋಗವೇ ವೇತನ, ಭತ್ಯೆ ಮತ್ತು ಪಿಂಚಣಿಗಳ ಬದಲಾವಣೆಗಳನ್ನು ಪರಿಶೀಲಿಸಿ ಶಿಫಾರಸು ಮಾಡಲಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮುಖ್ಯವಾಗಿ, ಪಿಂಚಣಿ ಪರಿಷ್ಕರಣೆಯು ಮುಂದಿನ ವೇತನ ಆಯೋಗದ ಆದೇಶದಲ್ಲೂ ಒಂದು ಭಾಗ ಎಂಬ ಹೇಳಿಕೆ, ಸದ್ಯ ಸುಮಾರು 70 ಲಕ್ಷ ಪಿಂಚಣಿದಾರರಿಗೆ ಸಮಾಧಾನ ತರುವಂತೆ ಮಾಡಿದೆ
ಡಿಎ ಮತ್ತು ಡಿಆರ್ ವಿಲೀನ ಆಗಲ್ಲ!
ಡಿಎ ಮತ್ತು ಡಿಆರ್ ವಿಲೀನ ಕುರಿತ ಚರ್ಚೆ ಸುಮಾರು ಒಂದು ದಶಕದಿಂದ ನಡೆಯುತ್ತಿದೆ. 2016ರಲ್ಲಿ 7ನೇ ವೇತನ ಆಯೋಗ ಜಾರಿಯಾದ ನಂತರ ಈ ವದಂತಿ ಮತ್ತಷ್ಟು ವೇಗ ಪಡೆದುಕೊಂಡಿತು. ಅಲ್ಲದೇ ಬೇಡಿಕೆಯೂ ಹೆಚ್ಚಾಗಿತ್ತು. ನೌಕರರ ಸಂಘಟನೆಗಳು ಮತ್ತು ಪಿಂಚಣಿದಾರರ ಸಂಸ್ಥೆಗಳು, DA ಯನ್ನು ಮೂಲ ವೇತನದೊಂದಿಗೆ ಸೇರಿಸುವುದರಿಂದ ಉತ್ತಮ ಪಿಂಚಣಿ, ಸುಧಾರಿತ ಗ್ರಾಚ್ಯುಟಿ ಲೆಕ್ಕಾಚಾರಗಳು ಮತ್ತು ಹಣದುಬ್ಬರದ ವಿರುದ್ಧ ಬಲವಾದ ರಕ್ಷಣೆಯಂತಹ ಅನುಕೂಲಗಳನ್ನು ನೀಡುತ್ತದೆ ಎಂದು ವಾದಿಸಿವೆ.
ಆದಾಗ್ಯೂ, ವಿಲೀನದಿಂದ ಉಂಟಾಗುವ ಸಂಭಾವ್ಯ ಆರ್ಥಿಕ ಪರಿಣಾಮಗಳಿಂದಾಗಿ ಸರ್ಕಾರಗಳು ಸತತವಾಗಿ ಈ ಕ್ರಮ ಕೈಗೊಳ್ಳುವುದನ್ನು ತಪ್ಪಿಸುತ್ತಲೇ ಬರುತ್ತಿದೆ. ಆರ್ಥಿಕ ವಿಶ್ಲೇಷಕರ ಅಂದಾಜಿನ ಪ್ರಕಾರ, ಒಂದು ವೇಳೆ DA ಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಿದರೆ ಕೇಂದ್ರದ ವೇತನ ಮತ್ತು ಪಿಂಚಣಿ ವೆಚ್ಚವು ಜಿಡಿಪಿಯ 0.5% ಕ್ಕಿಂತ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ದೇಶದ ಆರ್ಥಿಕತೆ ಬೆಳವಣಿಗೆ ಮುಖ್ಯವಾಗಿರುವಾಗ ಇದು ದೊಡ್ಡ ಹೊರೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
8ನೇ ವೇತನ ಆಯೋಗದ ಘೋಷಣೆಗೆ ಮುನ್ನ ಕೇಂದ್ರವು DA ಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಹೊಸ ಊಹಾಪೋಹಗಳಿಗೆ ಕೊನೆಗೂ ಬ್ರೇಕ್ ನೀಡಿದೆ. ಜನವರಿ 1, 2026 ರಿಂದ ಆರಂಭಿಕ ವೇತನ ಜಾರಿ ಕುರಿತ ವರದಿಗಳ ನಂತರ ಇಂತಹ ವದಂತಿಗಳು ತೀವ್ರಗೊಂಡಿದ್ದವು. 10 ವರ್ಷಗಳಿಂದ ಹೊಸ ವರ್ಷದ ದಿನಾಂಕದಲ್ಲೇ ವೇತನ ಆಯೋಗವನ್ನು ಪರಿಷ್ಕರಣೆ ಮಾಡುತ್ತಿದ್ದರು, ಮುಂದಿನ ವರದಿ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ವಾಸ್ತವವಾಗಿ, ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ವಿತ್ತೀಯ ಯೋಜನೆಗಳನ್ನು ಅವಲಂಬಿಸಿ ಸಂಪೂರ್ಣ ಜಾರಿಗೆ 2028ರ ವರೆಗೆ ಸಮಯ ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ. ವಿಲೀನ ವದಂತಿಯನ್ನು ತಳ್ಳಿಹಾಕಿದ ಹಿರಿಯ ಅಧಿಕಾರಿಯೊಬ್ಬರು, 7ನೇ ವೇತನ ಆಯೋಗವು DA ವಿಲೀನಗೊಳಿಸದೆ 2.57 ರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಪರಿಚಯಿಸಿತ್ತು ಮತ್ತು ಆ ರಚನೆಯು ಸುಗಮವಾಗಿ ಕಾರ್ಯ ನಿರ್ವಹಿಸಿತ್ತು ಎಂದು ನೆನಪಿಸಿಕೊಂಡರು. ಪ್ರಸ್ತುತ, 8ನೇ ವೇತನ ಆಯೋಗಕ್ಕಾಗಿ ಸಮಿತಿ ರಚನೆಗೆ ಸಂಬಂಧಿಸಿದ ಪ್ರಾಥಮಿಕ ಕಾರ್ಯಗಳು ನಡೆಯುತ್ತಿವೆ. ಆದರೆ, ವಿಲೀನದ ಬಗ್ಗೆ ಯಾವುದೇ ಚರ್ಚೆಯಿಲ್ಲ ಎಂದು ಹೇಳಿದ್ದಾರೆ.
8ನೇ ವೇತನ ಆಯೋಗದಿಂದ ಹಲವರಿಗೆ ಪ್ರಯೋಜನ
8ನೇ ವೇತನ ಆಯೋಗದಿಂದ 50 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ನೌಕರರ ಸಂಘಟನೆಗಳು, ಹೊಸ ಫಿಟ್‌ಮೆಂಟ್ ಫ್ಯಾಕ್ಟರ್ ಸುಮಾರು 2.46 ರಷ್ಟಿರಬಹುದು ಎಂದು ಅಂದಾಜಿಸಿದ್ದು, ಇದು ಸರಾಸರಿ ವೇತನವನ್ನು 30-40% ರಷ್ಟು ಹೆಚ್ಚಿಸಬಹುದು. ಇತ್ತೀಚಿನ ಆನ್‌ಲೈನ್ ವಾದಗಳಿಂದ ಹುಟ್ಟಿಕೊಂಡಿದ್ದ ಅನುಮಾನಗಳನ್ನು ನಿವಾರಿಸಿ, 8ನೇ ವೇತನ ಆಯೋಗವು ಪಿಂಚಣಿ ಪರಿಷ್ಕರಣೆಯನ್ನು ಔಪಚಾರಿಕವಾಗಿ ನಿರ್ವಹಿಸುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications