ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಗೆದ್ದ ಟೀಂ ಇಂಡಿಯಾದ ಸಂಭ್ರಮ ಇದೀಗ ದೇಶದೆಲ್ಲೆಡೆ ಮನೆ ಮಾಡಿದೆ. ಭಾರತೀಯ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರಲ್ಲಿ ಕಿರೀಟ ಪಡೆಯುವ ಮೂಲಕ ಮತ್ತೊಮ್ಮೆ ಭಾರತ ತಂಡ ದಾಖಲೆ ಬರೆಯಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ (New Zealand vs India) ತಂಡ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಐತಿಹಾಸಿಕ ಗೆಲುವಿನ ನಂತರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಭಾರತ ತಂಡಕ್ಕೆ ಭರ್ಜರಿ ಬಹುಮಾನ ಘೋಷಿಸಿದೆ.

ಭಾರತ ತಂಡಕ್ಕೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನ ಮೊತ್ತವನ್ನು ಭಾರತ ತಂಡದ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗಗಳಿ ಹಂಚಲಾಗುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಘೋಷಣೆಯಲ್ಲಿ ತಿಳಿಸಿದೆ.
ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ ತನ್ನ ಹೇಳಿಕೆಯಲ್ಲಿ "ಐಸಿಸಿ ಪುರುಷತ ಟಿ20 ವಿಶ್ವಕಪ್ 2026 ರಲ್ಲಿ ತಂಡದ ಭರ್ಜರಿ ಪ್ರದರ್ಶನದ ನಂತರ ಬಿಸಿಸಿಐ ಟೀಂ ಇಂಡಿಯಾಗೆ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಆಟಗಾರರು, ಕೋಚಿಂಗ್ ಸ್ಟಾಫ್ ಮತ್ತು ಇತರ ಸಿಬ್ಬಂದಿಗಳಿಗೆ ಈ ಬಹುಮಾನ ಮೊತ್ತ ವಿತರಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಇನ್ನು ಈ ಹಿಂದಿನ ಟೂರ್ನಿ ಅಂದರೆ 2024 ರ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ 125 ಕೋಟಿ ರೂಪಾಯಿ ಹಣವನ್ನು ಬಹುಮಾನವಾಗಿ ನೀಡಿತ್ತು. ಇದೀಗ ಈ ವರ್ಷ 6 ಕೋಟಿ ರೂಪಾಯಿ ಹೆಚ್ಚಳ ಮಾಡಿ ಒಟ್ಟು 131 ಕೋಟಿ ರೂಪಾಯಿ ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದೆ. ಇದು ಬಿಸಿಸಿಐ ಇಲ್ಲಿಯವರೆಗೆ ನೀಡಲಾದ ಅತಿದೊಡ್ಡ ಬಹುಮಾನ ಮೊತ್ತವಾಗಿದೆ.
ಐಸಿಸಿಯಿಂದ ಎಷ್ಟು ಬಹುಮಾನ?
ಇನ್ನು ಐಸಿಸಿಯಿಂದ ಚಾಂಪಿಯನ್ ತಂಡಕ್ಕೆ ಸುಮಾರು 27.48 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ನೀಡಿದೆ. ಒಟ್ಟು ಈ ಬಹುಮಾನಗಳೊಂದಿಗೆ ತಂಡಕ್ಕೆ ಒಟ್ಟು 158 ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತೀಯ ತಂಡವು 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಬಾರಿಸಿತು. ಆದ್ರೆ ಈ ಗುರಿಯನ್ನು ಬೆನ್ನತ್ತಲು ಪ್ರಯತ್ನಿಸಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್ ಬಾರಿಸಿ ಆಲೌಟ್ ಮಾಡುವ ಮೂಲಕ, ಭಾರತ ತಂದ 96 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ 2026ರ ಚಾಂಪಿಯನ್ ಪಟ್ಟ, ತನ್ನದಾಗಿಸಿಕೊಂಡಿತು.


Click it and Unblock the Notifications