ಟೆಕ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಬ್ರಾಂಡ್ ಅಂದ್ರೆ ಅದು ಆ್ಯಪಲ್ (Apple). ತನ್ನ ಬ್ರಾಂಡ್ ಮೂಲಕ ಹೊಸ ಹೊಸ ಟೆಕ್ನಾಲಜಿ ಬಳಸಿಕೊಂಡು ಉತ್ಪನ್ನಗಳನ್ನು ಆ್ಯಪಲ್ ಕಂಪನಿ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇನ್ನು ಐಫೋನ್ ಖರೀದಿಸಬೇಕೆಂಬುದು ಬಹುತೇಕರ ಕನಸು. ಏನ್ ಮಾಡೋದು ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರಿಗೆ ಐಫೋನ್ ಖರೀದಿ ಕನಸು ಕನಸಾಗಿಯೇ ಉಳಿದಿದೆ. ಆದ್ರೆ ಇದೀಗ ಐಫೋನ್ ಪ್ರಿಯರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ ನೋಡಿ. ಐಫೋನ್ (iPhone) ಖರೀದಿಸ್ಬೇಕು ಎಂದು ಪ್ಲಾನ್ ಮಾಡಿದ್ದವರಿಗೆ ಇದಕ್ಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ.

ಹೌದು, ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಹಬ್ಬದ ಪ್ರಯುಕ್ತ ಇದೀಗ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಬಂಪರ್ ಆಫರ್ ಘೋಷಿಸಿದೆ. ಈ ಮೂಲಕ ಹಲವು ಸಾಧನಗಳನ್ನು ಭಾರೀ ಕಡಿಮೆ ಬೆಲೆಗೆ ಖರೀದಿಸಬಹುದು. ಅದೇ ರೀತಿ ಫ್ಲಿಪ್‌ಕಾರ್ಟ್ ದೀಪಾವಳಿ ವಿಶೇಷ ಮಾರಾಟದಲ್ಲಿ ಐಫೋನ್ 16 ಸೀರಿಸ್ ಅನ್ನೂ ಭಾರೀ ಅಗ್ಗದಲ್ಲಿ ಖರೀದಿಸಬಹುದು.
iPhone 16 ಮೇಲೆ ಬಂಪರ್ ರಿಯಾಯಿತಿ
ಹೌದು, ಐಫೋನ್ 16 ಬೆಲೆ ಇದೀಗ ಮತ್ತಷ್ಟು ಕಡಿಮೆ ಮಾಡಲಾಗಿದೆ. ಐಫೋನ್ 16 ನ 256GB ವೇರಿಯಂಟ್ ಮೇಲೆ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 16 ಆರಂಭದ ಬೆಲೆಗಿಂತಲೂ ಭಾರೀ ಇಳಿಕೆಯಾಗಿದೆ. ಐಫೋನ್ 16ನ 256GB ವೇರಿಯಂಟ್ ಫೋನನ್ನು ಆರಂಭದಲ್ಲಿ 89,900 ರೂಪಾಯಿಗೆ ಬಿಡುಗಡೆ ಮಾಡಲಾಗಿತ್ತು. ಆದ್ರೆ ಐಫೋನ್ 17 ಸೀರಿಸ್ ಲಾಂಚ್ ವೇಳೆ ಇದರ ಬೆಲೆಯನ್ನು 10 ಸಾವಿರದಷ್ಟು ಕಡಿಮೆ ಮಾಡಲಾಗಿತ್ತು, ಆದರೆ ಇದೀಗ ದೀಪಾವಳಿ ಪ್ರಯುಕ್ತ ಮತ್ತಷ್ಟು ಅಗ್ಗದಲ್ಲಿ ಸಿಗುತ್ತಿದೆ.
ಎಷ್ಟಿದೆ ಐಫೋನ್ 16 ಬೆಲೆ?
ಫ್ಲಿಪ್‌ಕಾರ್ಟ್‌ನ ದೀಪಾವಳಿ ಮಾರಾಟದ ಸಮಯದಲ್ಲಿ ಐಫೋನ್ 16 ನ 256GB ವೇರಿಯಂಟ್‌ನ ಫೋನನ್ನು 77,900 ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ಮೂಲಕ ಐಫೋನ್ 16 ಫೋನ್12 ಸಾವಿರ ರೂಪಾಯಿ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಇನ್ನು ಹಲವು ಆಫರ್‌ಗಳನ್ನು ನೀಡಲಾಗಿದ್ದು, ಎಕ್ಸ್‌ಚೇಂಜ್ ಆಫರ್ ಕೂಡಾ ಲಭ್ಯವಿದೆ. ಈ ಮೂಲಕ ನೀವು ಐಫೋನ್ 16ನ 256ಜಿಬಿ ವೇರಿಯಂಟ್‌ನ ಫೋನನ್ನು ಮತ್ತಷ್ಟು ಕಡಿಮೆಯಲ್ಲಿ ಖರೀದಿಸಬಹುದು.
ಐಫೋನ್ 16 ಫೀಚರ್ಸ್ ಹೇಗಿದೆ?
ಐಫೋನ್ 16 ನ ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ವಿಶೇಷವಾಗಿ ಈ ಐಫೋನ್ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಡಿಸ್ಪ್ಲೇ ಡೈನಾಮಿಕ್ ಐಲ್ಯಾಂಡ್ ಅನ್ನು ಒಳಗೊಂಡಿದ್ದು, ಹೆಚ್ಚುವರಿಯಾಗಿ, ಈ ಐಫೋನ್ A18 ಬಯೋನಿಕ್ ಚಿಪ್‌ನೊಂದಿಗೆ ಕೆಲಸ ಮಾಡುತ್ತದೆ. ಇನ್ನು ಈ ಸ್ಟ್ರಾಂಗ್ ಪ್ರೊಸೆಸರ್ ಆಪಲ್ ಇಂಟೆಲಿಜೆನ್ಸ್ ಅಥವಾ AI ಅನ್ನು ಸಹ ಬೆಂಬಲಿಸುತ್ತದೆ.
ಕ್ಯಾಮರಾ ಫೀಚರ್ಸ್
ಇದು 48MP ಪ್ರೈಮರಿ ಕ್ಯಾಮೆರಾ ಮತ್ತು 12MP ಸೆಕೆಂಡ್ ಕ್ಯಾಮೆರಾವನ್ನು ಹೊಂದಿದೆ. ಐಫೋನ್ 16 ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 12MP ಕ್ಯಾಮೆರಾವನ್ನು ಸಹ ಹೊಂದಿದೆ.


Click it and Unblock the Notifications