Earned Leave: ಸರ್ಕಾರಿ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್… 15 ದಿನಗಳ ಗಳಿಕೆ ರಜೆ ಬಗ್ಗೆ ಮಹತ್ವದ ತೀರ್ಮಾನ!

ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಒಳ್ಳೆಯ ಸುದ್ದಿಯನ್ನು ನೀಡಿದೆ. 2026ನೇ ಸಾಲಿನ ಬ್ಲಾಕ್ ಅವಧಿಗೆ ಸಂಬಂಧಿಸಿ ಗಳಿಕೆ ರಜೆಯನ್ನು ನಗದೀಕರಣ ಪಡೆಯುವ ಸೌಲಭ್ಯವನ್ನು ಸರ್ಕಾರ ನಿಯಮಿತಗೊಳಿಸಿ ಆದೇಶ ಹೊರಡಿಸಿದೆ. ಅಂದರೆ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳ ನೌಕರರಿಗೆ ಮಹತ್ವದ ಸೌಲಭ್ಯವನ್ನು ಘೋಷಿಸಿದೆ. 2026ನೇ ಸಾಲಿನ ಬ್ಲಾಕ್ ಅವಧಿಗೆ ಸಂಬಂಧಿಸಿ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ವ್ಯವಸ್ಥೆಯನ್ನು ಸರ್ಕಾರ ನಿಯಮಿತಗೊಳಿಸಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ನಿರ್ಧಾರದಿಂದ ಸಾವಿರಾರು ಸರ್ಕಾರಿ ನೌಕರರಿಗೆ ಆರ್ಥಿಕ ನೆರವು ಲಭ್ಯವಾಗಲಿದೆ.

ಗಳಿಕೆ ರಜೆ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ!

2025ರ ಬ್ಲಾಕ್ ಅವಧಿ ಮುಕ್ತಾಯ ಹಿನ್ನೆಲೆ ನಿರ್ಧಾರ:

2025ನೇ ಸಾಲಿನ ಬ್ಲಾಕ್ ಅವಧಿಗೆ ಸಂಬಂಧಿಸಿ ಈಗಾಗಲೇ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಸರ್ಕಾರ ನೀಡಿತ್ತು. ಆ ಅವಧಿಯು ಡಿಸೆಂಬರ್ 31, 2025ಕ್ಕೆ ಮುಕ್ತಾಯವಾಗಿದ್ದು, ಮುಂದಿನ ಸಾಲಿಗೂ ಇದೇ ರೀತಿಯ ಸೌಲಭ್ಯವನ್ನು ಮುಂದುವರಿಸುವ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು 2026ನೇ ಸಾಲಿನ ಬ್ಲಾಕ್ ಅವಧಿಗೆ ಹೊಸ ಆದೇಶವನ್ನು ಜಾರಿಗೊಳಿಸಿದೆ.

ಗರಿಷ್ಠ 15 ದಿನಗಳ ಗಳಿಕೆ ರಜೆ ನಗದೀಕರಣಕ್ಕೆ ಅವಕಾಶ:

ಹೊಸ ಆದೇಶದಂತೆ 2026ನೇ ಸಾಲಿನಲ್ಲಿ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರು ಗರಿಷ್ಠ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ರಜೆ ವೇತನಕ್ಕೆ ಸಮಾನವಾದ ಮೊತ್ತವನ್ನು ನಗದೀಕರಣವಾಗಿ ಪಡೆಯಬಹುದು. ಈ ಸೌಲಭ್ಯವು ಸರ್ಕಾರದಿಂದ ಸಹಾಯಾನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳು ಹಾಗೂ ಉದ್ಯಮಗಳ ನೌಕರರಿಗೂ ಅನ್ವಯವಾಗುತ್ತದೆ. ಆದರೆ ಈ ಸೌಲಭ್ಯವನ್ನು ಸಂಬಂಧಿತ ಸಂಸ್ಥೆ ಅಥವಾ ಉದ್ಯಮಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ನೀಡಲಾಗುತ್ತದೆ.

ಸೌಲಭ್ಯ ಜಾರಿಯ ಅವಧಿ ಮತ್ತು ಅರ್ಜಿ ಪ್ರಕ್ರಿಯೆ:

ಗಳಿಕೆ ರಜೆ ನಗದೀಕರಣ ಸೌಲಭ್ಯವು 1 ಜನವರಿ 2026ರಿಂದ 31 ಡಿಸೆಂಬರ್ 2026ರವರೆಗೆ ಜಾರಿಯಲ್ಲಿರುತ್ತದೆ. ಅರ್ಹ ಸರ್ಕಾರಿ ನೌಕರರು ಈ ಸೌಲಭ್ಯವನ್ನು ಪಡೆಯಲು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಮನವಿ ಸಲ್ಲಿಸಬೇಕು. ಅವರು ತಮ್ಮ ಇಚ್ಛೆಯ ಯಾವುದೇ ತಿಂಗಳಲ್ಲಿ 15 ದಿನಗಳ ಗಳಿಕೆ ರಜೆ ನಗದೀಕರಣವನ್ನು ಪಡೆಯಲು ಅವಕಾಶವಿರುತ್ತದೆ.

ಬ್ಲಾಕ್ ಅವಧಿ ನಂತರವೂ ಆದೇಶ ಹೊರಡಿಸಲು ಅವಕಾಶ:

ಯಾವುದೇ ಕಾರಣಗಳಿಂದ ನಿಗದಿತ ಬ್ಲಾಕ್ ಅವಧಿಯೊಳಗೆ ನಗದೀಕರಣಕ್ಕೆ ಸಂಬಂಧಿಸಿದ ಮಂಜೂರಾತಿ ಆದೇಶ ಹೊರಡಿಸಲು ಸಾಧ್ಯವಾಗದಿದ್ದರೆ, ಸಂಬಂಧಿತ ಪ್ರಾಧಿಕಾರವು ಬ್ಲಾಕ್ ಅವಧಿ ಮುಕ್ತಾಯವಾದ ನಂತರವೂ ಅಂತಹ ಆದೇಶವನ್ನು ಹೊರಡಿಸಬಹುದು. ಆದರೆ ನಗದೀಕರಣದಿಂದ ದೊರಕುವ ಆರ್ಥಿಕ ಲಾಭವನ್ನು ಸಂಬಂಧಿತ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮೊದಲು ಪಡೆಯುವುದು ಕಡ್ಡಾಯವಾಗಿದೆ.

ಗೆಜೆಟೆಡ್ ಅಧಿಕಾರಿಗಳಿಗೆ ವಿಶೇಷ ಸೂಚನೆ:

ಗೆಜೆಟೆಡ್ ಅಧಿಕಾರಿಗಳ ಗಳಿಕೆ ರಜೆ ನಗದೀಕರಣದ ಸಂದರ್ಭದಲ್ಲಿ, 2026ನೇ ಸಾಲಿನ ಸೌಲಭ್ಯ ಮಂಜೂರಾತಿಗಾಗಿ ಹೆಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ಮಾತ್ರ ನಗದೀಕರಣವನ್ನು ಮಂಜೂರು ಮಾಡಬೇಕು. ಲೆಕ್ಕಾಚಾರದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಮಹಾಲೇಖಪಾಲರು ಸೂಚಿಸಿದಂತೆ ಅದನ್ನು ಸರಿಪಡಿಸಿ, ಸರಿಯಾದ ಆರ್ಥಿಕ ಸೌಲಭ್ಯವನ್ನು ಮಾತ್ರ ನೀಡಲಾಗುತ್ತದೆ.

ಇತರೆ ನಿಯಮಗಳು ಸಹ ಅನ್ವಯ:

ಈ ಗಳಿಕೆ ರಜೆ ನಗದೀಕರಣ ಸೌಲಭ್ಯಕ್ಕೆ ಸಂಬಂಧಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118ರಲ್ಲಿ ಉಲ್ಲೇಖಿಸಿರುವ ಇತರೆ ಎಲ್ಲಾ ಷರತ್ತುಗಳು ಸಹ ಅನ್ವಯವಾಗುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನೌಕರರು ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯವನ್ನು ಪಡೆಯಬೇಕಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+