ಕೇರಳದ ಎಲ್‌ಡಿಎಫ್ (Left Democratic Front) ಸರ್ಕಾರ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಮುನ್ನವೇ, ಕಲ್ಯಾಣ ಪಿಂಚಣಿಯ (Welfare Pension) ಹೆಚ್ಚಿಸುವ ಯೋಜನೆಯನ್ನು ರೂಪಿಸುತ್ತಿದೆ. ಪ್ರಸ್ತುತ 1,600 ರೂಪಾಯಿಯಿಂದ ಹೆಚ್ಚುವರಿ ಪಿಂಚಣಿ ಹಣವಾಗಿ ಮಾಡಬೇಕೆಂದು ಯೋಜಿಸಿ, ಈಗಾಗಲೇ ಚರ್ಚೆ ನಡೆಯುತ್ತಿದೆ. ಇನ್ನು ಸರ್ಕಾರ ಚುನಾವಣೆಗೆ ಮುನ್ನ ಈ ನಿರ್ಧಾರ ತೆಗೆದುಕೊಳ್ಳುತ್ತಾ? ಇಲ್ವಾ ಎಂದು ಕಾದು ನೋಡಬೇಕಿದೆ. ಈ ಯೋಜನೆಯಿಂದ ಸುಮಾರು 62 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯುವ ಸಾಧ್ಯತೆಯಿದ್ದು, ಕೇರಳ ಸರ್ಕಾರದ (Kerala Govt) ಚುನಾವಣಾ ರಾಜಕೀಯಕ್ಕೆ ಇದು ದೊಡ್ಡ ಬೂಸ್ಟ್ ನೀಡಬಹುದು ಎನ್ನಲಾಗಿದೆ.

ಕೇರಳದಲ್ಲಿ ಇನ್ನು ಮುಂದೆ ವೆಲ್‌ಫೇರ್ ಪೆನ್ಷನ್ ಅನ್ನು 1,800 ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದ್ದು, ಮುಂದಿನ ತಿಂಗಳಿನಿಂದ ಈ ಪಿಂಚಣಿಯಲ್ಲಿ 200 ರೂ.ಗಳ ಏರಿಕೆ ಆಗಲಿದೆ ಎನ್ನಲಾಗಿದೆ. ಹಣಕಾಸು ಸಚಿವರ ನಿವಾಸದಲ್ಲಿ ನಡೆದ ಕಾರ್ಯದರ್ಶಿಗಳ ಔತಣಕೂಟದಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕೆಲವೇ ದಿನಗಳಲ್ಲಿ ಪಿಂಚಣಿ ಹೆಚ್ಚಳ!
ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ಕಲ್ಯಾಣ ಪಿಂಚಣಿಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸ್ತುತ, ರಾಜ್ಯದಲ್ಲಿ 1,600 ರೂ. ಕಲ್ಯಾಣ ಪಿಂಚಣಿ ನೀಡಲಾಗುತ್ತಿದೆ.
ಮುಖ್ಯಮಂತ್ರಿ ಮುಂದಿನ ತಿಂಗಳ ಆರಂಭದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದಿನ ತಿಂಗಳು, ಒಂದು ತಿಂಗಳ ಬಾಕಿಯನ್ನೂ ಒಳಗೊಂಡಂತೆ ಪಿಂಚಣಿ ನೀಡಲಾಗುವುದು ಎಂದು ವರದಿಯಾಗಿದ್ದು. ಈ ಮೂಲಕ ಕೆಲವೇ ದಿನಗಳಲ್ಲಿ ಕೇರಳ ಸರ್ಕಾರ ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಲಿದೆ ಎಂದು ವರದಿಯಾಗಿದೆ.
ಇನ್ನು ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಶೀಘ್ರದಲ್ಲೇ ಮಹತ್ವದ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ. ವೇತನ ಪರಿಷ್ಕರಣೆಗಾಗಿ ಆಯೋಗವನ್ನು ನೇಮಿಸಲಾಗುವುದು, ಇದರ ಅವಧಿ ಎರಡು ತಿಂಗಳು ಇರುತ್ತದೆ.
ಆಯೋಗವು ಎರಡು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಸರ್ಕಾರಿ ನೌಕರರ ಡಿಎ (ಭತ್ಯೆ) ಹೆಚ್ಚಳವನ್ನು ಜಾರಿಗೆ ತರಲು ಸಹ ನಿರ್ಧರಿಸಲಾಗಿದೆ. 2023ರ ಜನವರಿಯಲ್ಲಿ ಪಾವತಿಸಬೇಕಿದ್ದ ಡಿಎ ಹೆಚ್ಚಳವನ್ನು ನೀಡಲಾಗುವುದು ಎಂದು ವರದಿಯಾಗಿದೆ.
ಇದಲ್ಲದೆ, 2019ರ ಬಾಕಿ ಇರುವ ಎರಡು ಕಂತುಗಳನ್ನು 2026ರ ಜನವರಿಯಲ್ಲಿ ಪಾವತಿಸಲು ಸಹ ನಿರ್ಧರಿಸಲಾಗಿದೆ. ಈ ಹೆಚ್ಚಳವನ್ನು ಸ್ವಾಗತಿಸಿದ ಸೆಬಾಸ್ಟಿಯನ್ ಪಾಲ್, ಇದು ಸಕಾಲಿಕ ಹೆಚ್ಚಳವಾಗಿದೆ ಮತ್ತು ಪಿಂಚಣಿ ಪಡೆಯುವವರಿಗೆ ಇದು ದೊಡ್ಡ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಿದರು.
ಕಲ್ಯಾಣ ಪಿಂಚಣಿ ಈಗ ಕೇರಳ ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ವಿವಿಧ ರೀತಿಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸೆಬಾಸ್ಟಿಯನ್ ಪಾಲ್ ತಿಳಿಸಿದರು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications