ಎಸ್‌ಬಿಐ ಗ್ರಾಹಕರಿಗೆ (SBI Customers) ಗುಡ್ ನ್ಯೂಸ್! ಇದೀಗ ಭಾರತದ ನಂಬರ್ ಒನ್ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಇನ್ಮೇಲೆ ಎಲ್ಲಾ ಶಾಖೆಗಳಲ್ಲಿ 2026 ಮಾರ್ಚ್ ಒಳಗಡೆ ಏಕರೂಪದ ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಇದು ಬ್ಯಾಂಕ್‌ನ ಹಲವು ಸೇವೆಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಗ್ರಾಹಕರು ಇನ್ಮೇಲೆ ಒಮ್ಮೆ ಕೆವೈಸಿ ಪ್ರಕ್ರಿಯೆಯನ್ನು (KYC Update) ಪೂರ್ಣಗೊಳಿಸಿದ್ರೆ, ನಂತರ ಯಾವುದೇ ಸಾಲ ಅಥವಾ ಹೂಡಿಕೆ ಸೇವೆಗಳನ್ನು ಪಡೆಯಬೇಕೆಂದರೆ ಮತ್ತೆ ಮತ್ತೆ ಪರಿಶೀಲನೆ ನಡೆಸಬೇಕಾಗಿಲ್ಲ.

SBI ಅಧ್ಯಕ್ಷ ಸಿ.ಎಸ್. ಶೆಟ್ಟಿ ಅವರು ಬ್ಯಾಂಕಿನ ಎರಡನೇ ಹಣಕಾಸು ವರ್ಷದ ಫಲಿತಾಂಶಗಳನ್ನು ಪ್ರಕಟಿಸುವ ಸಂದರ್ಭದಲ್ಲಿ, "ನಾವು KYC ಅನ್ನು ಸೇವೆಯಾಗಿ ಒದಗಿಸುತ್ತೇವೆ" ಎಂದು ಹೇಳಿದ್ದಾರೆ. ವಂಚನೆಯನ್ನು ತಡೆಗಟ್ಟಲು ಮತ್ತು ಗ್ರಾಹಕರ ಡೇಟಾವನ್ನು ಅಪ್ಡೇಟ್ ಮಾಡಲು KYC ಅತ್ಯಗತ್ಯವಾಗಿದ್ದರೂ, ಇದು ತುಂಬಾ ಕಷ್ಟಕರ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ KYC ಪ್ರಕ್ರಿಯೆಯನ್ನು ಸರಳಗೊಳಿಸಲು ಎಸ್‌ಬಿಐ ನಿರ್ಧರಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ವಿಶೇಷವಾಗಿ ಮೂಲ ಮತ್ತು ಜನ ಧನ ಖಾತೆಗಳ ದೊಡ್ಡ ಪ್ರಮಾಣದ ಗ್ರಾಹಕರಿಗೆ ಆಗಾಗ ಕೆವೈಸಿ ಅಪ್ಡೇಟ್ ಮಾಡುತ್ತಿರಬೇಕು. ಆದರೆ ಇದರಿಂದ ಬಳಕೆದಾರರಿಗೂ ತುಂಬಾನೇ ತೊಂದರೆಯಾಗುತ್ತಿತ್ತು ಮತ್ತು ಕೆಲವೊಮ್ಮೆ ಖಾತೆ ನಿರ್ಬಂಧಗಳಿಗೆ ಕಾರಣವಾಗುತ್ತಿತ್ತು. ಅಲ್ಲದೇ ಸದ್ಯ SBI ಗ್ರಾಹಕರು ಹೊಸ ಸೇವೆ ಪಡೆದಾಗಲೆಲ್ಲಾ KYC ಪ್ರಕ್ರಿಯೆಯನ್ನು ಅಥವಾ ಮರು-KYC ಅಪ್ಡೇಟ್ ಮಾಡಬೇಕು. ಆದ್ರೆ ಇನ್ಮೇಲೆ ಈ ಸಮಸ್ಯೆ ಇರಲ್ಲ ಎಂದು ಎಸ್‌ಬಿಐ ಹೇಳಿದೆ.
"ಆದ್ದರಿಂದ ಎಸ್‌ಬಿಐನಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದೆ ದೊಡ್ಡ ತೊಡಕಾಗಿದೆ. ಅದರಲ್ಲೂ SBI ನಲ್ಲಿ ಮಾತ್ರ 15 ವಿಭಿನ್ನ ರೀತಿಯಲ್ಲಿ KYC ಮಾಡಲಾಗುತ್ತದೆ ಎಂದು ನಾವು ಅರಿತುಕೊಂಡಿದ್ದೇವೆ. ಆದ್ದರಿಂದ, ನಾವು ನಮ್ಮದೇ ಪ್ರಕ್ರಿಯೆಗಳನ್ನು ಪರಿಷ್ಕರಿಸಲು ಮತ್ತು ಸುಧಾರಿಸಲು ಬಯಸಿದ್ದೇವೆ." ಎಂದು ಶೆಟ್ಟಿ ವಿವರಿಸಿದರು.
ಈ KYC ಸುಧಾರಣೆಯು SBI ಯ 'ಪ್ರಾಜೆಕ್ಟ್ ಸರಳ್' (Project Saral) ಎಂಬ ವಿಶಾಲ ಯೋಜನೆ ಅಡಿಯಲ್ಲಿ ಬರಲಿದೆ ಎಂದು ಹೇಳಲಾಗಿದೆ.
"YONO 2.0" ಬಿಡುಗಡೆಗೆ ಸಜ್ಜು
ಇನ್ನು ಎಸ್‌ಬಿಐ ಬ್ಯಾಂಕ್‌ನ ಡಿಜಿಟಲ್ ಅಪ್ಲಿಕೇಶನ್‌ನ ಎರಡನೇ ವರ್ಷನ್ ಆಗಿರುವ 'ಯೋನೊ 2.0' ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿ.ಎಸ್ ಶೆಟ್ಟಿ ಹೇಳಿದ್ದಾರೆ. "ಪ್ರಸ್ತುತ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ನಾವು ಗುರಿ ಹೊಂದಿದ್ದೇವೆ. ಯಾವುದೇ ಸಮಸ್ಯೆಗಳು ಎದುರಾಗದಿದ್ದರೆ, ಈ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುತ್ತೇವೆ" ಎಂದು ಹೇಳಿದರು. ಹೊಸ ಅಪ್ಲಿಕೇಶನ್ ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ ಎನ್ನಲಾಗಿದೆ.
ಈಗಾಗಲೇ ಬ್ಯಾಂಕ್ 9.3 ಕೋಟಿ ಮೊಬೈಲ್ ಬ್ಯಾಂಕಿಂಗ್ ಗ್ರಾಹಕರು ಮತ್ತು 10 ಕೋಟಿ ಇಂಟರ್ನೆಟ್ ಬ್ಯಾಂಕಿಂಗ್ ಗ್ರಾಹಕರನ್ನು ಹೊಂದಿದೆ. ಕೆಲವರು ಎರಡನ್ನೂ ಬಳಸುತ್ತಿದ್ದರೂ, ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಮಾನ್ಯ ಅನುಭವವನ್ನು ನೀಡುವುದು ಇದರ ಹಿಂದಿನ ಉದ್ದೇಶ ಎಂದು ಶೆಟ್ಟಿ ಹೇಳಿದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications