ಸಾಮಾನ್ಯವಾಗಿ ರೈಲ್ವೇ ಇಲಾಖೆ, ಖಾಸಗಿ ಬಸ್‌ನವರು, ಟೂರಿಸ್ಟ್ ಕಂಪನಿಗಳು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ನಿತ್ಯ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುತ್ತಿರುತ್ತದೆ. ಕೆಲವೊಮ್ಮೆ ತೀರ್ಥಕ್ಷೇತ್ರಗಳಿಗಾದ್ರೆ, ಇನ್ನೂ ಕೆಲವೊಮ್ಮೆ ಪ್ರವಾಸಿ ತಾಣಗಳಿಗೆ ಹೋಗೀ ಪ್ಲಾನ್ ಮಾಡುತ್ತಾರೆ. ಆದರೆ ಇದೀಗ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಜನರಿಗೆ ಗುಡ್ ನ್ಯೂಸ್ ಕೊಟಗಟಿದೆ. ಕೆಎಸ್‌ಟಿಡಿಸಿ ಬೆಂಗಳೂರಿನಿಂದ ತಿರುಪತಿಗೆ (Bengaluru-Tirupati Tour Package) ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ.

ಹೌದು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಒಂದು ದಿನದ ಬೆಂಗಳೂರು-ತಿರುಮಲ-ಮಂಗಾಪುರ ಯಾತ್ರಾ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಬೆಂಗಳೂರಿನಿಂದ ನೇರವಾಗಿ ಹೊರಡುವ ಈ ಎಸಿ ಬಸ್ ಯಾತ್ರೆಯು, ಭಕ್ತರಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಸರ್ವ ದರ್ಶನ ಹಾಗೂ ಪದ್ಮಾವತಿ ದೇವಾಲಯ ಭೇಟಿಗೆ ಅವಕಾಶವನ್ನು ಕಲ್ಪಿಸಲಿದೆ.
ಒಂದೇ ದಿನದಲ್ಲಿ ತಿರುಪತಿ ಪ್ರಯಾಣ!
ಮಂತ್ರಾಲಯ ಮತ್ತು ಮೈಸೂರು-ಊಟಿ-ಕೊಡೈಕೆನಾಲ್‌ನಂತಹ ಹೊಸ ಪ್ರವಾಸಿ ಮಾರ್ಗಗಳ ಜತೆಗೆ ಈ ಪ್ಯಾಕೇಜ್ ಸಹ ಲಭ್ಯವಿದೆ. ಯಾತ್ರಾರ್ಥಿಗಳು ಡಿಲಕ್ಸ್ ಎಸಿ ಅಥವಾ ವೋಲ್ವೋ ಎಸಿ ಬಸ್‌ಗಳಲ್ಲಿ ಪ್ರಯಾಣಿಸಲು, ತಮಗೆ ಬೇಕಾದ ಆಯ್ಕೆ ಮಾಡಬಹುದು. ಇದು ಒಂದೇ ದಿನದಲ್ಲಿ ಸಂಪೂರ್ಣ ತೀರ್ಥಯಾತ್ರೆಯ ಅನುಭವಕ್ಕೆ ಅವಕಾಶ ಕಲ್ಪಿಸಿದೆ.
ಈ ಯಾತ್ರೆಯು ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಬಸ್ ಮರುದಿನ ಬೆಳಗಿನ ಜಾವ 2 ಗಂಟೆಗೆ ತಿರುಪತಿ ತಲುಪಲಿದೆ. ಪ್ರಯಾಣಿಕರಿಗೆ ಬೆಳಗ್ಗೆ 4:30 ರವರೆಗೆ ದರ್ಶನ ಸಿದ್ಧತೆಗೆ ಸಮಯಾವಕಾಶವಿರುತ್ತದೆ.
ಉಪಹಾರದ ನಂತರ, ಭಕ್ತರನ್ನು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಸರ್ವ ದರ್ಶನಕ್ಕೆ ಕರೆದೊಯ್ಯಲಾಗುವುದು. ಬಳಿಕ ಶ್ರೀ ಪದ್ಮಾವತಿ ದೇವಾಲಯಕ್ಕೂ ಕರೆದುಕೊಂಡು ಹೋಗಲಾಗುತ್ತದೆ. ಎರಡೂ ದೇವಾಲಯಗಳ ದರ್ಶನ ಪೂರ್ಣಗೊಂಡ ನಂತರ, ಭಕ್ತರನ್ನು ಮರಳಿ ಬೆಂಗಳೂರಿಗೆ ಕರೆದೊಯ್ಯಲಾಗುವುದು. ಇದರೊಂದಿಗೆ ಒಂದು ದಿನದ ಯಾತ್ರೆ ಮುಕ್ತಾಯವಾಗುತ್ತದೆ.
ದರ ಎಷ್ಟು?
ಇನ್ನು ಈ ಪ್ಯಾಕೇಜ್‌ನಲ್ಲಿ ಡಿಲಕ್ಸ್ ಎಸಿ ಬಸ್‌ಗೆ ಪ್ರತಿ ವ್ಯಕ್ತಿಗೆ ₹2,270 ಮತ್ತು ವೋಲ್ವೋ ಎಸಿ ಬಸ್‌ಗೆ ಪ್ರತಿ ವ್ಯಕ್ತಿಗೆ ₹2,300 ವೆಚ್ಚ ನಿಗದಿಪಡಿಸಲಾಗಿದೆ. ಬುಕಿಂಗ್ ಸಮಯದಲ್ಲಿ ಭಕ್ತರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಸ್ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು.
ಬುಕಿಂಗ್ ಮಾಡುವುದು ಹೇಗೆ?
- KSTDC ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. (WWW.kstdc.co)
- KSTDC ಆಪ್ ಅಥವಾ ಹತ್ತಿರದ KSTDC ಟಿಕೆಟ್ ಬುಕಿಂಗ್ ಕೌಂಟರ್‌ಗಳಳ್ಲಿ
- ಆನ್‌ಲೈನ್ ಪೇಮೆಂಟ್ ಕೂಡಾ ಲಭ್ಯವಿದೆ.
ಒಂದು ಪ್ಯಾಕೇಜ್, ಹಲವು ಸೇವೆ!
- ಇನ್ನು ಈ ಪ್ಯಾಕೇಜ್‌ನಲ್ಲಿ ರೌಂಡ್ ಟ್ರಿಪ್ ಎಸಿ ಬಸ್ ಪ್ರಯಾಣ
- ತಿರುಪತಿ ದರ್ಶನ ಟಿಕೆಟ್
- ಬ್ರೇಕ್‌ಫಾಸ್ಟ್ ಮತ್ತು ಊಟ
- ಗೈಡ್ ಸಹಾಯ
- ಪ್ರಸಾದ (ಲಡ್ಡು)
ಸದ್ಯ ಕೆಎಸ್‌ಟಿಡಿಸಿ ಈ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದು, ತಿರುಪತಿ ಹೋಗ್ಬೇಕು ಅನ್ನೋ ಪ್ಲಾನ್ ಮಾಡಿದ್ದವರಿಗೆ ಬೆಸ್ಟ್ ಆಗಿದೆ. ಇದೇ ರೀತಿ ನಿರಂತರ ಅಪ್ಡೇಟ್‌ಗಾಗಿ ಕೆಎಸ್‌ಟಿಡಿಸಿ ವೆಬ್‌ಸೈಟ್‌ಗೆ ಹೋಗಿ ಮಾಹಿತಿ ಪಡೆಯಬಹುದು.


Click it and Unblock the Notifications