ತುರ್ತು ಸಂದರ್ಭಗಳಲ್ಲಿ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಬೇಕಾದ್ರೆ ವಿಮಾನ ಪ್ರಯಾಣ ಮಾಡಲೇಬೇಕು. ಅದೇ ರೀತಿ ಭಾರತದಲ್ಲಿ ದಿನಕ್ಕೆ ಸಾವಿರಾರು ಜನರು ವಿಮಾನದ (Flight) ಮೂಲಕ ಪ್ರಯಾಣ ಬೆಳೆಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಪ್ರಯಾಣ ದಿನ ಕೂಡಾ ಬದಲಾಗುತ್ತದೆ. ಆ ಸಂದರ್ಭದಲ್ಲಿ ಟಿಕೆಟ್ ಕ್ಯಾನ್ಸಲ್ ಅಥವಾ ದಿನಾಂಕ ಬದಲಾಯಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಬುಕ್ ಮಾಡಿದಾಗ ನೀಡಿದ ಹಣ ಸಂಪೂರ್ಣವಾಗಿ ಕೈ ಸೇರುವುದಿಲ್ಲ. ಆ ಶುಲ್ಕ, ಈ ಶುಲ್ಕ ಎಂದು ಕಟ್ ಮಾಡಿ, ಕೊನೆ ಸ್ವಲ್ಪವೇ ಹಣ ನಮಗೆ ಮರಳಿ ಬರುತ್ತದೆ.

ಆದರೆ ಇನ್ಮೇಲೆ ಹಣ ಕಟ್ ಮಾಡ್ತಾರೆ ಅನ್ನೋ ಟೆನ್ಷನ್ ಇರಲ್ಲ. ಏಕೆಂದರೆ ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರಿಗಾಗಿ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್!
ವಿಮಾನ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡಲು, ಇದೀಗ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ಮೇಲೆ ಪ್ರಯಾಣಿಕರು ಖರೀದಿಸಿದ ಟಿಕೆಟ್ ಹಣದ ಮೊತ್ತವನ್ನು 21 ದಿನಗಳಲ್ಲಿ ಅವರಿಗೆ ಮರುಪಾವತಿಸಬೇಕು ಎಂಬ ಕರಡು ನಿಯಮಗಳನ್ನು ಪ್ರಸ್ತಾಪಿಸಿದೆ.
ಭಾರತದ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ, ವಿಮಾನ ಟಿಕೆಟ್ ರಿಫಂಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಇದು ವಿಮಾನಯಾನ ಸಂಸ್ಥೆಗಳ ಜವಾಬ್ದಾರಿಯನ್ನು ಹೆಚ್ಚಿಸಲು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೌದು, ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ ಕ್ಯಾನ್ಸಲ್ ಮಾಡಲು ಅಥವಾ ತಿದ್ದುಪಡಿ ಮಾಡಲು ಅವಕಾಶ ನೀಡುವ ದೃಷ್ಟಿಯಿಂದ ಹೊಸದಾಗಿ "ಲುಕ್ ಇನ್ ಆಪ್ಷನ್" (Look In Option) ಅನ್ನು ಜಾರಿಗೆ ತಂದಿದೆ.
DGCA ಹೊಸ ನಿಯಮ:
ಡಿಜಿಸಿಎ (DGCA) ವಿಮಾನ ಟಿಕೆಟ್ ರದ್ದತಿ ಮತ್ತು ಮರುಪಾವತಿ ನಿಯಮಗಳಲ್ಲಿ ಮಹತ್ವದ ಸೂಚನೆಯನ್ನು ಹೊರಡಿಸಿದೆ. ಇದರ ಅಡಿಯಲ್ಲಿ, ಈಗ 48 ಗಂಟೆಗಳ ಒಳಗೆ ಟಿಕೆಟ್ ರದ್ದು ಮಾಡಿದರೆ ಅಥವಾ ತಿದ್ದುಪಡಿ ಮಾಡಿದ್ರೆ ಯಾವುದೇ ಶುಲ್ಕಗಳು ವಿಧಿಸಲಾಗುವುದಿಲ್ಲ. ಅಲ್ಲದೆ, 21 ದಿನಗಳಲ್ಲಿ ನೀವು ಟಿಕೆಟ್ ಮಾಡಿದ ಹಣದ ಸಂಪೂರ್ಣ ಹಣ ಮರುಪಾವತಿಯಾಗಲಿದೆ.
ಡಿಜಿಸಿಎನ ಹೊಸ ನಿಯಮದ ಪ್ರಕಾರ, ಟಿಕೆಟ್ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಅದನ್ನು ಕ್ಯಾನ್ಸಲ್ ಮಾಡಬಹುದು ಅಥವಾ ಬದಲಾಯಿಸಬಹುದು. ಅಷ್ಟೇ ಅಲ್ಲ, ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಕೂಡಾ ಪಾವತಿಸುವ ಅಗತ್ಯವಿಲ್ಲ.
ಸಂಪೂರ್ಣ ರಿಫಂಡ್ ಸೌಲಭ್ಯ:
ಇನ್ನು ಶೀಘ್ರದಲ್ಲೇ ಟಿಕೆಟ್ ಮರುಪಾವತಿ ಮತ್ತು ರದ್ದತಿ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ಜಾರಿಗೆ ಬರುವುದಾಗಿ ಡಿಜಿಸಿಎ ಹೇಳಿದೆ. ಹೊಸ ಪ್ರಸ್ತಾವನೆಯ ಪ್ರಕಾರ, ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ನಿಮ್ಮ ಟ್ರಾವೆಲ್ ಪ್ಲಾನ್ ಏನಾದರೂ ಬದಲಾವಣೆಯಾದರೆ, ಯಾವುದೇ ದಂಡವಿಲ್ಲದೆ, ಹೆಚ್ಚುವರಿ ಶುಲ್ಕ ಪಾವತಿ ಮಾಡದೆ ಟಿಕೆಟ್ ರದ್ದುಗೊಳಿಸಬಹುದು ಅಥವಾ ದಿನಾಂಕ ಬದಲಾವಣೆ ಮಾಡಬಹುದು.
DGCA ಗ್ರಾಹಕರ ಅನುಕೂಲಕ್ಕಾಗಿ ಈ ಹೊಸ ನಿರ್ಧಾರವನ್ನು ಕೈಗೊಂಡಿದ್ದು, ಇದು ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುತ್ತಿದೆ. ವಿಮಾನಯಾನ ಸಂಸ್ಥೆಗಳು 21 ಕೆಲಸದ ದಿನಗಳಲ್ಲಿ ಟಿಕೆಟ್ ರದ್ದುಗೊಳಿಸಿದ ಗ್ರಾಹಕರಿಗೆ ಹಣ ಮರುಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಟಿಕೆಟ್ ಅನ್ನು ಟ್ರಾವೆಲ್ ಏಜೆಂಟ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಖರೀದಿಸಿದರೂ, ರಿಫಂಡ್ ಜವಾಬ್ದಾರಿ ಮಾತ್ರ ವಿಮಾನಯಾನ ಸಂಸ್ಥೆಯದ್ದೇ ಆಗಿರುತ್ತದೆ ಎಂದು ಡಿಜಿಸಿಎ ಹೇಳಿದೆ.
ಈ ಹಿಂದೆಲ್ಲಾ ಟಿಕೆಟ್ ಬುಕ್ ಮಾಡುವಾಗ ಒಂದು ಸಣ್ಣ ಹೆಸರು ತಪ್ಪಾಗಿದ್ದರೂ ಅದಕ್ಕೇ ಹೆಚ್ಚುವರಿ ಶುಲ್ಕ ವಿಧಿಸಬೇಕಿತ್ತು. ಆದ್ರೆ, ಇನ್ಮುಂದೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸದೆ 24 ಗಂಟೆಗಳ ಒಳಗೆ ಹೆಸರನ್ನು ಸರಿಪಡಿಸಬಹುದು. ಆದರೆ ಈ ಆಯ್ಕೆ ನೀವು ನೇರವಾಗಿ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ನಿಂದ ಟಿಕೆಟ್ ಖರೀದಿಸಿದರೆ ಮಾತ್ರ ಲಭ್ಯವಿರುತ್ತದೆ.
ಷರತ್ತುಗಳು ಏನೇನಿದೆ?
ಇನ್ನು ಡಿಜಿಸಿಎ ಜಾರಿಗೆ ತಂದ ಈ 48 ಗಂಟೆಗಳ 'ಲುಕ್-ಇನ್ ಆಪ್ಷನ್' ಎಲ್ಲಾ ಟಿಕೆಟ್‌ಗಳಿಗೂ ಅನ್ವಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ. ಅಂದರೆ ದೇಶೀಯ ವಿಮಾನಗಳಿಗಾಗಿ, 5 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ರೆ ಮಾತ್ರ ಅನ್ವಯವಾಗುತ್ತದೆ.
ಹಾಗೆಯೇ ಅಂತರರಾಷ್ಟ್ರೀಯ ವಿಮಾನಗಳಿಗೆ, ಈ ಮಿತಿಯನ್ನು 15 ದಿನಗಳಿಗೆ ನಿಗದಿಪಡಿಸಲಾಗಿದೆ. ಅಂದರೆ, ನಿಮ್ಮ ಪ್ರಯಾಣಕ್ಕಿಂದ ಎರಡು ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ರೆ ಇದು ಅನ್ವಯವಾಗುವುದಿಲ್ಲ.
ಅಷ್ಟೇ ಅಲ್ಲದೇ ವೈದ್ಯಕೀಯ ತುರ್ತುಸ್ಥಿತಿ ಅಥವಾ ಕಾಯಿಲೆ ಕಾರಣದಿಂದ ಯಾವುದೇ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದರೆ, ವಿಮಾನಯಾನ ಸಂಸ್ಥೆಯು ಸಂಪೂರ್ಣ ಮರುಪಾವತಿಯನ್ನು ನೀಡಬಹುದು ಅಥವಾ 'ಕ್ರೆಡಿಟ್ ಶೆಲ್' ಅನ್ನು ನೀಡಬಹುದು. ಎಂದು ಹೇಳಲಾಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications