ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುವವರಿಗೆ ಯಾವುದು ಬೆಸ್ಟ್ ಟೈಮ್ ಎಂದು ಹೇಳೋದೆ ಅಸಾಧ್ಯ. ಆದ್ರೆ ಬೆಲೆ, ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಬೆಸ್ಟ್ ಎಂದು ತಜ್ಞರು ಹೇಳ್ತಾರೆ. ಇತ್ತೀಚೆಗಂತೂ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ನಿನ್ನೆಯೂ ಕೂಡಾ ಬೆಳಿಗ್ಗೆ ಇದ್ದ ಚಿನ್ನದ ಬೆಲೆ ಸಂಜೆ ವೇಳೆಗೆ ದಿಢೀರ್ ಏರಿಕೆ ಕಂಡಿತ್ತು. ಹಾಗಿದ್ರೆ ಭಾರತದಲ್ಲಿ ಇಂದು (ಅ.16) ಚಿನ್ನದ ಬೆಲೆ ಹೇಗಿದೆ (India Gold Rate) ಎಂದು ಈ ಸುದ್ದಿಯಲ್ಲಿ ನೋಡೋಣ.

ಭಾರತದಲ್ಲಿ 24K ಚಿನ್ನದ ಬೆಲೆ:
ನಿನ್ನೆಗೆ ಹೋಲಿಸಿದ್ರೆ ಇಂದು (ಅ.16) 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆಗಳಾಗಿಲ್ಲ. ಅಂದ್ರೆ ಯಥಾಸ್ಥಿತಿಯಲ್ಲಿದೆ. ನಿನ್ನೆ ಸಂಜೆ ವೇಳೆಗೆ ರೂ. 12,944 ಆಗಿತ್ತು, ಇದೀಗ ನಿನ್ನೆ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. ಪ್ರತೀ ಗ್ರಾಂ ಚಿನ್ನದ ಬೆಲೆ ಇಂದು 12,944 ರೂ ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗದೆ, 1,03,552 ರೂ.ನಲ್ಲೇ ನಿಂತಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,29,440 ಇದ್ದು, 100 ರೂ. ಚಿನ್ನದ ಬೆಲೆ 12,94,400 ರೂ. ನಲ್ಲೇ ಸ್ಥಿರವಾಗಿದೆ.
22K ಚಿನ್ನದ ಬೆಲೆ:
24K ಚಿನ್ನಕ್ಕಿಂತ 22K ಚಿನ್ನದಲ್ಲಿ ಮಿಶ್ರಣ ಸ್ವಲ್ಪ ಜಾಸ್ತಿಯಿದ್ದು, ಇದರ ಬೆಲೆ ಕೂಡಾ ಕಡಿಮೆಯಿರುತ್ತದೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11865 ರೂ. ಸ್ಥಿರವಾಗಿ ನಿಂತಿದೆ. 8 ಗ್ರಾಂ ಚಿನ್ನದ ಬೆಲೆ 94,920 ರೂ ಆಗಿದ್ದು, ನಿನ್ನೆನೂ ಇಷ್ಟೇ ಇತ್ತು. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲೂ ಯಾವದೇ ಬದಲಾಗದೆ ನಿಂತ ನೀರಂತೆ 1,18,660 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 11,86,500 ರೂ. ನಲ್ಲಿ ಸ್ಥಿರವಾಗಿದೆ..
18K ಚಿನ್ನದ ಬೆಲೆ ಹೇಗಿದೆ?
24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನದಲ್ಲಿ ಪ್ಯೂರಿಟಿಯೂ ಕಡಿಮೆ, ಬೆಲೆಯೂ ಕಡಿಮೆ. ಕಾರಣ ಇದರಲ್ಲಿರುವ ಮಿಶ್ರಣ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ಇಂದು 9,708 ರೂ ಸ್ಥಿರವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 77,664 ಇದ್ದು, 10 ಗ್ರಾಂ ಚಿನ್ನದ ಬೆಲೆ 97,080 ರೂ. ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆಯಲ್ಲೂ ಯಾವುದೇ ಬದಲಾವಣೆ ಕಾಣದೆ 9,70,800 ರೂ. ಇದೆ. ಈ ಮೂಲಕ ಅಕ್ಟೋಬರ್ 16 ರಂದು 24K, 22K, 18K ಚಿನ್ನದ ಬೆಲೆಯಲ್ಲಿ ನಿನ್ನೆಯ ಬೆಲೆಯೇ ಸ್ಥಿರವಾಗಿದ್ದು, ಯಾವುದೇ ಬದಲಾವಣೆಗಳಾಗಿಲ್ಲ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,982, 22K ರೂ. 11,900, 18K ರೂ. 9,830
ಮುಂಬೈ: 24K ರೂ. 12,944, 22K ರೂ. 11,865, 18K ರೂ. 9,708
ದೆಹಲಿ: 24K ರೂ. 12,959, 22K ರೂ. 11,880, 18K ರೂ. 9,723
ಕೋಲ್ಕತ್ತಾ: 24K ರೂ. 12,944, 22K ರೂ. 11,865, 18K ರೂ. 9,708
ಬೆಂಗಳೂರು: 24K ರೂ. 12,944, 22K ರೂ. 11,865, 18K ರೂ. 9,708
ಹೈದರಾಬಾದ್: 24K ರೂ. 12,944, 22K ರೂ. 11,865, 18K ರೂ. 9,708
ಕೇರಳ: 24K ರೂ. 12,944, 22K ರೂ. 11,865, 18K ರೂ. 9,708
ಪುಣೆ: 24K ರೂ. 12,944, 22K ರೂ. 11,865, 18K ರೂ. 9,708
ವಡೋದರಾ: 24K ರೂ. 12,949, 22K ರೂ. 11,870, 18K ರೂ. 9,713
ಅಹಮದಾಬಾದ್: 24K ರೂ. 12,949, 22K ರೂ. 11,870, 18K ರೂ. 9,713
ಸ್ಪಾಟ್ ವಿವರ:
ಅಕ್ಟೋಬರ್ 16ರ, ರಾಯಿಟರ್ಸ್ ವರದಿ ಪ್ರಕಾರ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆ, ಅಮೆರಿಕದ ಫೆಡರಲ್ ಸರ್ಕಾರದ ಸ್ಥಗಿತ ಮತ್ತು ಹೆಚ್ಚಿದ ದರ ಕಡಿತದ ನಡುವೆ, 0311 GMT ವೇಳೆಗೆ ಸ್ಪಾಟ್ ಚಿನ್ನವು 0.8% ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ $4,241.77 ಪ್ರತಿ ಔನ್ಸ್‌ಗೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಅತ್ತ ಚಿನ್ನದ ಬೆಲೆ ನಿನ್ನೆಯ ಬೆಲೆಯಲ್ಲೇ ಯಥಾಸ್ಥಿತಿಯಲ್ಲಿದ್ದರೆ, ಇತ್ತ ಬೆಳ್ಳಿ ಬೆಲೆ ನಿನ್ನೆಗಿಂತ ಸ್ವಲ್ಪ ಇಳಿಕೆಯಾಗಿದೆ. ಇತ್ತೀಚೆಗೆ ಚಿನ್ನಕ್ಕಿಂತ ಹೆಚ್ಚಿನವರು ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದ್ದರಿಂದ ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕಯಾಗುತ್ತಿದೆ. ಆದ್ರೆ ಬೆಳ್ಳಿ ಪ್ರಿಯರಿಗೆ ಇಂದು ಕೊಂಚ ರಿಲೀಫ್ ಕೊಟ್ಟಿದ್ದಾರೆ. ಇಂದು ಬೆಳ್ಳಿ ಬೆಲೆಯಲ್ಲಿ ಇಂದು (ಅ.16) ಸ್ವಲ್ಪ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ನಿನ್ನೆಗಿಂತ ಒಂದು ರೂಪಾಯಿ ಕಡಿಮೆಯಾಗಿದ್ದು, ಇಂದು 1 ಗ್ರಾಂ ಬೆಳ್ಳಿ ದರ 189 ರೂ. ಆಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆಯಲ್ಲೂ 8 ರೂ. ಇಳಿಕೆಯಾಗಿದ್ದು, ಇಂದು 1512 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗಿ, ಬೆಳ್ಳಿಯ ಬೆಲೆ 1,890 ರೂ.ಗೆ ತಲುಪಿದೆ. 100 ಗ್ರಾಂ ಮತ್ತು 1000 ಗ್ರಾಂ ಬೆಳ್ಳಿಯ ಬೆಲೆ ಕ್ರಮವಾಗಿ 18,900 ರೂ. ಮತ್ತು 1,89,000 ರೂ. ಆಗಿದ್ದು, ನಿನ್ನೆಗಿಂತ ಸ್ವಲ್ಪ ಇಳಿಕೆಯಾಗಿದೆ.
ಚಿನ್ನ, ಬೆಳ್ಳಿ ಸುರಕ್ಷಿತ ಹೂಡಿಕೆ ಎಂದು ಕೊಂಡು ಶ್ರೀಮಂತರು ಹೂಡಿಕೆ ಮಾಡುತ್ತಲೇ ಇದ್ದಾರೆ. ಆದ್ರೆ ಮಧ್ಯಮ ವರ್ಗದ ಜನರು ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲೇ ಕಾದು ಕುಳಿತಿದ್ದಾರೆ. ಆದ್ರೆ ಚಿನ್ನ, ಬೆಳ್ಳಿ ಹೀಗೆ ಯಾವುದರ ಮೇಲೆಯೂ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುವುದು ಬಹಳ ಮುಖ್ಯ.


Click it and Unblock the Notifications