ಬೆಂಗಳೂರು, ಜೂನ್ 19: ಟೆಕ್ ದೈತ್ಯ ಗೂಗಲ್ ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ(AI) ಚಾಲಿತ ಚಾಟ್‌ಬಾಟ್, ಜೆಮಿನಿ ಮೊಬೈಲ್ ಅಪ್ಲಿಕೇಶನ್ ಕನ್ನಡ ಸೇರಿ ಒಂಬತ್ತು ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಜಗತ್ತಿನಾದ್ಯಂತ ಈಗ ಕೃತಕ ಬುದ್ದಿಮತ್ತೆ ಕುರಿತು ಚರ್ಚೆ ಮತ್ತು ಸಂಶೋಧನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಎಐ ಚಾಲಿತ ಚಾಟ್‌ಬಾಟ್ ಜೆಮಿನಿ ಭಾರತದ ಆಂಡ್ಯಾಯ್ಡ್ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿಯೂ ತಿಳಿಸಿದೆ.
ಈ ಅಪ್ಲಿಕೇಷನ್ ಕನ್ನಡ ಇಂಗ್ಲೀಷ್ ಹಿಂದಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೇ ಗೂಗಲ್ ಒಂಬತ್ತು ಸ್ಥಳೀಯ ಭಾಷೆಗಳನ್ನು "ಜೆಮಿನಿ ಅಡ್ವಾನ್ಸ್‌ಡ್"ಗೆ ಸಂಯೋಜಿಸಿದೆ.
"Google ನ ಅತ್ಯಂತ ಸಮರ್ಥ AI ಮಾದರಿಗಳಿಗೆ ಬಳಕೆದಾರರಿಗೆ ಪ್ರವೇಶವನ್ನು ನೀಡುವ ಜೆಮಿನಿ ಅಪ್ಲಿಕೇಶನ್ ಮತ್ತು ಜೆಮಿನಿ ಅಡ್ವಾನ್ಸ್ಡ್ ಈ ಎರಡೂ ಈಗ ಒಂಬತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ, ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪ್ರವೇಶಿಸಲು ಮತ್ತು ಕೆಲಸಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. "ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಇದರೊಂದಿಗೆ ವ್ಯಾಪಾರ ಉದ್ಯಮಗಳಿಗೆ ಸಹಾಯಕವಾಗುವಂತೆ ಗೂಗಲ್ ಜೆಮಿನಿ ಅಡ್ವಾನ್ಸ್‌ಡ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು ಇದರಲ್ಲಿ ಹೊಸ ಡೇಟಾ ವಿಶ್ಲೇಷಣೆ ಸಾಮರ್ಥ್ಯಗಳು, ಫೈಲ್ ಅಪ್‌ಲೋಡ್‌ಗಳು ಮತ್ತು ಇಂಗ್ಲಿಷ್‌ನಲ್ಲಿ ಗೂಗಲ್ ಸಂದೇಶಗಳಲ್ಲಿ ಜೆಮಿನಿ ಜೊತೆ ಚಾಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ''ರೋಮಾಂಚಕ ಸುದ್ದಿ! ಇಂದು, ನಾವು ಭಾರತದಲ್ಲಿ ಜೆಮಿನಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದ್ದೇವೆ, ಇಂಗ್ಲಿಷ್ ಮತ್ತು 9 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ನಾವು ಈ ಸ್ಥಳೀಯ ಭಾಷೆಗಳನ್ನು ಜೆಮಿನಿ ಸುಧಾರಿತ, ಜೊತೆಗೆ ಇತರ ಹೊಸ ವೈಶಿಷ್ಟ್ಯಗಳಿಗೆ ಸೇರಿಸುತ್ತಿದ್ದೇವೆ ಮತ್ತು ಇಂಗ್ಲಿಷ್‌ನಲ್ಲಿ ಗೂಗಲ್ ಮೆಸೇಜ್‌ನಲ್ಲಿ ಜೆಮಿನಿಯನ್ನು ಪ್ರಾರಂಭಿಸುತ್ತಿದ್ದೇವೆ '' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಜೆಮಿನಿ 1.5 ಪ್ರೊ ಅವೃತ್ತಿ ದೊರಕಲಿದೆ. ಭಾರತವಲ್ಲದೆ, ಟರ್ಕಿ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿಯೂ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.
ಜೆಮಿನಿಗೆ ಹೇಗೆ ಪ್ರವೇಶಿಸುವುದು
ಜೆಮಿನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅಥವಾ Google ಅಸಿಸ್ಟೆಂಟ್ ಮೂಲಕ ಆಯ್ಕೆ ಮಾಡಿ.
ನಂತರ ನೀವು ಕಾರ್ನರ್ ಸ್ವೈಪ್ ಮಾಡುವ ಮೂಲಕ, ಆಯ್ದ ಫೋನ್‌ಗಳಲ್ಲಿ ಪವರ್ ಬಟನ್ ಒತ್ತಿ ಅಥವಾ "ಹೇ ಗೂಗಲ್" ಎಂದು ಹೇಳುವ ಮೂಲಕ ಜೆಮಿನಿ ಬಳಸಬಹುದು.
ಐಒಎಸ್ ನಲ್ಲಿ, ಜೆಮಿನಿ ಪ್ರವೇಶವು ಗೂಗಲ್ ಅಪ್ಲಿಕೇಶನ್‌ನಿಂದ ನೇರವಾಗಿ ಸಿಗುತ್ತದೆ. ಜೆಮಿನಿ ಟಾಗಲ್ ಅನ್ನು ಟ್ಯಾಪ್ ಮಾಡಿ ಮತ್ತು ಚಾಟ್ ಮಾಡಲು ಪ್ರಾರಂಭಿಸಬೇಕು.


Click it and Unblock the Notifications