ಗೂಗಲ್ ಕಂಪನಿಯಲ್ಲಿ ಮತ್ತೆ ಲೇಆಫ್ ಶಬ್ದ ಆರ್ಭಟಿಸಿದೆ. ಇತ್ತಿಚೆಗೆ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಇನ್ಫೋಸಿಸ್, ಟಿಸಿಎಸ್, ವರ್ಲ್‌ಪೂಲ್, ಗೂಗಲ್ ಹೀಗೆ ದೈತ್ಯ ಕಂಪನಿಗಳಲ್ಲಿ ಲೇಆಫ್ ಪ್ರಕ್ರಿಯೆ ನಡೆಯುತ್ತಲೇ ಇದೆ. ಹೀಗಾಗಿ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇದು ಇನ್ನೆಷ್ಟು ದಿನದ ಬದುಕೋ ಎಂಬ ಗೊಂದಲದಲ್ಲೇ ಇರುವಾಗ, ಗೂಗಲ್ ಕಂಪನಿ ಮಂಗಳವಾದ 200 ಉದ್ಯೋಗಗಳನ್ನು ಕಡಿತಗೊಳಿಸಿದೆ ಎನ್ನಲಾಗಿದೆ.

ದೈತ್ಯ ಕಂಪನಿಗಳು ತಮ್ಮ ವೆಚ್ಚವನ್ನು ಡೇಟಾ ಸೆಂಟರ್‍ಗಳು ಮತ್ತು AI ಅಭಿವೃದ್ಧಿ ಕಡೆಗೆ ಮಾರುಹೋಗುತ್ತಿವೆ. ಟೆಕ್ನಾಲಜಿ ಎಂಬುದು ಈಗ ಪಿಡಾಗದಂತೆ ಕಾಣುತ್ತಿದೆ. ಅದೇ ಕಾರಣದಿಂದಲೇ ಉದ್ಯೋಗಿಗಳ ಭವಿಷ್ಯ ಗಾಳಿಯಲ್ಲಿ ತೇಲಿದಂತಾಗಿದೆ. ಇತ್ತ ತನ್ನ ಇನ್ನೂರು ಉದ್ಯೋಗಿಗಳನ್ನು ಕಡಿತಗೊಳಿಸಿರುವ ಗೂಗಲ್, ಗಾಳಿಯಲ್ಲಿ ಗುಂಡು ಹೊಡೆದಂತೆ ಕಾರಣ ತಿಳಿಸಿದೆ. ಅದೇನೆಂದ್ರೆ, ತಂತ್ರಜ್ಞಾನದ ಸಹಯೋಗವನ್ನು ಹೆಚ್ಚಿಸಲು ಮತ್ತು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ನಮ್ಮ ಸಾಮರ್ಥ್ಯವನ್ನು ವಿಸ್ತರಿಸಲು, ಈ ರೀತಿ ಸಣ್ಣ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಅಂದಹಾಗೆ ಆಗಲೇ ಹೇಳಿದಂತೆ ಈ ವಜಾಗೊಳಿಸುವ ಪದ್ದತಿ ಗೂಗಲ್‌ನಲ್ಲಿ ಹೊಸದಾಗಿ ಕಂಡುಬಂದಿಲ್ಲ. ಹಾಗಂತ ತುಂಬಾ ಹಿಂದೆಯೂ ನಡೆದಿದ್ದಲ್ಲ. ಕಳೆದ ತಿಂಗಳಷ್ಟೇ ಗೂಗಲ್ ತನ್ನ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಧನಗಳ ಘಟಕದಿಂದ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ ಅದೇ ಪದ್ದತಿಯನ್ನು ಮುಂದುವರಿಸಿದೆ.
2023ರ ಜನವರಿಯಲ್ಲಿ ಕೂಡ ಗೂಗಲ್-ಪೋಷಕ ಆಲ್ಫಾಬೆಟ್‌ನ ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿತ್ತು. ಈಗಿನ ತರ ನೂರು, ಇನ್ನೂರು ಉದ್ಯೋಗಿಗಳಲ್ಲ.. ಬರೋಬ್ಬರಿ 12,000 ಉದ್ಯೋಗಿಗಳು ಅಥವಾ ಅಥವಾ ಅದರ ಜಾಗತಿಕ ಕಾರ್ಯಪಡೆಯ 6% ರಷ್ಟು ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿತು. ಹಾಗೆಯೇ ಫೆಬ್ರವರಿಯಲ್ಲಿ ಸಲ್ಲಿಸಿದ ಫೈಲಿಂಗ್ ಪ್ರಕಾರ, 2024ರ ಡಿಸೆಂಬರ್ 31ರ ಹೊತ್ತಿಗೆ ಇದು 183,323 ಉದ್ಯೋಗಿಗಳನ್ನು ಹೊಂದಿತ್ತು.
ಇನ್ನು ಗೂಗಲ್‌ನ ಹೊರತುಪಡಿಸಿ ಬೇರೆ ದೊಡ್ಡ ದೊಡ್ಡ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ. ಈ ಪೈಕಿ ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಜನವರಿಯಲ್ಲಿ ತನ್ನ 5% ರಷ್ಟು ಉದ್ಯೋಗಿಗಳನ್ನು, ಪರ್ಫಾರ್ಮೆನ್ಸ್ ಕಡಿಮೆ ನೀಡಿರುವ ಕಾರಣದಿಂದ ವಜಾಗೊಳಿಸಿತ್ತು. ಅದೇ ಸಮಯದಲ್ಲಿ ಯಂತ್ರ ಕಲಿಕೆ ಎಂಜಿನಿಯರ್‌ಗಳ ತ್ವರಿತ ನೇಮಕಾತಿಯೊಂದಿಗೆ ಮುಂದುವರಿಯಿತು.
ಹಾಗೆಯೇ ಮೈಕ್ರೋಸಾಫ್ಟ್ ಕಂಪನಿ ಕೂಡ ಸೆಪ್ಟೆಂಬರ್‍ನಲ್ಲಿ ತನ್ನ ಎಕ್ಸ್‌ಬಾಕ್ಸ್ 650 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಮೆಜಾನ್ ಸಂವನ ಸೇರಿದಂತೆ ಹಲವಾರು ಘಟಕಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅದರಂತೆಯೇ ಆಪಲ್ ಕಂಪನಿಯೂ ಕೂಡ ಕಳೆದ ವರ್ಷ, ತನ್ನ ಡಿಜಿಟಲ್ ಸೇವೆಗಳ ಗುಂಪಿನಲ್ಲಿ ಸುಮಾರು 100 ಹುದ್ದೆಗಳನ್ನು ತೆಗೆದುಹಾಕಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಿಶ್ಲೇಷಕರ ಅಭಿಪ್ರಾಯದಂತೆ, ಗೂಗಲ್‌ನಂತಹ ಬೃಹತ್ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಹೆಜ್ಜೆಯನ್ನು ಮುಂದುವರೆಸುತ್ತಿರುವುದು ಸಾಫ್ಟ್‌ವೇರ್ ಅಭಿವೃದ್ಧಿಯಿಂದ ಎಐ ಸಂಶೋಧನೆ ಹಾಗೂ ಡೇಟಾ ಸೆಂಟರ್ ಹೂಡಿಕೆಗಳತ್ತ ಗಮನ ಕೇಂದ್ರೀಕರಿಸುವ ಯತ್ನವಾಗಿರಬಹುದು. ಉದ್ಯೋಗ ಕಳಕೊಳ್ಳುತ್ತಿರುವ ಸೆಕ್ಟರ್‌ಗಳಲ್ಲಿ ಮಾರುಕಟ್ಟೆ, ಗ್ರಾಹಕ ಪಾಲುದಾರಿಕೆ ಹಾಗೂ ಪ್ರಾಡಕ್ಟ್ ಪ್ಲಾಟ್‌ಫಾರ್ಮ್‌ಗಳು ಪ್ರಮುಖವಾಗಿವೆ.
ಇದೇ ವೇಳೆಯಲ್ಲಿ, ಕಂಪನಿಗಳು ಯಂತ್ರ ಕಲಿಕೆ, ಜನರೇಟಿವ್ ಎಐ ಮತ್ತು ಕ್ಲೌಡ್ ಸೇವೆಗಳಂತಹ ಕ್ಷೇತ್ರಗಳಲ್ಲಿ ತೀವ್ರವಾಗಿ ಹೂಡಿಕೆ ಮಾಡುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಪುನರ್‌ಹೊಂದಿಕೆಯಿಂದಾಗಿ ಉದ್ಯೋಗ ಸ್ಥಿರತೆ ಕುರಿತ ಆತಂಕ ಹೆಚ್ಚಾಗುತ್ತಿರುವಾಗ, ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಕಂಪನಿಗಳಿಂದ ಇಂತಹ ನಿರ್ಧಾರಗಳು ಹೊರ ಬೀಳಬಹುದೆಂಬ ನಿರೀಕ್ಷೆಯಿದೆ.
ವೈಶ್ವಿಕ ಆರ್ಥಿಕ ಅಸ್ಥಿರತೆ, ಕಡಿಮೆಯಾದ ವಹಿವಾಟು ದರಗಳು ಮತ್ತು ಆಂತರಿಕ ಕಾರ್ಯಕ್ಷಮತೆ ಒತ್ತಡದ ನಡುವೆಯೂ, ಬೃಹತ್ ಟೆಕ್ ಕಂಪನಿಗಳ ಮಾದರಿಯು ಮರುಆಲೋಚನೆಗೆ ಒಳಪಡುತ್ತಿರುವುದು ಈ ತೀರ್ಮಾನಗಳ ಹಿಂದೆ ಇರುವ ಪ್ರಮುಖ ಕಾರಣವೆನ್ನಲಾಗುತ್ತಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications