ಗೂಗಲ್ ಪೇ ಇದೀಗ ಹೊಸ ಮಾದರಿಯ ಫೀಚರ್‌ವೊಂದನ್ನು ಪರಿಚಯಿಸಿದೆ. ಗೂಗಲ್ ಪೇನ ಈ ಅಪ್ಡೇಟ್ಸ್‌ನಿಂದಾಗಿ ನಿಮ್ಮ ಹಣಕಾಸು ವಹಿವಾಟನ್ನು ಸುರಕ್ಷಿತವಾಗಿಸುವುದು ಮಾತ್ರವಲ್ಲ. ಅಕೌಂಟ್ ಇಲ್ಲದೆ ಇರುವವರು ಹಾಗೂ ಡಿಜಿಟಲ್ ವಹಿವಾಟಿನ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದೆ ಇರುವವರು ಸಹ ಈ ಸೇವೆಯನ್ನು ಬಳಸಿಕೊಳ್ಳಬಹುದು. ಏನಿದು ಗೂಗಲ್ ಪೇ ಯುಪಿಐ ಸರ್ಕಲ್, ಇದನ್ನು ಬಳಸುವುದು ಹೇಗೆ ಹಾಗೂ ಇದರ ಬಳಕೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಗೂಗಲ್ ಪೇ (Google Pay) ನೂತನವಾಗಿ ಪರಿಚಯಿಸಿರುವ ಯುಪಿಐ (UPI Circle) ಸರ್ಕಲ್‌ನ ಹೊಸ ಫೀಚರ್‌ನ ಮೂಲಕ ನೀವು ಹಣ ವರ್ಗಾವಣೆ ಮಾಡಲು ಸ್ವಂತ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡದೆಯೂ ಡಿಜಿಟಲ್ ಪಾವತಿಗಳನ್ನು (ಡಿಜಿಟಲ್ ವಹಿವಾಟು) ಮಾಡಲು ಸಾಧ್ಯವಿದೆ. ಅಲ್ಲದೇ ಮತ್ತೊಂದು ವಿಶೇಷವೆಂದರೆ, ನಿಮ್ಮ ಕುಟುಂಬದವರು (ಹಿರಿಯರು ಅಥವಾ ಮಕ್ಕಳು ಸೇರಿದಂತೆ ಯಾರಾದರೂ) ಹಣಕಾಸು ವಹಿವಾಟು ಮಾಡುವಾಗ ಯಾವುದೇ ತಪ್ಪುಗಳು ಆಗದಂತೆ ಎಚ್ಚರ ವಹಿಸಬಹುದಾಗಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ಎರಡನೇ (ದ್ವಿತೀಯ ಹಂತದ) ಹಂತದಲ್ಲಿ ಸೇರಿಸಬಹುದಾಗಿದೆ. ಗೂಗಲ್ ಪೇನಲ್ಲಿ ಈ ಹೊಸ ಫೀಚರ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಅತ್ಯಂತ ಸುರಕ್ಷಿತ ಹಣಕಾಸಿನ ವಹಿವಾಟಿಗೆ ಇದು ಬೆಸ್ಟ್ ಫೀಚರ್ ಎಂದೇ ಹೇಳಬಹುದಾಗಿದೆ.

ಗೂಗಲ್ ಪೇ ಯುಪಿಐ ಸರ್ಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ ?
ಗೂಗಲ್ ಪೇ ಈಗಾಗಲೇ ಹಣವಹಿವಾಟಿಗೆ ಸಂಬಂಧಿಸಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಪರಿಚಯಿಸಿರುವ
ಯುಪಿಐ ಸರ್ಕಲ್ ಎನ್ನುವ ಆಯ್ಕೆಯ ಮೂಲಕ ಬ್ಯಾಂಕ್ ಅಕೌಂಟ್ ಇಲ್ಲದೆ ಇರುವವರೂ ಸಹ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದನ್ನು ಸಹ ಮಾಡಬಹುದಾಗಿದೆ. ಡಿಜಿಟಲ್ ಹಣಕಾಸು ವಿನಿಮಯದ ಬಗ್ಗೆ ಹೆಚ್ಚು ತಿಳಿಯದವರಿಗೂ ಈ ಹೊಸ ಫೀಚರ್ ಸಹಕಾರಿಯಾಗಿರಲಿದೆ. ಗೂಗಲ್ ಪೇ ಹೊಸ ಫೀಚರ್ ಬಹಳಷ್ಟು ಜನರಿಗೆ ಸಹಾಯವಾಗುವುದು ಮಾತ್ರವಲ್ಲ ಇದರಿಂದ ನಿಮ್ಮ ಕುಟುಂಬದವರ ಆರ್ಥಿಕ ಸುರಕ್ಷತೆಯ ಬಗ್ಗೆಯೂ ನೀವು ಗಮನಹರಿಸಬಹುದಾಗಿದೆ.
ಗೂಗಲ್ ಪೇನ ಯುಪಿಐ ಸರ್ಕಲ್ ಎರಡು ಹಂತದ ಫೀಚರ್ ನೀಡಿದೆ. ಪ್ರಾಥಮಿಕ ಗೂಗಲ್ ಪೇ ಬಳಕೆದಾರರು ಹಾಗೂ ಎರಡನೇ ಹಂತದ ಗೂಗಲ್ ಪೇ ಬಳಕೆದಾರರು ಎಂದು ವಿಂಗಡಿಸಲಾಗಿದೆ.
ಗೂಗಲ್ ಪೇನ ಪ್ರಾಥಮಿಕ ಬಳಕೆದಾರರು: ಗೂಗಲ್ ಪೇನ ಪ್ರಾಥಮಿಕ ಬಳಕೆದಾರರು ಅಂದರೆ ಈಗಾಗಲೇ ಗೂಗಲ್ ಪೇ ಬಳಕೆದಾರರು ಹಾಗೂ ಬ್ಯಾಂಕ್ ಖಾತೆಯನ್ನು ಬಳಸುವವರು. ಈ ರೀತಿ ಈಗಾಗಲೇ ಪ್ರಾಥಮಿಕ ಗೂಗಲ್ ಪೇ ಬಳಸುವವರು, ಎರಡನೇ ಹಂತದಲ್ಲಿ (ಕುಟುಂಬದವರು ಅಥವಾ ಸ್ನೇಹಿತರಿಗೆ)ಹಣಕಾಸು ವಹಿವಾಟಿನ ಜವಾಬ್ದಾರಿ ನೀಡಬಹುದು. ಎರಡನೇ ಹಂತದ ಬಳಕೆದಾರರು (ಅಕೌಂಟ್ ಇಲ್ಲದೆ ಇರುವವರು) ಬಳಸಬಹುದಾಗಿದೆ.
ಎರಡನೇ ಹಂತದ ಬಳಕೆದಾರರು: ಇವರು ಅಕೌಂಟ್ ಇಲ್ಲದೆ ಇರುವವರು. ಇವರು ಹಣಕಾಸಿನ ವಹಿವಾಟು ಮಾಡುವುದಕ್ಕೆ ರಿಕ್ವೆಸ್ಟ್ ಸಲ್ಲಿಸಬಹುದು. ಈ ರಿಕ್ವೆಸ್ಟ್ ಅನ್ನು ಈಗಾಗಲೇ ಅಕೌಂಟ್ ಹೊಂದಿರುವವರು ಅಂದರೆ ಪ್ರಾಥಮಿಕ ಬಳಕೆದಾರರು ಅನುಮತಿಸಬೇಕಾಗುತ್ತದೆ.
ಪ್ರಾಥಮಿಕ ಬಳಕೆದಾರರು ಪ್ರತಿ ತಿಂಗಳು 15,000 ಸಾವಿರ ರೂಪಾಯಿಯ ವರೆಗೆ ಹಣದ ವಹಿವಾಟನ್ನು ಹೊಂದಿರುತ್ತಾರೆ. ಈ ಮಿತಿಯ ಒಳಗೆ ದ್ವಿತೀಯ ಬಳಕೆದಾರರು ಸ್ವತಂತ್ರವಾಗಿ ಹಣ (ಡಿಜಿಟಲ್ ಪಾವತಿ) ಕಳುಹಿಸಬಹುದು. ಪ್ರಾಥಮಿಕ ಬಳಕೆದಾರರು ಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ದ್ವಿತೀಯ ಬಳಕೆದಾರರು ಮಾಡುವ ಪ್ರತಿಯೊಂದು ಪಾವತಿ (ಡಿಜಿಟಲ್ ವಹಿವಾಟನ್ನು) ರಿಕ್ವೆಸ್ಟ್ ಅನ್ನು ಅನುಮೋದಿಸುತ್ತಾರೆ.
UPI ಸರ್ಕಲ್ ಯಾವ ರೀತಿ ಕೆಲಸ ಮಾಡುತ್ತದೆ ?
ಮೊದಲ ಹಂತ: ಹಣ ಪಾವತಿ ರಿಕ್ವೆಸ್ಟ್ ಕಳುಹಿಸಬೇಕು. ಉದಾಹರಣೆಗೆ ನೀವು ಎರಡನೇ ಹಂತದ ಬಳಕೆದಾರರಾಗಿದ್ದು, UPI ಸರ್ಕಲ್ ಬಳಸಿ ಪಾವತಿ ಮಾಡಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾವತಿ ಮಾಡಬಹುದು. ಆಗ ಮೊದಲ ಹಂತದ ಬಳಕೆದಾರರು ಅನುಮತಿ ನೀಡಬೇಕಾಗುತ್ತದೆ.


Click it and Unblock the Notifications