ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಒಂದೇ ಆಪ್‌ನಲ್ಲಿ ಎಲ್ಲವನ್ನೂ ಮಾಡಬಹುದಾದ ತನ್ನ ವರ್ಷಗಳ ಹಿಂದಿನ ಕನಸನ್ನು ಸಾಕಾರಗೊಳಿಸುವಲ್ಲಿ ಸಮೀಪಿಸುತ್ತಿದ್ದಾರೆ. ಎಲಾನ್ ಮಸ್ಕ್ ಹಲವಾರು ಸಂದರ್ಭಗಳಲ್ಲಿ ಎಕ್ಸ್ ಆಪ್ ಅನ್ನು "ಎಲ್ಲ ಫೀಚರ್ ಹೊಂದಿರುವ ಆಪ್" ಆಗಿ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದರು.
ಎಕ್ಸ್ (ಟ್ವಿಟ್ಟರ್) ಆಪ್‌ನಲ್ಲಿಯೇ ಜನರು ಪಾವತಿಗಳನ್ನು ಮಾಡಬಹುದು, ಅವರ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ಇತರರೊಂದಿಗೆ ಸಂಪರ್ಕ ಸಾಧಿಸಬಹುದು, ಹಾಗೆಯೇ ಹಲವಾರು ಕಾರ್ಯಗಳನ್ನು ಮಾಡಲು ಸಾಧ್ಯವಾಗುವಂತೆ ಮಾಡುವುದು ಎಲಾನ್ ಮಸ್ಕ್ ಕನಸಾಗಿತ್ತು. ಇನ್ನು ವರ್ಷಗಳ ಹಿಂದೆ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದಾಗ ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ಹೀಗೆ ಬದಲಾವಣೆ ಮಾಡಬಲ್ಲರು ಎಂದು ಯಾರೂ ಭಾವಿಸಿರಲಿಲ್ಲ.

ಈಗ ಎಕ್ಸ್ ಎಂದು ಬದಲಾಗಿರುವ ಟ್ವಿಟ್ಟರ್ ಅನ್ನು ಮಸ್ಕ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಅದು ಬಳಕೆದಾರರು ತಮ್ಮ ಅಭಿಪ್ರಾಯವನ್ನು ಸೀಮಿತ ಪದಗಳಲ್ಲಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ಸಾಮಾಜಿಕ ಮಾಧ್ಯಮವಾಗಿತ್ತು. ಆದರೆ ಈಗ, ಪ್ಲಾಟ್‌ಫಾರ್ಮ್ ನಿಮಗೆ ದೀರ್ಘ ವೀಡಿಯೊಗಳನ್ನು ಹಂಚಿಕೊಳ್ಳಲು, ದೀರ್ಘವಾದ ಟ್ವೀಟ್‌ಗಳನ್ನು ಬರೆಯಲು, ಆಯ್ಕೆಮಾಡಿದ ಹ್ಯಾಂಡಲ್‌ಗಳ ಚಂದಾದಾರಿಕೆ ಮಾಡಲು, ಮೊದಲಾದವುಗಳನ್ನು ಅನುಮತಿಸುತ್ತದೆ.
ಈಗ ಹೊಸದಾದ ಫೀಚರ್ ನಿಮಗೆ ಲಭ್ಯವಾಗುತ್ತದೆ. ಶೀಘ್ರದಲ್ಲೇ, ನೀವು ಟ್ವಿಟ್ಟರ್ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಸಿಇಒ ಲಿಂಡಾ ಯಾಕರಿನೊ ಹಂಚಿಕೊಂಡಿರುವ ಹೊಸ ವೀಡಿಯೊ ಇದನ್ನು ಖಚಿತಪಡಿಸುತ್ತದೆ.
ಎಕ್ಸ್‌ನಲ್ಲಿ ಪಾವತಿ ವಿಧಾನ
ಹೊಸ ಫೀಚರ್ ಬಗ್ಗೆ ಮಾಹಿತಿ ನೀಡುವ ವೀಡಿಯೊವನ್ನು ಹಂಚಿಕೊಳ್ಳುತ್ತಾ, ಟ್ವಿಟ್ಟರ್ ಸಿಇಒ ಲಿಂಡಾ ಯಾಕರಿನೊ, "ಏನಾಗಲಿದೆ ಎಂಬುದರ ಸುಳಿವು. ಯಾರಿದ್ದಾರೆ?," ಎಂದು ಬರೆದುಕೊಂಡಿದ್ದಾರೆ. ಎರಡು ನಿಮಿಷಗಳ ಅವಧಿಯ ವೀಡಿಯೊ ಬಳಕೆದಾರರು ಮಾಡಬಹುದಾದ ಮತ್ತು ಎಕ್ಸ್‌ನಲ್ಲಿ ಮಾಡಲು ಸಾಧ್ಯವಾಗುವ ವಿವಿಧ ವಿಷಯಗಳ ಕುರಿತು ತಿಳಿಸುತ್ತದೆ.
ಪಾವತಿಗಳನ್ನು ಮಾಡುವುದರ ಜೊತೆಗೆ, ವೀಡಿಯೊ ಕರೆ ಮಾಡುವ ಫೀಚರ್ ಬಗ್ಗೆಯೂ ಈ ವೀಡಿಯೊದಲ್ಲಿ ಮಾಹಿತಿ ನೀಡಲಾಗಿದೆ. ಅದು ಕೂಡಾ ಶೀಘ್ರದಲ್ಲೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗುತ್ತದೆ. ಇಲ್ಲಿಯವರೆಗೆ, ನೀವು ಎಕ್ಸ್‌ನಲ್ಲಿ ಪಠ್ಯಗಳ ಮೂಲಕ ಮಾತ್ರ ಇತರರೊಂದಿಗೆ ಸಂಪರ್ಕಿಸಬಹುದಾಗಿತ್ತು. ಆದರೆ ಈಗ ಹಲವಾರು ಫೀಚರ್‌ಗಳಿದೆ. ಹೆಚ್ಚುವರಿಯಾಗಿ, ಬಳಕೆದಾರರು ಎಕ್ಸ್‌ನಲ್ಲಿ ಉದ್ಯೋಗ ಹುಡುಕಲು ಸಾಧ್ಯವಾಗುತ್ತದೆ.
ಎಕ್ಸ್‌ನಲ್ಲಿ ಮಾಸಿಕ ಶುಲ್ಕ
ಎಕ್ಸ್ ಅನ್ನು ಬಳಸಲು ಬಳಕೆದಾರರಿಗೆ ಶುಲ್ಕ ವಿಧಿಸುವ ಸಾಧ್ಯತೆಯ ಬಗ್ಗೆ ಇದರ ಮಾಲೀಕ ಎಲಾನ್ ಮಸ್ಕ್ ಸುಳಿವು ನೀಡಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಅಪ್ಲಿಕೇಶನ್ ಅನ್ನು ಬಳಸಲು, ಬಳಕೆದಾರರು ಸಣ್ಣ ಮಾಸಿಕ ಶುಲ್ಕ ಪಾವತಿಸಬೇಕಾಗಬಹುದು ಎಂದು ಟ್ವಿಟ್ಟರ್‌ನ ಮಾಲೀಕರು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಸಂವಾದದಲ್ಲಿ ಮಸ್ಕ್ ಈ ಬಗ್ಗೆ ಮಾತನಾಡಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿರುವ ಬಾಟ್‌ಗಳನ್ನು ನಿಯಂತ್ರಣದಲ್ಲಿಡಲು ಶುಲ್ಕವನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, "ಬಾಟ್‌ಗಳ ಬೃಹತ್ ಸೈನ್ಯವನ್ನು ಎದುರಿಸಲು ನಾನು ಯೋಚಿಸುವ ಏಕೈಕ ಮಾರ್ಗವಾಗಿದೆ," ಎಂದು ಹೇಳಿದರು.


Click it and Unblock the Notifications