ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸೋಮವಾರ ಸರ್ಕಾರವು ಆರ್ ದೊರೈಸ್ವಾಮಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ ಎಂದು ತಿಳಿಸಿದೆ. ದೊರೈಸ್ವಾಮಿ ಪ್ರಸ್ತುತ ಮುಂಬೈನ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಸೆಪ್ಟೆಂಬರ್ 1, 2023 ರಂದು ಅಥವಾ ನಂತರದ ಅಧಿಕಾರದ ದಿನಾಂಕದಿಂದ ಮತ್ತು ಅವರ ನಿವೃತ್ತಿಯ ದಿನಾಂಕದ ಆಗಸ್ಟ್ 31, 2026 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಅವರನ್ನು ಐಪೆ ಮಿನಿ ಬದಲಿಗೆ ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ನಿಯಂತ್ರಕ ಸಂಸ್ಥೆ ಫೈಲಿಂಗ್‌ನಲ್ಲಿ ಹೇಳಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಿರ್ದೇಶಕರ ಮುಖ್ಯಸ್ಥರಾಗಿರುವ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ (ಎಫ್‌ಎಸ್‌ಐಬಿ) ಜೂನ್‌ನಲ್ಲಿ ದೊರೈಸ್ವಾಮಿ ಅವರ ಹೆಸರನ್ನು ಎಂಡಿ ಆಗಿ ಶಿಫಾರಸು ಮಾಡಿತ್ತು. ಎಫ್‌ಎಸ್‌ಐಬಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ನೇತೃತ್ವ ವಹಿಸಿದ್ದಾರೆ.
ಈ ಹಿಂದೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ರನ್ನು ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್‌ಗಳಾಗಿ (ಎಂಡಿ) ನೇಮಕ ಮಾಡಲಾಗಿದೆ. ಮಾರ್ಚ್ 13, 2023ರಿಂದ ಜಾರಿಗೆ ಬರುವಂತೆ ಇಬ್ಬರನ್ನೂ ಎಂಡಿಗಳಾಗಿ ನೇಮಿಸಲಾಗಿದೆ. ಈ ವಾರದಲ್ಲಿ ಎಲ್‌ಐಸಿಯ ಎಂಡಿಗಳಾಗಿದ್ದ ರಾಜ್ ಕುಮಾರ್ ಮತ್ತು ಬಿಸಿ ಪಟ್ನಾಯಕ್ ನಿವೃತ್ತಿ ಹೊಂದಿದ್ದಾರೆ. ಆ ಸ್ಥಾನಕ್ಕೆ ಇಬ್ಬರನ್ನು ನೇಮಿಸಲಾಗಿದೆ.
ಈ ನಡುವೆ, ಸೋಮವಾರದಂದು ಎಲ್ಐಸಿಯ ಷೇರುಗಳು ಬಿಎಸ್ಇಯಲ್ಲಿ ಶೇಕಡ 0.84 ನಷ್ಟು ಕಡಿಮೆಯಾಗಿ ಪ್ರತಿ ಷೇರಿಗೆ 655.50 ರೂಪಾಯಿ ಆಗಿದೆ. ಕ್ರಮವಾಗಿ 661.45 ರೂಪಾಯಿ ಮತ್ತು 648.10 ರೂಪಾಯಿಯ ಗರಿಷ್ಠ ಮತ್ತು ಕನಿಷ್ಠ ಮಟ್ಟದೊಂದಿಗೆ ಮುಕ್ತಾಯಗೊಂಡಿದೆ. ಸ್ಟಾಕ್ 1 ವಾರದಲ್ಲಿ ಶೇಕಡ 0.02 ರಷ್ಟು ಕುಸಿದಿದೆ, ಆದರೆ 3 ತಿಂಗಳಲ್ಲಿ ಶೇಕಡ 16.62 ರಷ್ಟು ಗಳಿಸಿದೆ. ಇದನ್ನು ಮೇ 17, 2022 ರಂದು ಲೀಸ್ಟ್ ಮಾಡಲಾಗಿದೆ.


Click it and Unblock the Notifications