ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 8ನೇ ವೇತನ ಆಯೋಗ ಎಂಬುದು ಬಹುನಿರೀಕ್ಷೆಯ ಘೋಷಣೆಯಾಗಿದೆ. ಪ್ರತೀ 10 ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರ ರಚಿಸುವ ವಿಶೇಷ ಆಯೋಗ ಇದಾಗಿದೆ. ಈ ಆಯೋಗದ ಮೂಲಕವೇ ಕೇಂದ್ರ ಸರ್ಕಾರಿ ನೌಕರರ ವೇತನ (Central Govt Employees Salary), ಭತ್ಯೆಗಳು, ಪಿಂಚಣಿ ಸೌಲಭ್ಯಗಳು ಪರಿಷ್ಕರಣೆಯಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರ 8ನೇ ವೇತನ ಆಯೋಗದ (8th Pay Commission) ಅಂತಿಮ ಘೋಷಣೆ ಇನ್ನೂ ಬರಬೇಕಿದ್ದರೂ, ವೇತನ ಹೆಚ್ಚಳದ ಬಗ್ಗೆ ಭಾರೀ ನಿರೀಕ್ಷೆಗಳಿವೆ.

ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರ, ಲೆವೆಲ್ 1 ರಿಂದ ಲೆವೆಲ್ 5ರವರೆಗಿನ ಕಡಿಮೆ ಮತ್ತು ಮಧ್ಯಮ ಹುದ್ದೆಗಳ ಸಿಬ್ಬಂದಿಗಳಿಗೆ ಭಾರೀ ಬಾಕಿ ಮೊತ್ತ (Arrears) ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 8ನೇ ವೇತನ ಆಯೋಗದ ನಿರ್ಧಾರದ ಮೊದಲೇ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಆ ಪ್ರಕಾರ, ಒಂದು ವೇಳೆ ಫಿಟ್‌ಮೆಂಟ್ ಫ್ಯಾಕ್ಟರ್ 2.0 ರಿಂದ 2.57 ರವರೆಗೆ ಇದ್ದರೆ, ಈ ಸಿಬ್ಬಂದಿಗೆ 3 ಲಕ್ಷದಿಂದ 9 ಲಕ್ಷದವರೆಗೆ ಬಾಕಿ ಹಣ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಬಾಕಿ ವೇತನ ಪಾವತಿ ಮತ್ತು 8 ನೇ ವೇತನ ಆಯೋಗದ ನಿರ್ಧಾರದ ಬಗ್ಗೆ ಭಾರೀ ಕುತೂಹಲದಲ್ಲಿದ್ದಾರೆ.
ಲಕ್ಷಾಂತರ ರೂ. ಬಾಕಿ ಸಂಬಳ!
ಹಂತ 1 ರಿಂದ ಹಂತ 5ರವರೆಗಿನ ಉದ್ಯೋಗಿಗಳಿಗೆ ಈ ಬಾರಿ ಬಾಕಿ ಸಂಬಳ ಲಕ್ಷದಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ. ಜನವರಿ 1, 2026 ರಂದು ಜಾರಿಗೆ ಬಂದ ದಿನಾಂಕವನ್ನು ಆಧರಿಸಿ 20 ತಿಂಗಳ ಅರಿಯರ್ಸ್ ಲೆಕ್ಕ ಹಾಕಿದರೆ, ಫಿಟ್‌ಮೆಂಟ್ ಫ್ಯಾಕ್ಟರ್ 2.0, 2.15, 2.28 ಅಥವಾ 2.57 ಎಂದು ಲೆಕ್ಕಹಾಕಿದರೆ, ಈ ಲೆವೆಲ್‌ನ ಉದ್ಯೋಗಿಗಳು ದೊಡ್ಡ ಮಟ್ಟದಲ್ಲಿ ಅರಿಯರ್ಸ್ ಪಡೆಯಬಹುದು ಎನ್ನಲಾಗಿದೆ.
ಇನ್ನು ಏಳನೇ ವೇತನ ಆಯೋಗದ ಪ್ರಕಾರ, ಲೆವೆಲ್ 1 ನೌಕರರ ಮೂಲ ವೇತನ 18,000 ರೂ, ಮತ್ತು ಲೆವೆಲ್ 5 ರ ನೌಕರರ ವೇತನ 29,200 ಎಂದು ಭಾವಿಸೋಣ. ಇದು ಎಂಟನೇ ತಿಂಗಳ ಆಯೋಗದ ಅಡಿಯಲ್ಲಿ ಲೆಕ್ಕ ಹಾಕಿದರೆ, 20 ತಿಂಗಳ ಬಾಕಿ ಸಂಬಳ 3.60 ಲಕ್ಷದಿಂದ 9.17 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಲೆಕ್ಕಾಚಾರ ಫಿಟ್‌ಪೆಂಟ್ ಫ್ಯಾಕ್ಟರ್‌ಗಳ ಅಂದಾಜು ಲೆಕ್ಕವನ್ನು ಆಧರಿಸಿದೆ. ಒಂದು ವೇಳೆ ನಿರೀಕ್ಷೆಯಂತೆ ಬಂದರೆ, ಏಳನೇ ವೇತನ ಆಯೋಗದಂತೆ, ಎಂಟನೇ ಆಯೋಗದಲ್ಲೂ ಸಂಬಳ ಡಬಲ್ ಹೆಚ್ಚಾಗುವ ಸಾಧ್ಯತೆ ಇದೆ.
ಈಗಾಗಲೇ 8ನೇ ಕೇಂದ್ರ ವೇತನ ಆಯೋಗವು ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. MyGov ಪೋರ್ಟಲ್‌ನಲ್ಲಿ ರಚನಾತ್ಮಕ ಪ್ರಶ್ನಾವಳಿಯ ಮೂಲಕ ಸಚಿವಾಲಯಗು, ಇಲಾಖೆಗಳು, ಕೇಂದ್ರ ಸರ್ಕಾರಿ ನೌಕರರಿಗೆ ಸಲಹೆಗಳನ್ನು ಸಹ ಆಯೋಗ ಕೋರಿದೆ. ಈ ಮೂಲಕ ನೀವು ಯಾವುದೇ ರೀತಿಯ ಸಲಹೆಯನ್ನು ಆಯೋಗಕ್ಕೆ ನೀಡಬಹುದು. ಒಂದು ವೇಳೆ ಸಲಹೆ ಮಾನ್ಯವಾದರೆ, ಅದನ್ನು ಎಂಟನೇ ವೇತನ ಆಯೋಗದ ನಿರ್ಧಾರದಲ್ಲಿ ಬಳಸಿಕೊಳ್ಳಬಹುದು.


Click it and Unblock the Notifications