ಸೌದಿ ಅರೇಬಿಯಾ (Saudi Arabia) ಆಹಾರ ಮತ್ತು ಔಷಧಿ ಪ್ರಾಧಿಕಾರ (Saudi Food And Drug Authority-SFDA) ಭಾರತ ಸೇರಿದಂತೆ ಒಟ್ಟು 40 ದೇಶಗಳಿಂದ ಕೋಳಿ ಮಾಂಸ ಮತ್ತು ಟೇಬಲ್ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳಲು ಸಂಪೂರ್ಣ ನಿಷೇಧ ಹೇರಿದೆ. ಜಾಗತಿಕವಾಗಿ ಹಕ್ಕಿ ಜ್ವರದ (Bird Flu) ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಹಾಗೂ ಮೊಟ್ಟೆ ಆಮದನ್ನು ನಿಷೇಧಿಸಿದೆ. ಸೌದಿ ಅರೇಬಿಯಾದ ಈ ನಿರ್ಧಾರ ವಿಶ್ವದ ಕೋಳಿ ವ್ಯಾಪಾರಕ್ಕೆ ಭಾರೀ ಪೆಟ್ಟು ಬೀಳಲಿದೆ. ಹೈಲಿ ಪ್ಯಾಥೋಜೆನಿಕ್ ಏವಿಯನ್ ಇನ್ಫ್ಲುಯೆಂಜಾ ಹರಡುವಿಕೆ ತಡೆಯಲು ಸೌದಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸೌದಿ ಅರೇಬಿಯಾದಿಂದ ಮಹತ್ವದ ಕ್ರಮ!
ಜಾಗತಿಕವಾಗಿ ಹಕ್ಕಿ ಜ್ವರ ಹೆಚ್ಚಾಗುತ್ತಿದ್ದು, ಇತರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ, ದೇಶೀಯ ಆಹಾರ ಸರಬರಾಜು ಸರಪಳಿಯನ್ನು ಸುರಕ್ಷಿತವಾಗಿಡಲು ಇದೀಗ ಎಸ್‌ಎಫ್‌ಡಿಎ ಮುಂಜಾಗೃತಾ ಕ್ರಮ ಕೈಗೊಂಡಿದೆ. ಈ ನಿರ್ಧಾರವು ದೇಶದ ಆರೋಗ್ಯವನ್ನು ಕಾಡುವ ಉದ್ದೇಶದಿಂದ ಕೈಗೊಂಡ ಮುನ್ನೆಚ್ಚರಿಕಾ ಕ್ರಮವಾಗಿದೆ.
ಸೌದಿ ಸರ್ಕಾರ ಹೇಳಿದ್ದೇನು?
"ಸ್ಥಳೀಯ ಮಾರುಕಟ್ಟೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ರಕ್ಷಿಸುವುದು ಈ ನಿರ್ಧಾರದ ಗುರಿಯಾಗಿದೆ" ಎಂದು ಸೌದಿ ಸರ್ಕಾರ ಹೇಳಿದೆ. ಈ ಮೂಲಕ ಸರ್ಕಾರ ಜನರ ಆರೋಗ್ಯ ಮೇಲೆ ಕಾಳಜಿಯನ್ನು ವಹಿಸಿದೆ.
ಈ ದೇಶಗಳಿಂದ ಕೋಳಿ ಆಮದು ನಿಷೇಧ!
ಹಕ್ಕಿ ಜ್ವರ, ಆರೋಗ್ಯದ ದೃಷ್ಟಿಯಿಂದ ಸೌದಿ ಸರ್ಕಾರ ನಿಷೇಧ ಹೇರಲಾದ 40 ದೇಶಗಳಲ್ಲಿ ಭಾರತ ಕೂಡಾ ಒಂದು. ಉಳಿದಂತೆ ಅಫ್ಘಾನಿಸ್ತಾನ, ಜರ್ಮನಿ, ಇರಾನ್, ಇಂಡೋನೇಷ್ಯಾ, ಚೀನಾ, ಬಾಂಗ್ಲಾದೇಶ, ಯುನೈಟೆಡ್ ಕಿಂಗ್‌ಡಮ್, ಈಜಿಪ್ಟ್, ದಕ್ಷಿಣ ಕೊರಿಯಾ, ಜಪಾನ್, ನೈಜೀರಿಯಾ, ವಿಯೆಟ್ನಾಂ ಹೀಗೆ ಹಲವಾರು ದೇಶಗಳು ಸೇರಿದೆ. ಇನ್ನು ಈ ನಿಷೇಧ ಕೇವಲ ಕಚ್ಚಾ ಕೋಳಿ ಮಾಂಸಗಳಿಗೆ ಮತ್ತು ಮೊಟ್ಟೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಹೀಟ್ ಟ್ರೀಟೆಡ್ ಅಥವಾ ಸಂಪೂರ್ಣ ಸಂಸ್ಕರಿಸಿದ ಕೋಳಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಸೌದಿ ನಿರ್ಧಾರ, ವ್ಯಾಪಾರಿಗಳಿಗೆ ಸಂಕಷ್ಟ!
ಈ ನಿರ್ಧಾರಿಂದ ಭಾರತ ಸೇರಿ ಹಲವು ದೇಶಗಳ ಕೋಳಿ-ಮೊಟ್ಟೆ ರಫ್ತುದಾರರಿಗೆ ಸಂಕಷ್ಟ ಎದುರಾಗಲಿದೆ. ಅಲ್ಲದೇ ಪ್ರಾದೇಶಿಕ ವ್ಯಾಪಾರದ ಮೇಲೂ ಸಣ್ಣ ಅಡೆತಡೆಗಳಾಗಬಹುದು.
40 ದೇಶಗಳಲ್ಲದೆ, ಸೌದಿ ಅರೇಬಿಯಾ ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಕೆನಡಾ ಸೇರಿದಂತೆ 16 ಇತರೆ ದೇಶಗಳ ನಿರ್ದಿಷ್ಟ ಪ್ರದೇಶಗಳ ಮೇಲೆ ಭಾಗಶಃ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ. ಇವು ಸ್ಥಳೀಯ ಹಕ್ಕಿ ಜ್ವರ ಮೌಲ್ಯಮಾಪನ ಆಧರಿಸಿದ ಕ್ರಮಗಳಾಗಿವೆ.
ಇನ್ನು ಭಾರತದಿಂದ ಸೌದಿಗೆ ಕೋಳಿ ರಫ್ತಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಆದ್ದರಿಂದ ಈ ನಿಷೇಧ ಭಾರತೀಯ ಕೋಳಿ ಉದ್ಯಮಕ್ಕೆ ಹೆಚ್ಚು ಪರಿಣಾಮ ಬೀಳುವುದಿಲ್ಲ ಎಂದು ಹೇಳಲಾಗಿದೆ. ಆದರೂ ಈ ಕ್ರಮದಿಂದ ಜಾಗತಿಕವಾಗಿ ತಕ್ಕ ಮಟ್ಟಿಗಾದರೂ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications