ಕೆಲವು ಚಿನ್ನದ ಜ್ಯುವೆಲ್ಲರಿ ಮತ್ತು ವಸ್ತುಗಳ ಮೇಲಿನ ಆಮದಿನ ಮೇಲೆ ಕೇಂದ್ರ ಸರ್ಕಾರವು ಬುಧವಾರ ನಿರ್ಬಂಧವನ್ನು ವಿಧಿಸಿದೆ. ಅನಿವಾರ್ಯವಲ್ಲದ ವಸ್ತುಗಳ ಆಮದುಗಳನ್ನು ಕಡಿತ ಮಾಡುವ ನಿಟ್ಟಿನಲ್ಲಿ ಸರ್ಕಾರವು ಚಿನ್ನದ ಜ್ಯುವೆಲ್ಲರಿಗಳ ಆಮದಿನ ಮೇಲೆ ನಿರ್ಬಂಧವನ್ನು ವಿಧಿಸಿದೆ. ಪಿಟಿಐ ವರದಿ ಪ್ರಕಾರ ಈಗ ಆಮದುದಾರರು ಚಿನ್ನದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ.
ಆದರೆ ಭಾರತ-ಯುಎಇ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಆಮದುಗಳಿಗೆ ನಿರ್ಬಂಧಗಳಿಲ್ಲ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಹೇಳಿದೆ. ಅಧಿಸೂಚನೆಯಲ್ಲಿ ಡಿಜಿಎಫ್‌ಟಿ ಈ ಉತ್ಪನ್ನಗಳ ಆಮದು ನೀತಿಯನ್ನು "ತಕ್ಷಣದಿಂದ ಜಾರಿಗೆ ಬರುವಂತೆ ಉಚಿತದಿಂದ ನಿರ್ಬಂಧಿತಕ್ಕೆ ತಿದ್ದುಪಡಿ ಮಾಡಿದೆ," ಎಂದು ಹೇಳಿದೆ.

ಈ ಹಣಕಾಸು ವರ್ಷದಲ್ಲಿ ಮುತ್ತುಗಳು, ಅಮೂಲ್ಯ ಮತ್ತು ಸೆಮಿ ಪ್ರೀಶಿಯಸ್ ಕಲ್ಲುಗಳ ಆಮದುಗಳು ಶೇಕಡ 25.36ರಷ್ಟು ಕುಸಿತ ಕಂಡಿದ್ದು, 4 ಬಿಲಿಯನ್ ಡಾಲರ್‌ಗೆ ತಲುಪಿದೆ. ಪಿಟಿಐ ಪ್ರಕಾರ, ಚಿನ್ನದ ಆಮದು ಕೂಡ ಅದೇ ಅವಧಿಯಲ್ಲಿ ಶೇಕಡರಷ್ಟು ಕುಸಿತ ಕಂಡು, 4.7 ಬಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ. ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಮೇ ಅವಧಿಯಲ್ಲಿ ಒಟ್ಟಾರೆ ಸರಕುಗಳ ಆಮದು ಶೇಕಡ 10.24ರಷ್ಟು ಕುಸಿದು 107 ಬಿಲಿಯನ್‌ಗೆ ತಲುಪಿದೆ.
ಏಪ್ರಿಲ್-ಮೇ 2023 ರ ಟ್ರೇಡ್ ಡೆಫಿಸಿಟ್ 37.26 ಬಿಲಿಯನ್ ಡಾಲರ್ ಆಗಿದ್ದು, ಏಪ್ರಿಲ್-ಮೇ 2022 ರ ಅವಧಿಯಲ್ಲಿ ಟ್ರೇಡ್ ಡೆಫಿಸಿಟ್ 40.48 ಬಿಲಿಯನ್ ಡಾಲರ್ ಆಗಿತ್ತು. ಭಾರತದಲ್ಲಿ ಚಿನ್ನದ ಆಮದು ಪ್ರಮಾಣವು ಶೇಕಡ 30ರಷ್ಟು ಇಳಿಕೆಯಾಗಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಏಪ್ರಿಲ್-ಫೆಬ್ರವರಿ 2023 ರ ಅವಧಿಯಲ್ಲಿ ಸುಮಾರು ಶೇಕಡ 30ರಷ್ಟು ಕುಸಿತ ಕಂಡು 31.8 ಬಿಲಿಯನ್ ಯುಎಸ್ ಡಾಲರ್‌ಗೆ ಇಳಿಕೆಯಾಗಿದೆ.
ಪ್ರಮುಖವಾಗಿ ಭಾರತದ ಚಿನ್ನದ ಆಮದುಗಳು, ಹೆಚ್ಚಿನ ಕಸ್ಟಮ್ಸ್ ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಭಾರತದಲ್ಲಿ ಚಿನ್ನದ ಆಮದು ಪ್ರಮಾಣ ಕುಸಿತವಾಗಿದೆ. 2021-22ರ ಅವಧಿಯಲ್ಲಿ ಹಳದಿ ಲೋಹದ ಆಮದು ಪ್ರಮಾಣವು 45.2 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಆಗಸ್ಟ್ 2022ರಿಂದ ಭಾರತದಲ್ಲಿ ಆಮದು ಪ್ರಮಾಣವು ಇಳಿಕೆಯಾಗುತ್ತಿದೆ. ಬೆಳ್ಳಿಯ ಆಮದು ಪ್ರಮಾಣವು 2023ರ ಏಪ್ರಿಲ್- ಬ್ರವರಿ ಅವಧಿಯಲ್ಲಿ 5.3 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಶೇಕಡ 66ರಷ್ಟು ಏರಿಕೆಯಾಗಿದೆ.
ಚಿನ್ನದ ಆಮದು ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಿಂದಾಗಿ ಭಾರತದಲ್ಲಿ ಟ್ರೇಡ್ ಡೆಫಿಸಿಟ್ (ಆಮದು ಹಾಗೂ ರಫ್ತು ನಡುವಿನ ವ್ಯತ್ಯಾಸ) ಕಡಿಮೆಯಾಗಿಲ್ಲ. ಏಪ್ರಿಲ್-ಫೆಬ್ರವರಿ 2022-23ರಲ್ಲಿ ಸರಕುಗಳ ವ್ಯಾಪಾರ ಕೊರತೆಯು 247.52 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ವರ್ಷದ ಹಿಂದಿನ ಅವಧಿಯಲ್ಲಿ 172.53 ಬಿಲಿಯನ್ ಡಾಲರ್ ಆಗಿತ್ತು.
ತಜ್ಞರುಗಳು ಹೇಳುವುದು ಏನು?
ಚಿನ್ನದ ಆಮದು ನೀತಿಯ ತಿದ್ದುಪಡಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಮ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕರು ಆದ ಕಾಲಿನ್ ಶಾ, "ನಿರ್ದಿಷ್ಟ ಚಿನ್ನದ ಆಮದನ್ನು ಸರ್ಕಾರ ನಿರ್ಬಂಧಿಸಿದೆ. ಚಿನ್ನದ ಆಮದು ಟ್ರೇಡಿಂಗ್ ಡೆಫಿಸಿಟ್ ಮೇಲೆ ನೆಗೆಟಿವ್ ಪ್ರಭಾವ ಉಂಟು ಮಾಡುತ್ತದೆ. ಇತ್ತೀಚಿನ ವ್ಯಾಪಾರವು 22 ಬಿಲಿಯನ್ ಡಾಲರ್‌ನದ್ದಾಗಿದ್ದು, 5 ತಿಂಗಳಲ್ಲೇ ಅತ್ಯಧಿಕವಾಗಿದೆ," ಎಂದು ತಿಳಿಸಿದ್ದಾರೆ.
"ಕಡಿಮೆಯಾದ ಚಿನ್ನದ ಆಮದು ಅದೇ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಭಾರೀ ಚಿನ್ನದ ಆಮದು ರೂಪಾಯಿಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಒಪ್ಪಂದದ ಅಡಿಯಲ್ಲಿ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಯುಎಇಯಿಂದ ಚಿನ್ನದ ಆಮದುಗಳನ್ನು ಎಸ್‌ಒಪಿಎ ಅಡಿಯಲ್ಲಿ ಅನುಮತಿಸಲಾಗುತ್ತದೆ. ಒಪ್ಪಂದದ ಹೊರತಾಗಿಯೂ ಯುಎಇಯಿಂದ ಆಮದುಗಳು ಕಡಿಮೆಯಾಗಿದೆ. ಮೈಕ್ರೋಇಕಾನಮಿಕ್ಸ್ ಅನ್ನು ಸರ್ಕಾರವು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ," ಎಂದು ಹೇಳಿದ್ದಾರೆ.


Click it and Unblock the Notifications