ಅಕ್ಟೋಬರ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಸರ್ಕಾರ ಶಾಕ್ ನೀಡಿದೆ. ಅಕ್ಟೋಬರ್ 1ರಿಂದ 19 ಕೆ.ಜಿಗಳ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 209 ರೂಪಾಯಿಗಳಷ್ಟು ಹೆಚ್ಚು ಮಾಡಲಾಗಿದೆ. ಭಾನುವಾರ (ಅ. 1) ದರ ಹೆಚ್ಚಳ ಅನ್ವಯವಾಗಲಿದೆ.
ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸತತ ಎರಡು ಬಾರಿ ಅಂದಾಜು 250 ರೂಪಾಯಿ ಇಳಿಕೆ ಮಾಡಿದ ನಂತರ ಅಕ್ಟೋಬರ್ 1ರಿಂದ 209 ರೂಪಾಯಿ ಹೆಚ್ಚಿಸಿದೆ.

ದೆಹಲಿಯಲ್ಲಿ, 19 ಕೆಜಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1,522.50 ರೂಪಾಯಿಗಳಿಂದ 1,731.50 ರೂಪಾಯಿಗೆ ಹೆಚ್ಚಿಸಲಾಗಿದೆ. ನಗರಗಳಾದ್ಯಂತ ಎಲ್‌ಪಿಜಿ ಗ್ಯಾಸ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,684 ರೂಪಾಯಿ ಆಗಲಿದೆ.
ಸೆಪ್ಟೆಂಬರ್ 1 ರಂದು, ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 158 ರೂಪಾಯಿಯಷ್ಟು ಕಡಿತಗೊಳಿಸಿತ್ತು, ಆಗಸ್ಟ್ 1 ರಂದು 19 ಕೆಜಿ ಸಿಲಿಂಡರ್‌ನ ಬೆಲೆ 99.75 ರೂಪಾಯಿ ಕಡಿಮೆ ಮಾಡಲಾಗಿತ್ತು.
ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ತಟಸ್ಥ
ಗೃಹಬಳಕೆಯ 14.2-ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಯಣೆ ಆಗಿಲ್ಲ. ಸದ್ಯ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ 903 ರೂಪಾಯಿ ಇದೆ. ಸೌದಿ ಒಪ್ಪಂದದ ಬೆಲೆ (CP), ಎಲ್‌ಪಿಜಿ ಯ ಬೆಲೆಗೆ ಬಳಸಲಾಗುವ ಮಾನದಂಡವಾಗಿದೆ, ಕಳೆದ ಕೆಲವು ವಾರಗಳಲ್ಲಿ ಪೂರೈಕೆಯ ಕಾಳಜಿಯ ಮೇಲೆ ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾದ ನಂತರ ಬೆಲೆ ಏರಿಕೆ ಮಾಡಲಾಗಿದೆ.
ಆಗಸ್ಟ್ 30 ರಂದು ಗೃಹಬಳಕೆಯ ಎಲ್‌ಪಿಜಿ ದರವನ್ನು 14.2 ಕೆಜಿ ಸಿಲಿಂಡರ್‌ಗೆ 200 ರೂಪಾಯಿ ಕಡಿತಗೊಳಿಸಿದ್ದ ತೈಲ ಕಂಪನಿಗಳು 14.2 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸದೆ ಅಷ್ಟನ್ನೇ ಮುಂದುವರೆಸಿವೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಮತ್ತು ಎಟಿಎಫ್ ಬೆಲೆಗಳನ್ನು ಪರಿಷ್ಕರಿಸುತ್ತದೆ.


Click it and Unblock the Notifications