ಸದ್ಯ ದೇಶದಲ್ಲಿ ಹಲವು ಅಭಿವೃದ್ದಿ ಯೋಜನೆಗಳಿದ್ದರೂ ಉದ್ಯೊಗ ಸಮಸ್ಯೆ ನಿರಂತರವಾಗಿ ಜನತೆಯನ್ನು ಕಾಡುತ್ತಿದ್ದು, ಇದು ದೇಶದ ಆರ್ಥಿಕತೆಗೂ ಮಾರಕವಾಗಿ ಪರಿಣಮಿಸುತ್ತಿದೆ. ಖಾಸಗಿ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದ್ದರೂ ಸಮಸ್ಯೆ ಅದೇ ರೀತಿ ಇದೆ. ವರ್ಷಂಪ್ರತಿ ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಹೊರಬರುತ್ತಿದ್ದು, ಅವರ ಶಿಕ್ಷಣ ಹಾಗೂ ಕೌಶಲ್ಯಕ್ಕೆ ತಕ್ಕಂತೆ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನತೆ ಉದ್ಯೋಗ ಅರಸುವುದಕ್ಕಿಂತ ಮಿಗಿಲಾಗಿ ಸ್ವಉದ್ಯೋಗ ಸೃಷ್ಟಿಸುವತ್ತ ಮುಂದಾಗಬೇಕು ಎಂದು ಸರ್ಕಾರವೇ ಹೇಳುತ್ತಿದೆ. ಆದರೂ ಇದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೀಗ ಜನತೆ ಸ್ವಉದ್ಯೋಗ ಸೃಷ್ಟಿಸಲು ನೆರವಾಗುವ ನಿಟ್ಟಿನಲ್ಲಿ ಈಗಾಗಲೇ ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಡಿಯಲ್ಲಿ ಜನರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದಾಗಿದೆ. ಅಲ್ಲದೆ ಇದಕ್ಕೆ ಸರ್ಕಾರ ಸಾಲ ಸೌಲಭ್ಯವನ್ನು ಕೂಡ ನೀಡುತ್ತಿದ್ದು, ಅರ್ಹ ಜನತೆ ಇದರ ಪ್ರಯೋಜನ ಪಡೆಯಬಹುದು. ಕಾರ್ಪೊರೇಟ್ ಹೊರತಾದ ಮತ್ತು ಕೃಷಿಯೇತರ ವ್ಯಾಪಾರವನ್ನು ಪ್ರಾರಂಭಿಸಲು ಪ್ರಧಾನಮಂತ್ರಿ ಮುದ್ರಾ ಯೊಜನೆಯಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲದ ಮೊತ್ತವನ್ನು ಆಧರಿಸಿ ಮೂರು ರೀತಿಯ ಸಾಲಗಳನ್ನು ನೀಡಲಾಗುತ್ತದೆ.

ಸರ್ಕಾರದ ಯೋಜನೆ ಏನು?
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಸ್ವಂತ ಉದ್ಯೊಗ ಮಾಡಲು ಬಹುತೇಕ ಎಲ್ಲರೂ ಬಯಸುತ್ತಾರೆ. ಈ ಮೂಲಕ ಆರ್ಥಿಕ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವುದು ಪ್ರತಿಯೊಬ್ಬ ನಾಗರಿಕನ ಕನಸು ಕೂಡ ಆಗಿರುತ್ತದೆ. ಆದರೆ ಸ್ವಾವಲಂಬನೆ ಅಥವಾ ಸ್ವಉದ್ಯೋಗ ಸ್ಥಾಪಿಸುವುದು ಎಲ್ಲರಿಗೂ ಅದು ಸುಲಭದ ಮಾತಲ್ಲ. ಇದಕ್ಕೆ ಆರ್ಥಿಕ ನೆರವು ಅಥವಾ ಸಾಮಾನ್ಯವಾಗಿ ಹಣದ ಅವಶ್ಯಕತೆ ಕೂಡ ಇರುತ್ತದೆ. ಆದರೆ ಸದ್ಯ ಈ ವಿಚಾರದಲ್ಲಿ ವ್ಯರ್ಥವಾಗಿ ಚಿಂತಿಸುವ ಅಗತ್ಯವಿಲ್ಲ. ಸದ್ಯ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಸರ್ಕಾರವು ನಿಮಗೆ ಸಹಾಯ ಮಾಡುತ್ತದೆ. ವಾಸ್ತವವಾಗಿ, ಉದ್ಯಮವನ್ನು ಪ್ರಾರಂಭಿಸಲು ಸರ್ಕಾರವು 10 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಭಾರತದ ಯಾವುದೇ ನಾಗರಿಕರು ಇದಕ್ಕೆ ಅರ್ಜಿ ಸಲ್ಲಿಸಬಹುದು.
್ಸ್ವಉದ್ಯೊಗ ಮಾಡುವ ಜನತೆಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮುದ್ರಾ ಯೊಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದರಡಿಯಲ್ಲಿ ನೀವು ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ ನೀವು ಈ ಯೋಜನೆಯ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಸಾಲದ ವಿಧಾನಗಳೇನು?
ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸರ್ಕಾರವು ಮೂರು ವಿಭಾಗಗಳಲ್ಲಿ ಸಾಲವನ್ನು ನೀಡುತ್ತದೆ. ಮೊದಲನೆಯದು ಶಿಶು ಸಾಲ, ಎರಡನೆಯದು ಕಿಶೋರ ಸಾಲ ಮತ್ತು ಮೂರನೆಯದು ತರುಣ್ ಸಾಲ. ಶಿಶು ಸಾಲದ ಮೂಲಕ, ನೀವು 50 ಸಾವಿರ ರೂಪಾಯಿಗಳವರೆಗೆ ಸಾಲವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕೆ ಯಾವುದೇ ಜಾಮೀನು ನೀಡುವ ಅಗತ್ಯವಿಲ್ಲ. ಕಿಶೋರ್ ಸಾಲದ ಮೂಲಕ ನೀವು 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು. ಆದರೆ ತರುಣ್ ಸಾಲದ ಅಡಿಯಲ್ಲಿ ನೀವು 5 ಲಕ್ಷದಿಂದ 10 ಲಕ್ಷ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳುವ ಮೂಲಕ ವ್ಯವಹಾರವನ್ನು ಪ್ರಾರಂಭಿಸಬಹುದು.
ಹೀಗೂ ನೀವು ಸಾಲ ಪಡೆಯಬಹುದು
ಈ ಯೋಜನೆಯಡಿಯಲ್ಲಿ ಮುದ್ರಾ ಸಾಲ ಪಡೆಯುವ ಜನರು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮುದ್ರಾ ಸಾಲದ ಮೇಲಿನ ಬಡ್ಡಿ ದರವನ್ನು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. MCLR ಅನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಲೆಕ್ಕಹಾಕಲಾಗುತ್ತದೆ. ಹಾಗಾಗಿ ಈ ಯೋಜನೆಯಡಿ ತೋಟಗಾರಿಕೆ ಮತ್ತು ಮೀನು ಸಾಕಣೆಯಂತಹ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಸಹ ಸಾಲ ಪಡೆಯಬಹುದು.
ಸಾಲದ ಮೇಲಿನ ಬಡ್ಡಿ ದರ ಎಷ್ಟು?
ಸಾಮಾನ್ಯವಾಗಿ ಬಹುತೇಕ ಎಲ್ಲಾ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತದೆ. ಆದರೆ ವಿಪರೀತ ಬಡ್ಡಿದರದಿಂದ ಜನತೆ ಸಮಸ್ಯೆಗೆ ಸಿಲುಕುವುದು ಸಹಜ. ಇನ್ನು ನೀವು ಪ್ರಧಾನಮಂತ್ರಿ ಶಿಶು ಮುದ್ರಾ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಯಾವುದೇ ಗ್ಯಾರಂಟಿಗಳ ಅಗತ್ಯವಿರುವುದಿಲ್ಲ. ಈ ರೀತಿಯ ಸಾಲದ ಪ್ರಕ್ರಿಯೆಗೆ ಯಾವುದೇ ಶುಲ್ಕವನ್ನು ಸಹ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ವಿವಿಧ ಬ್ಯಾಂಕ್‌ಗಳಲ್ಲಿನ ಬಡ್ಡಿದರಗಳಲ್ಲಿ ವ್ಯತ್ಯಾಸವಿರಬಹುದು. ಈ ಯೋಜನೆಯಡಿ ಬಡ್ಡಿದರವು 9 ರಿಂದ 12 ಪ್ರತಿಶತ ಇರುವ ಸಾಧ್ಯತೆ ಇದೆ.
ಯಾರು ಅರ್ಜಿ ಸಲ್ಲಿಸಬಹುದು?
18 ವರ್ಷ ಮೇಲ್ಪಟ್ಟ ಭಾರತದ ಯಾವುದೇ ನಾಗರಿಕರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಅರ್ಜಿದಾರರು ಯಾವುದೇ ಬ್ಯಾಂಕ್ ಡೀಫಾಲ್ಟ್ ಇತಿಹಾಸವನ್ನು ಹೊಂದಿರಬಾರದು. ಸಾಲ ಪಡೆಯಲು ಬ್ಯಾಂಕ್‌ನಲ್ಲಿ ಖಾತೆ ಇರಬೇಕು. ನೀವು ಸಾಲವನ್ನು ತೆಗೆದುಕೊಳ್ಳುತ್ತಿರುವ ವ್ಯವಹಾರವು ಕಾರ್ಪೊರೇಟ್ ಘಟಕವಾಗಿರಬಾರದು ಎಂಬುವುದು ಬಹುಮುಖ್ಯವಾಗಿದೆ. ಇನ್ನು ಸಾಲ ಪಡೆಯಲು ನೀಡುವ ದಾಖಲೆಗಳ ವಿಚಾರಕ್ಕೆ ಬಂದರೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸ ಪ್ರಮಾಣಪತ್ರ, ಪಾಸ್‌ಪೋರ್ಟ್ ಗಾತ್ರದ ಫೋಟೋ, ವ್ಯವಹಾರ ಯೋಜನೆ, ಕೆವೈಸಿ ದಾಖಲೆ, ಆದಾಯ ಪುರಾವೆ ಮುಂತಾದ ದಾಖಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ನೀವು ಎಲ್ಲಿ ಅರ್ಜಿ ಸಲ್ಲಿಸಬಹುದು
ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ https://www.mudra.org.in/ ಗೆ ಭೇಟಿ ನೀಡಬಹುದು. ಈ ವೆಚ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications