ಸರ್ಕಾರದ ಒಟ್ಟು ಸಾಲ ಸೆಪ್ಟೆಂಬರ್ ಕೊನೆಗೆ 107 ಲಕ್ಷ ಕೋಟಿ ರು.ಗೆ ಏರಿಕೆ

2020ರ ಸೆಪ್ಟೆಂಬರ್ ಕೊನೆಗೆ ಸರ್ಕಾರದ ಒಟ್ಟು ಸಾಲವು 107.04 ಲಕ್ಷ ಕೋಟಿ ರುಪಾಯಿ ಆಗಿದೆ. 2020ರ ಜೂನ್ ಕೊನೆಗೆ 101.3 ಲಕ್ಷ ಕೋಟಿ ರುಪಾಯಿ ಇತ್ತು ಎಂದು ಬುಧವಾರ ಸಾರ್ವಜನಿಕ ಸಾಲದ ಲೆಕ್ಕಾಚಾರದ ಮಾಹಿತಿ ಬುಧವಾರ ಬಹಿರಂಗ ಆಗಿದೆ. FY21 Q2ಗೆ ಕಳೆದ ತ್ರೈಮಾಸಿಕಕ್ಕಿಂತ ಈ ಬಾರಿಗೆ 5.6% ಹೆಚ್ಚಳವಾಗಿದೆ.

2020ರ ಸೆಪ್ಟೆಂಬರ್ ಕೊನೆಗೆ ಸಾರ್ವಜನಿಕ ಸಾಲ ಮೊತ್ತವು ಒಟ್ಟಾರೆ ಸಾಲದ ಬಾಕಿಯ ಶೇಕಡಾ 91.1ರಷ್ಟಿತ್ತು. FY21 Q2ನಲ್ಲಿ ಹದಿಮೂರು ಕಂತಿನಲ್ಲಿ ನಿಶ್ಚಿತ ದಿನಾಂಕದ ಸೆಕ್ಯೂರಿಟೀಸ್ ಗಳ ವಿತರಣೆಯ ಹರಾಜಿನ ಮೂಲಕ ಸರಾಸರಿ 4,20,000 ಕೋಟಿ ರುಪಾಯಿಯಷ್ಟಿದೆ. ಅದು ಈ ಹಿಂದೆ ಪ್ರಸಕ್ತ ವರ್ಷಕ್ಕೆ ಘೋಷಣೆ ಮಾಡಿದ್ದಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಮೊತ್ತವಾಗಿದೆ. ಏಕೆಂದರೆ, ಗ್ರೀನ್ ಶೂ ಆಪ್ಷನ್ ಬಳಸಿಕೊಳ್ಳಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು 3,46,000 ಕೋಟಿ ರುಪಾಯಿ ಮೌಲ್ಯದ ಸೆಕ್ಯೂರಿಟೀಸ್ ವಿತರಣೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,21,000 ಕೋಟಿ ಸಂಗ್ರಹಿಸಲಾಗಿತ್ತು.

ಸರ್ಕಾರದ ಸಾಲ ಸೆಪ್ಟೆಂಬರ್ ಕೊನೆಗೆ 107 ಲಕ್ಷ ಕೋಟಿ ರು.ಗೆ ಏರಿಕೆ

ಸರ್ಕಾರದ ಸೆಕ್ಯೂರಿಟೀಸ್ ಗಳ ಮಾಲೀಕತ್ವ ಬಗೆಯು ಹೀಗಿದೆ: ವಾಣಿಜ್ಯ ಬ್ಯಾಂಕ್ ಗಳ ಪಾಲು 2020ರ ಸೆಪ್ಟೆಂಬರ್ ಕೊನೆಗೆ 38.6% ಇದೆ. 2020ರ ಮಾರ್ಚ್ ನಲ್ಲಿ 40.4% ಇತ್ತು. "ಇನ್ಷೂರೆನ್ಸ್ ಕಂಪೆನಿಗಳು ಮತ್ತು ಪ್ರಾವಿಡೆಂಟ್ ಫಂಡ್ ಗಳ ಪಾಲು 2020ರ ಸೆಪ್ಟೆಂಬರ್ ಕೊನೆಗೆ 25.3% ಹಾಗೂ 4.8% ಇತ್ತು. ಇನ್ನು 2020ರ ಜೂನ್ ನಲ್ಲಿ 2.0% ಇದ್ದ ಮ್ಯೂಚುವಲ್ ಫಂಡ್ ಪಾಲು ಸೆಪ್ಟೆಂಬರ್ ಗೆ 2.4%ಗೆ ಏರಿಕೆ ಆಗಿದೆ," ಎಂದು ತಿಳಿಸಲಾಗಿದೆ.

ಇನ್ನು ಕೇಂದ್ರ ಸರ್ಕಾರದಿಂದ ಸಾಲ ಪಡೆಯುವ ಗುರಿಯನ್ನು 12 ಲಕ್ಷ ಕೋಟಿ ರುಪಾಯಿಗೆ ಪರಿಷ್ಕರಣೆ ಮಾಡಿದ ಮೇಲೆ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರದ ಸೆಕ್ಯೂರಿಟೀಸ್ ಗಳ ಬೆಳವಣಿಗೆ ಕಡಿಮೆ ಆಗಿದೆ. ಇದರ ಜತೆಗೆ ಆರ್ ಬಿಐ ಹಣಕಾಸು ನೀತಿಯ ಮೂಲಕ ದರ ಬದಲಾವಣೆ ಮಾಡದಿದ್ದುದು, ಚೀನಾ ಜತೆಗಿನ ಭೌಗೋಳಿಕ ರಾಜಕೀಯ ಸಂಘರ್ಷ, ಚಿಲ್ಲರೆ ಹಣದುಬ್ಬರ ದರ ಇವೆಲ್ಲವೂ ಪರಿಣಾಮ ಬೀರಿದೆ.

ಹತ್ತು ವರ್ಷದ ಬೆಂಚ್ ಮಾರ್ಕ್ ಸೆಕ್ಯೂರಿಟಿ 5.84 ಪರ್ಸೆಂಟ್ ನೊಂದಿಗೆ ಜುಲೈ ಆರಂಭದಲ್ಲಿ ಇದ್ದದ್ದು ಸೆಪ್ಟೆಂಬರ್ ಕೊನೆಗೆ 6.02 ಪರ್ಸೆಂಟ್ ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+