ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಬೆಲೆ ಏರಿಕೆ ಬಿಸಿ ಜನರನ್ನು ಕಾಡುತ್ತಲೇ ಇದೆ. ಅತ್ತ ಮೆಟ್ರೋ, ಬಸ್, ನೀರು, ವಿದ್ಯುತ್ ಹೀಗೆ ರಾಜ್ಯ ಸರ್ಕಾರ ದರ ಏರಿಕೆ ಶಾಕ್ (Price Hike Shock) ನೀಡುತ್ತಲೇ ಬಂದಿದೆ. ಅತ್ತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಗುಡ್ ನ್ಯೂಸ್ ಕೊಟ್ಟರೆ, ಇತ್ತ ಪುರುಷರಿಗೆ ಕಳೆದ ವರ್ಷ ಬಸ್ ದರ ಏರಿಕೆ ಮಾಡಿ ಬಿಗ್ ಶಾಕ್ ಕೊಟ್ಟಿತ್ತು. ಆದ್ರೆ ಇದೀಗ ಬಸ್ ಪ್ರಯಾಣಿಕರಿಗೆ (Bus Passengers) ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಅದೇನು ಗೊತ್ತಾ? ಇಲ್ಲಿದೆ ಓದಿ.

2025 ರಂತೆ, 2026 ರಲ್ಲಿಯೂ ಬಸ್ ಟಿಕೆಟ್ ದರ ಏರಿಕೆಯಾಗಬಹುದು, ಮತ್ತೆ ಪುರಷರ ಜೇಬಿಗೆ ಕತ್ತರಿ ಬೀಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸದ್ಯಕ್ಕೆ ಬಸ್ ಟಿಕೆಟ್ ದರದಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಪ್ರಯಾಣಿಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
2025ರಲ್ಲಿ ಏರಿಕೆ ಕಂಡಿದ್ದ ಬಸ್ ಟಿಕೆಟ್ ದರ!
ಕಳೆದ ವರ್ಷದ ಜನವರಿಯಲ್ಲಿ ರಾಜ್ಯದ ಬಸ್ ಟಿಕೆಟ್ ದರದಲ್ಲಿ ಶೇ.15% ರಷ್ಟು ಏರಿಕೆ ಕಂಡಿತ್ತು. ಆ ನಂತರ ಸರ್ಕಾರವು ಪ್ರತೀ ವರ್ಷ ದರ ಪರಿಷ್ಕರಣೆ ಮಾಡಲಾಗುತ್ತೆ ಎಂದು ಹೇಳಲಾಗಿತ್ತು. ಆದ್ರೆ ಇದೀಗ ಈ ವರ್ಷ ದರ ಏರಿಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಇನ್ನು ದರ ಏರಿಕೆ ಕುರಿತು ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, "ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ. ಸಮಿತಿ ರಚನೆಯಾಗಿ ವರದಿ ಬಿಡುಗಡೆ ಮಾಡಿದ ನಂತರವೇ, ದರ ಏರಿಕೆ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನು ಮುಂದಿನ 6 ತಿಂಗಳಲ್ಲಿ ಸಮಿತಿ ರಚನೆಯಾಗಲಿದೆ. ಆ ಬಳಿಕ ಬಸ್ ಟಿಕೆಟ್ ದರ ಪರಿಷ್ಕರಣೆಯಾಗಲಿದೆ. ಆದ್ದರಿಂದ ಮುಂದಿನ ವರ್ಷ 2027 ರಲ್ಲಿ ಬಸ್ ಟಿಕೆಟ್ ದರದಲ್ಲಿ ಪರಿಷ್ಕರಣೆಯಾಗಲಿದೆ ಎಂದು ಹೇಳಲಾಗಿದೆ.
ಸಚಿವರ ಈ ಹೇಳಿಕೆಯಿಂದ ರಾಜ್ಯದ ಪುರುಷರಿಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಂತಾಗಲಿದೆ. ಕಳೆದ ವರ್ಷದಲ್ಲಿ ಮೆಟ್ರೋ, ಬಸ್ ಟಿಕೆಟ್ ದರಗಳು ಒಂದೇ ಬಾರಿ ಒಮ್ಮೆಲೆ ಭಾರೀ ಏರಿಕೆ ಕಂಡಿತ್ತು. ಇದರಿಂದ ಪ್ರಯಾಣಿಕರು ಕೂಡಾ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಬದಲಾವಣೆ ಮಾಡದಿರುವುದರಿಂದ ಹಿಂದಿನ ಬೆಲೆಯಲ್ಲೇ ಸ್ಥಿರವಾಗಿರುತ್ತದೆ ಎನ್ನಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ದಿನನಿತ್ಯ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುವ ಲಕ್ಷಾಂತರ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಲಿದೆ. ಅಲ್ಲದೇ ಆರ್ಥಿಕವಾಗಿಯೂ ಭಾರೀ ಪ್ರಯೋಜನ ಸಿಗಲಿದೆ. ಕಳೆದ ವರ್ಷದ ಏರಿಕೆಯಿಂದಲೇ ಬಡವರ ಜೇಬಿಗೆ ಭಾರೀ ಹೊಡೆತ ಬಿದ್ದಿತ್ತು. ಆದ್ರೆ ಇದೀಗ ಅದೇ ಬೆಲೆಯಲ್ಲಿ ಮುಂದುವರೆಯುವುದಾಗಿ ಸರ್ಕಾರ ಭರವಸೆ ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಭಾರೀ ಅನುಕೂಲವಾಗಲಿದೆ.


Click it and Unblock the Notifications