ದೇಶದಾದ್ಯಂತ ಇರುವ ಆದಾಯ ತೆರಿಗೆ ಇಲಾಖೆಯ ತನಿಖಾ ದಳಕ್ಕೆ ಸರ್ಕಾರದಿಂದ ವಿಶೇಷ ಘಟಕವನ್ನು ಸೃಷ್ಟಿಸಲಾಗಿದೆ. ಈ ಘಟಕವು ಭಾರತೀಯರು ಬಹಿರಂಗ ಮಾಡದ ಆಸ್ತಿ, ವಿದೇಶದಲ್ಲಿನ ಇರುವ ಸ್ವತ್ತು ಹಾಗೂ ಕಪ್ಪು ಹಣ ಪ್ರಕರಣಗಳ ತನಿಖೆ ನಡೆಸುತ್ತದೆ. ಫಾರಿನ್ ಅಸೆಟ್ ಇನ್ವೆಸ್ಟಿಗೇಷನ್ ಯೂನಿಟ್ಸ್ (FAIU) ಅನ್ನು ಈಚೆಗೆ ದೇಶದ ವಿವಿಧೆಡೆ ಇರುವ ಎಲ್ಲ ಹದಿನಾಲ್ಕು ತನಿಖಾ ನಿರ್ದೇಶನಾಲಯದಲ್ಲಿ ಸೃಷ್ಟಿಸಲಾಯಿತು.
ಇದು ಮುಖ್ಯವಾಗಿ ದಾಳಿ ನಡೆಸುತ್ತದೆ ಮತ್ತು ವಶಪಡಿಸಿಕೊಳ್ಳುತ್ತದೆ. ಇದರ ಜತೆಗೆ ವಿವಿಧ ವಿಧಾನದಲ್ಲಿ ತೆರಿಗೆ ಕಳುವು ಮಾಡಿರುವುದನ್ನು ಪತ್ತೆ ಹಚ್ಚುವುದಕ್ಕೆ ಗುಪ್ತಚರ ವಿಭಾಗವನ್ನು ಗಟ್ಟಿಗೊಳಿಸುತ್ತದೆ. ತೆರಿಗೆ ಇಲಾಖೆಯಲ್ಲಿ ಇರುವ ಎಲ್ಲ 69 ಹುದ್ದೆಗಳನ್ನು ಸಿಬಿಡಿಟಿಯಿಂದ ಕಳೆದ ನವೆಂಬರ್ ನಲ್ಲಿ ಈ ಘಟಕದ ರಚನೆಗೆ ನಿಯೋಜಿಸಲಾಯಿತು. ಅದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನುಮತಿ ನೀಡಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಜಾಗತಿಕ ಮಟ್ಟದಿಂದ ತೆರಿಗೆ ಮಾಹಿತಿಗಳು ವಿನಿಮಯ ಆಗುತ್ತಿವೆ. ಜಾಗತಿಕ ಮಟ್ಟದ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು, ತೆರಿಗೆ ಕಳುವಿನ ಪ್ರಕರಣಗಳನ್ನು ತಡೆಯಲು ಪರಸ್ಪರ ಸಹಕಾರ ಒಪ್ಪಂದಗಳು ಆಗಿವೆ. ವಿವಿಧ ದೇಶೀ ಹಾಗೂ ಅಂತರರಾಷ್ಟ್ರೀಯ ಮೂಲಗಳಿಂದಲೂ ದತ್ತಾಂಶಗಳು ಬರುತ್ತಿವೆ. ಆದ್ದರಿಂದ ಅಷ್ಟು ದೊಡ್ಡ ಪ್ರಮಾಣದ ಮಾಹಿತಿ ವಿಶ್ಲೇಷಣೆಗಾಗಿಯೇ ಈ ಘಟಕ ಕೆಲಸ ಮಾಡುತ್ತಿದೆ.

ಅಷ್ಟೇ ಅಲ್ಲ, ಈ ಹೊಸ ಘಟಕವು ಜಾಗತಿಕ ತೆರಿಗೆ ದಾಖಲಾತಿ ಲೀಕ್ಸ್ ಗಳಾದ ಪನಾಮ ಪೇಪರ್ಸ್ ನಂಥ ಪ್ರಕರಣಗಳ ತನಿಖೆ ಕೂಡ ಮಾಡುತ್ತದೆ. ಈಕ್ವಿಟಿ, ಮ್ಯೂಚುವಲ್ ಫಂಡ್ ಗಳು, ಇನ್ಷೂರೆನ್ಸ್ ಮೊದಲಾದವುಗಳ ಬಗ್ಗೆ ಮಾಹಿತಿ ವಿನಿಮಯವನ್ನು ತಾನಾಗಿಯೇ ಮಾಡಿಕೊಳ್ಳುವ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಇಂಥ ಒಪ್ಪಂದ ಪ್ರಮುಖವಾಗಿ ಭಾರತ ಮತ್ತು ಯುಎಸ್ ಮಧ್ಯೆ ಆಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications