ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದರ ಏರಿಕೆಗೆ ಗ್ರೀನ್‌ಪೀಸ್ ಇಂಡಿಯಾ ವಿರೋಧವನ್ನ ವ್ಯಕ್ತಪಡಿಸಿದೆ. ಈ ದರ ಏರಿಕೆ ಸಾರ್ವಜನಿಕರಿಗೆ ಹೊರೆಯಾಗಲಿದೆ ಹೀಗಾಗಿ ಸಾರ್ವಜನಕರಿಗೆ ಕೈಗೆಟುಕುವ ದರವನ್ನ ನಿಗದಿ ಮಾಡಬೇಕು ಎಂದು ಗ್ರೀನ್‌ಪೀಸ್ ಇಂಡಿಯಾ ಸರ್ಕಾರವನ್ನ ಒತ್ತಾಯಿಸಿದೆ.
ನಮ್ಮ ಮೆಟ್ರೋ ಪ್ರಯಾಣದ ದರ ಹಾಗು ಬಸ್ ದರ ಏರಿಕೆ ಕುರಿತು ಪರಿಸರ ಸಂಘಟನೆ ಗ್ರೀನ್‌ಪೀಸ್ ಇಂಡಿಯಾ ಪತ್ರ ಬರೆದಿದ್ದು, ಮೆಟ್ರೋ ದರ ಏರಿಕೆಯ ಪ್ರಸ್ತಾಪವನ್ನ ಮರುಪರಿಶೀಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ವನ್ನ ಆಗ್ರಹಿಸಿದೆ. ಜೊತೆಗೆ ಬಸ್ ದರ ಏರಿಕೆಯನ್ನ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಗೆ ಒತ್ತಾಯಿಸಿದೆ.

ಮೆಟ್ರೋ ದರವನ್ನು ಶೇಕಡಾ 40 ರಿಂದ 45 ರಷ್ಟು ಏರಿಕೆ ಮಾಡಲು ದರ ನಿಗದಿ ಸಮಿತಿಯು(ಎಫ್‌ಎಫ್‌ಸಿ) ಶಿಫಾರಸು ಮಾಡಿದೆ. ನಮ್ಮ ಮೆಟ್ರೋದ ಮೂಲ ದರ 10 ರಿಂದ 15 ರೂ. ಇದ್ದು, ಗರಿಷ್ಠ ದರ 60 ರೂ. ಇದೆ. ಇನ್ನು ಬೆಲೆ ಏರಿಕೆ ಮಾಡಿದ ನಂತರ ನಮ್ಮ ಮೆಟ್ರೋ ಪ್ರಯಾಣದ ಕನಿಷ್ಠ ದರ 15 ರೂ. ಆಗಲಿದ್ದು, ಗರಿಷ್ಠ ದರ 85 ರೂ. ಆಗಲಿದೆ. ಇದು ಸಾರ್ವಜನಿಕರಿಗೆ ಹೊರೆಯಾಗಲಿದೆ. ಹೀಗಾಗಿ ಇದನ್ನ ಮರುಪರಿಶೀಲನೆ ಮಾಡುವಂತೆ ಗ್ರೀನ್‌ಪೀಸ್ ಇಂಡಿಯಾ ತಿಳಿಸಿದೆ. ಇದರ ಜೊತೆಗೆ ಜನವರಿ 5, 2025 ರಂದು 15% ಬಸ್ ದರ ಏರಿಕೆ ಮಾಡಿರುವುದನ್ನ ಕೂಡ ಹಿಂಪಡೆಯುವಂತೆ ಪರಿಸರ ಸಮಘಟನೆಯು ತಿಳಿಸಿದೆ.
ಈಗಾಗಲೇ ಬೆಂಗಳೂರು ನಗರವು ತೀವ್ರ ಟ್ರಾಫಿಕ್ ಸಮಸ್ಯೆಯನ್ನ ಎದುರಿಸುತ್ತಿದ್ದು, ಇದರ ಮಧ್ಯೆ ಟ್ರಾಫಿಕ್ ತಪ್ಪಿಸಲು ಜನರು ನಮ್ಮ ಮೆಟ್ರೋ ಮೇಲೆ ಅವಲಂಬಿತರಾಗಿರುವ ವೇಳೆಯಲ್ಲೇ ಮೆಟ್ರೋ ದರಗಳು ಕೂಡ ಹೆಚ್ಚಳವಾಗಿದೆ. ಈ ಹಿಂದೆ 2017ರಲ್ಲಿ ಮೊದಲ ಬಾರಿ ಮೆಟ್ರೋ ದರವನ್ನ ಏರಿಕೆ ಮಾಡಿತ್ತು. ಆ ಸಮಯದಲ್ಲೂ ಕೂಡ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸುವಂತಾಯಿತು. ಈ ಬಾರಿ ಕೂಡ ಮೆಟ್ರೋ ದರ ಏರಿಕೆ ಮಾಡಿದ್ದಲ್ಲದೆ, ಬಸ್ ದರವನ್ನ ಕೂಡ ಏರಿಕೆ ಮಾಡಿ ಸಾರ್ವಜನಿಕರನ್ನ ಮತ್ತೆ ಸಂಕಷ್ಟಕ್ಕೆ ತಂದೊಡ್ಡುವಂತೆ ಮಾಡಿದೆ.
ಟ್ರಾಪಿಕ್ ಸಮಸ್ಯೆಯಿಂದ ಪಾರಾಗಲು ಜನರು ಮೆಟ್ರೋ ಪ್ರಯಾಣಕ್ಕೆ ಹೆಚ್ಚು ಒತ್ತು ನೀಡ್ತಿದ್ರೆ ಇತ್ತ ಬೆಲೆ ಎರಿಕೆಯ ಬಿಸಿ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿರುವ ಸಮಯದಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಿಕೊಡುವುದು ಮುಖ್ಯವಾಗುತ್ತದೆ.
ಈಗಂತು ಜನಸಾಮಾನ್ಯರ ಪ್ರಯಾಣಕ್ಕೆ ಮೆಟ್ರೋ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಹೀಗಾಗಿ ಅವರ ಕೈಗೆಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನ ಒದಗಿಸುವುದು ಬಹಳ ಮುಖ್ಯ. ಟ್ರಾಫಿಕ್ ಸಮಸ್ಯೆಗಳ ಸುಧಾರಣೆಗೆ ಮೆಟ್ರೋ ಮುಖ್ಯ ಪಾತ್ರವನ್ನ ವಹಿಸುತ್ತದೆ. ಹೀಗಿರುವಾಗ ಬಿಎಂಆರ್‌ಸಿಎಲ್ ಪ್ರಯಾಣದ ದರವನ್ನ ಏರಿಕೆ ಮಾಡಿದ್ರೆ ಮತ್ತೆ ಕಡಿಮೆ ಆದಾಯದ ಜನಸಾಮಾನ್ಯರು ಮೆಟ್ರೋ ಸೌಲಭ್ಯದಿಂದ ವಂಚಿತರಾಗುವುದಂತು ಸತ್ಯ. ಹೀಗಾಗಿ ಸಾರ್ವಜನಿಕರ ಕೈಗೆಟುಕುವ ದರವನ್ನ ನಿಗದಿಗೊಳಿಸಬೇಕು ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕ ಆಕಿಜ್ ಫಾರೂಕ್ ಆಗ್ರಹಿಸಿದರು.
ಆರ್ಥಿಕ ನೆರವಿಗಾಗಿ ಸರ್ಕಾರಕ್ಕೆ ಗ್ರೀನ್‌ಪೀಸ್ ಇಂಡಿಯಾ ಒತ್ತಾಯ
ರಾಜ್ಯ ಮತ್ತು ರಾಷ್ಟ್ರೀಯ ಸರ್ಕಾರಗಳ ವಾರ್ಷಿಕ ಕೊಡುಗೆಗಳೊಂದಿಗೆ ಮೀಸಲಾದ ಸಾರ್ವಜನಿಕ ಸಾರಿಗೆ ನಿಧಿಯನ್ನು ರಚಿಸುವಂತೆ ಗ್ರೀನ್‌ಪೀಸ್ ಇಂಡಿಯಾ ಒತ್ತಾಯಿಸಿತು. ಇನ್ನು ಈ ನಿಧಿಗಳನ್ನ ನಮ್ಮ ಮೆಟ್ರೋ ಕಾರ್ಯಾಚರಣೆಗೆ ಮಾತ್ರ ಬಳಕೆ ಮಾಡುವಂತೆ ಆಗ್ರಹಿಸಿದೆ. ಈ ಮಲಕ ಸಾರ್ವಜನಿಕರ ಮೇಲಿನ ಹೊರೆಯನ್ನ ಕಡಿಮೆ ಮಾಡಬಹುದು. ಹೀಗಾಗಿ ಕೆಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಪರಿಸರ ಸಂಘಟನೆ ತಿಳಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನಂತಹ ನಗರಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯವನ್ನ ಒದಗಿಸುವ ಕೆಲಸವನ್ನ ಸರ್ಕಾರ ಮಾಡಬೇಕು. ಈ ಮೂಲಕ ಬೆಂಗಳೂರನ್ನು ಸ್ವಚ್ಛ, ದಟ್ಟಣೆ ಮುಕ್ತ ಮತ್ತು ಪರಿಸರ ಪ್ರಜ್ಞೆ ಹೊಂದಿರುವ ನಗರವನ್ನಾಗಿ ಬದಲಾಯಿಸಬಹುದು ಎಂದು ಗ್ರೀನ್‌ಪೀಸ್ ಸಂಸ್ಥೆ ತಿಳಿಸಿದೆ.
ಹಾಗೆ ಈ ಕೂಡಲೇ ಮೆಟ್ರೋ ಮತ್ತು ಬಸ್ ದರ ಏರಿಕೆಯನ್ನ ಪರಿಶೀಲಿಸಬೇಕು. ಮತ್ತು ಇದನ್ನ BMRCL ಮತ್ತು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಹಿಂಪಡೆಯಬೇಕು. ಜನಸಾಮಾನ್ಯರಿಗೆ ಹೊರೆಯಾಗದಂತೆ ಕೃಗೆಟುಕುವ ದರವನ್ನ ನಿಗದಿ ಮಾಡಬೇಕು ಎಂದು ಪರಿಸರ ಸಂಘಟನೆ ಆಗ್ರಹಿಸಿದೆ.
ಜೊತೆಗೆ ಯಾವುದೇ ದರ ಏರಿಕೆಗಳನ್ನ ಜಾರಿ ಮಾಡುವ ಮುನ್ನ ಸಾರ್ವಜನಿಕರ ಅಭಿಪ್ರಾಯಗಳನ್ನ ಪಡೆಯಬೇಕು. ಈ ದರ ಏರಿಕೆ ಸಾರ್ವಜನಿಕರ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಮೊದಲು ಅರಿಯಬೇಕು. ಸಾರ್ವಜನಿಕ ಸಮಾಲೋಚನೆಗಳನ್ನ ನಡೆಸುವ ಮೂಲಕ ಈ ಕುರಿತು ಮಾಹಿತಿಯನ್ನ ಸಂಗ್ರಹಿಸಬೇಕು ಎಂದು ಗ್ರೀನ್‌ಪೀಸ್ ಇಂಡಿಯಾ ತಿಳಿಸಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications