ಗೃಹಜ್ಯೋತಿ ಯೋಜನೆಗೆ ಸರಿಯಾಗಿ ಸರ್ಕಾರ ದುಡ್ಡು ಕೊಡದಿದ್ರೆ ಜನರಿಂದಲೇ ವಸೂಲಿ ಮಾಡುವ ಎಸ್ಕಾಂಗಳ ಪ್ರಸ್ತಾವಕ್ಕೆ ಜನಾಕ್ರೋಶಕ್ಕೆ ಕೇಳಿಬಂದಿದ್ದು, ವಿಪಕ್ಷಗಳ ಸರ್ಕಾರದ ಮೇಲೆ ಮುಗಿಬಿದ್ದ ಹಿನ್ನಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ. " ಯಾವುದೇ ಕಾರಣಕ್ಕೂ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಹಣ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ" ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಜನರಿಂದ ಹಣ ಸಂಗ್ರಹಣೆ ಮಾಡಲು ಚೆಸ್ಕಾಂನಿಂದ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ನಿಜ ವಿಚಾರ. ಆದರೆ ಇದೊಂದು ಅಸಂಬದ್ದ ಪ್ರಸ್ತಾವನೆ. ಗ್ರಾಹಕರಿಂದ ಹಣ ವಸೂಲಿ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ(ಕೆಇಆರ್ ಸಿ) ಗೆ ಅನಗತ್ಯ ಪ್ರಸ್ತಾವನೆ ಸಲ್ಲಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ನೊಟೀಸ್ ನೀಡಲಾಗುತ್ತದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.

" ಗೃಹಜ್ಯೋತಿ ಹಣ ಜನರಿಂದ ವಸೂಲಿ" ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ " ಎಲ್ಲಾ ನಿಗಮಗಳು ಈ ಪ್ರಸ್ತಾವನೆ ಸಲ್ಲಿಸಿಲ್ಲ. ಕ್ವಲ ಚೆಸ್ಕಾಂ ಮಾತ್ರ ಸಲ್ಲಿಸಿದೆ. ಇಂತಹ ಪ್ರಸ್ತಾವನೆ ತೀರಾ ಅನಗತ್ಯವಾಗಿತ್ತು. ಹಾಗಿದ್ರೂ ಯಾಕೆ ಈ ರೀತಿ ಸಲ್ಲಿಕೆ ಮಾಡಿದ್ದಾರೆ ತಿಳಿಯದು. ಈ ಹಿನ್ನಲೆಯಲ್ಲಿ ಈ ಬಗ್ಗೆ ಚೆಸ್ಕಾಂ ಗೆ ನೊಟೀಸ್ ನೀಡಿ ವಿವರ ಪಡೆಯಲಾಗುವುದು. ನಾವು ಗೃಹಜ್ಯೋತಿ ಸಬ್ಸಿಡಿ ಹಣವನ್ನು ಮುಂಗಡವಾಗಿಯೇ ಎಸ್ಕಾಂಗಳಿಗೆ ಪಾವತಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದಾರೆ. ಹೀಗಾಗಿ ಗೃಹ ಜ್ಯೋತಿ ಯೋಜನೆಗೆ ಯಾವ ತೊಂದರೆಯೂ ಇಲ್ಲ. ಈ ವಿಚಾರವಾಗಿ ಯಾರು ಹೆಚ್ಚು ರ್ಚರ್ಚೆ ಮಾಡುವ ಅಗತ್ಯವಿಲ್ಲ. ಶೂನ್ಯ ಬಿಲ್ ಬರುತ್ತಿರುವ ಎಲ್ಲರಿಗೂ ಈ ಪ್ರಯೋಜನ ಮುಂದುವರಿಯಲಿದೆ ಈ ಬಗ್ಗೆ ಯಾವ ಗೊಂದಲಗಳು ಬೇಡ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳಕ್ಕೆ ವಿವಿಧ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದೇ ವೇಳೆ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಸಬ್ಸಿಡಿ ಪಾವತಿ ವಿಧಾನದ ನಿಯಮಾವಳಿ - ೨೦೦೮ರ ೬.೧ರ ನಿಯಮದ ಪ್ರಕಾರ ರಾಜ್ಯ ಸರ್ಕಾರ ಎಸ್ಕಾಂ ಗಳಿ ಮುಂಚಿತವಾಗಿ ಪಾವತಿ ಮಾಡಬೇಕು. ಹೀಗಾಗಿ ಗೃಹಜ್ಯೋತಿ ಯೋಜನೆಯಡಿ ಮುಂಗಡವಾಗಿ ಹನ ಪಾವತಿಸದಿದ್ದರೆ ಗ್ರಾಹಕರಿಂದ ಸಂಗ್ರಹ ಮಾಡಲು ಅವಕಾಶ ನೀಡಬೇಕು ಎಂದು ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ೨೦೦೮ ರ ಬಿಜೆಪಿ ಅವಧಿಯಲ್ಲಿ ಕೆಇಆರ್ ಸಿ ನಿಯಮಾವಳಿ ಮಾಡಿದೆ. ಇದನ್ನು ಈಗ ಚೆಸ್ಕಾಂ ಪ್ರಸ್ತಾವನೆ ಮಾಡಿರೋದ್ರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಬಿಜೆಪಿಯವರು ಕೂಡಾ ಸುಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ನಮ್ಮ ಸರ್ಕಾರ ಸಾರ್ವಜನಿಕರಿಂದ ಗೃಹಜ್ಯೋತಿ ಹಣ ವಸೂಲಿ ಮಾಡುವುದಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳಕ್ಕೆ ವಿವಿಧ ಎಸ್ಕಾಂಗಳು ಮನವಿ
ವಿದ್ಯುತ್ ಉತ್ಪಾದನೆ, ಖರೀದಿ, ಪ್ರಸರಣ ವೆಚ್ಚದಲ್ಲಿ ಏರಿಕೆಯಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ . ಹೀಗಾಗಿ ಪ್ರತಿ ಯೂನಿಟ್ ಬೆಲೆಯನ್ನು 37 ಪೈಸೆಯಿಂದ 1.32 ರೂಪಾಯಿವರೆಗೆ ಹೆಚ್ಚಿಸುವಂತೆ ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‌ಸಿ ಮನವಿ ಪ್ರಸ್ತಾವನೆ ಸಲ್ಲಿಸಿದೆ. ಕೆಇಆರ್‌ಸಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದು, ಫೆಬ್ರವರಿ 27 ರಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಲಿದೆ. ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ, ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳವನ್ನು ಕೆಇಆರ್‌ಸಿ ಪ್ರಕಟಿಸುವ ನಿರೀಕ್ಷೆಯಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications