ಕಳ್ಳರು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬ ಮಾತಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ವಂಚಕರು ಕೂಡ ರಂಗೋಲಿ ಕೆಳಗೆ ತೂರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅಂಥವರ ನಿಜಬಣ್ಣವನ್ನು ಬಹಿರಂಗ ಮಾಡುವಲ್ಲಿ ಪೊಲೀಸರು ಕೂಡ ಯಾವುದೇ ಅವಕಾಶ ಬಿಡುವುದಿಲ್ಲ.
ಇನ್ನು ನರೇಂದ್ರ ಮೋದಿ ಸರ್ಕಾರ ಬಂದ ಅವಧಿಯಲ್ಲಿ ಆರಂಭವಾಗಿರುವ ಜಿಎಸ್ ಟಿ ಅನುಷ್ಟಾನದ ಬಳಿಕ ದೇಶದಲ್ಲಿ ತೆರಿಗೆ ಸಂಗ್ರಹದ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯವಾಗಿದೆ ಎಂಬ ಕೇಳಿಬಂದಿದ್ದರೂ ಇನ್ನೂ ಕೆಲವು ಕಡೆಗಳಿಂದ ಜಿಎಸ್‌ಟಿಯಿಂದ ನಷ್ಟವೇ ಹೆಚ್ಚಾಗಿದೆ ಎಂದು ಆರೋಪಿಸುತ್ತಾರೆ.

ಇನ್ನು ಜಿಎಸ್‌ಟಿ ಬಂದ ಬಳಿಕ ದೇಶದಲ್ಲ ಮೋಸ ಮಾಡಿ, ತೆರಿಗೆ ವಂಚನೆ ನಡೆಸುವುದು ಬಹುತೇಕ ಅಸಾಧ್ಯದ ಮಾತು ಎಂಬ ಹೇಳಿಕೆ ನಡುವೆಯೂ ಕೆಲವೊಂದು ಕಡೆಗಳಲ್ಲಿ ಜಿಎಸ್‌ಟಿ ವಂಚಿಸಿ, ತೆರಿಗೆ ಹಣ ಲಪಟಾಯಿಸುವ ತಂಡವೇ ಕಾರ್ಯನಿರ್ವಹಿಸುತ್ತಿದೆ.
ಬೋಗಸ್ ಕಂಪೆನಿಗಳ ಹೆಸರು ಮೂಲಕ ಜಿಎಸ್‌ಟಿ ಹಣ ದೋಚುವ ಹಲವು ಪ್ರಸಂಗಗಳು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಬೆಳಕಿಗೆ ಬಂದಿದ್ದು, ಇನ್ನೂ ಕೂಡ ಬಹಿರಂಗವಾಗುತ್ತಲೇ ಇರುತ್ತದೆ. ಸದ್ಯದ ಇದೇ ರೀತಿಯ ವಂಚನಾ ಜಾಲವೊಂದನ್ನು ಅಧಿಕಾರಿಗಳು ಪತ್ತೆಮಾಡಿ, ಭಾರೀ ದೊಡ್ಡ ಹಗರಣವನ್ನೇ ಬಯಲು ಮಾಡಿದ್ದಾರೆ.
ಸುಮಾರು 25,000 ಕೋಟಿ ತೆರಿಗೆ ವಂಚನೆಯಲ್ಲಿ ತೊಡಗಿ, ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 18,000 ನಕಲಿ ಕಂಪನಿಗಳನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕಲಿ ಕಂಪನಿಗಳ ವಿರುದ್ಧ ಇತ್ತೀಚೆಗೆ ದೇಶಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಜಿಎಸ್‌ಟಿ ಅಧಿಕಾರಿಗಳು ಶಂಕಿತ 73,000 ಕಂಪನಿಗಳನ್ನು ಗುರುತಿಸಿದ್ದಾರೆ.
ನಕಲಿ ನೋದಣಿಗಳ ವಿರುದ್ದ ಸಮರ
ಅಧಿಕಾರಿಗಳು ಎಷ್ಟೇ ಜಾಗರೂಕರಾಗಿದ್ದರೂ ವಂಚಕರು ಮೋಸದ ಜಾಲವನ್ನು ಹರಡುತ್ತಲೇ ಇರುತ್ತಾರೆ ಎಂಬುದನ್ನು ಇದೊಂದು ಉತ್ತಮ ಉದಾಹರಣೆ. ಕಳೆದ ಹಲವು ವರ್ಷಗಳಿಂದ ಜಿಎಸ್‌ಟಿಯಲ್ಲಿ ತೆರಿಗೆ ವಂಚಿಸುವವರ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದರೂ ವಂಚನೆ ಪ್ರಕರಣಕ್ಕೆ ಅಂಕಿತ ಬಿದ್ದಿಲ್ಲ. ಬದಲಾಗಿ ನಕಲಿ ಕಂಪೆನಿಗಳ ಹೆಸರು ಬಳಸಿ, ತೆರಿಗೆ ವಂಚನೆ ನಡೆಯುತ್ತಲೇ ಇರುತ್ತದೆ.
ಇನ್ನು ನಕಲಿ ನೋಂದಣಿಗಳ ವಿರುದ್ಧದ ಎರಡನೇ ಭಾರೀ ದೇಶಾದ್ಯಂತವಾಗಿ ನಡೆದ ಕಾರ್ಯಾಚರಣೆ, ಪರಿಶೀಲನೆಗಾಗಿ ನಾವು ಸುಮಾರು 73,000 GSTIN ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸುಮಾರು 18,000 ಅಸ್ತಿತ್ವದಲ್ಲಿ ಇಲ್ಲದ ನೋಂದಣಿಳಾಗಿದೆ ಎಂದು ಕಂಡುಬಂದಿದೆ. ಈ ಮೂಲಕ ವಂಚಕರು ಸುಮಾರು 24,550 ಕೋಟಿ ರೂಪಾಯಿ ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದುವರೆದ ಕಾರ್ಯಾಚರಣೆ
ನಕಲಿ ಜಿಎಸ್‌ಟಿ ನೋಂದಣಿಯನ್ನು ಪರಿಶೀಲಿಸಲು ಸರ್ಕಾರ ಉದ್ದೇಶಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ವಂಚಕರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನೇ ತೆಗೆದುಕೊಳ್ಳಲಾಗುತ್ತಿದೆ. ಅದೂ ಅಲ್ಲದೆ ಹೆಚ್ಚಿನ ಭೌತಿಕ ಪರಿಶೀಲನೆ ನಡೆಯುತ್ತಿದೆ. ನಕಲಿ ನೋಂದಣಿ ವಿರುದ್ಧ ಎರಡನೇ ದೇಶಾದ್ಯಮತ ನಡೆದ ಕಾರ್ಯಾಚರಣೆಯು ಆಗಸ್ಟ್ 16 ರಂದು ಪ್ರಾರಂಭವಾಗಿ ಅಕ್ಟೋಬರ್ ಅಂತ್ಯದವರೆಗೆ ಮುಂದುವರೆದಿತ್ತು.
ಇನ್ನು ಮೇ 16ರ 2023 ರಂದು ಮತ್ತು ಜುಲೈ 15, 2023 ರ ನಡುವಿನ ನಕಲಿ ನೋಂದಣಿ ವಿರುದ್ಧದ ಮೊದಲ ಕಾರ್ಯಾಚರಣೆಯಲ್ಲಿ GST ನೋಂದಣಿ ಹೊಂದಿರುವ ಒಟ್ಟು 21,791 ಘಟಕಗಳು ಅಸ್ತಿತ್ವದಲ್ಲಿಲ್ಲ ಎಂದು ಕಂಡುಹಿಡಿಯಲಾಯಿತು. ಈ ಮೂಲಕ ಮೊದಲ ಹಂತದಲ್ಲೇ 24,010 ಕೋಟಿ ರೂಪಾಯಿ ಶಂಕಿತ ತೆರಿಗೆ ವಂಚನೆಯಾಗಿರುವುದು ಪತ್ತೆಯಾಗಿದೆ.
ವಂಚನೆ ಹೇಗೆ ನಡೆಯುತ್ತದೆ?
ಐಟಿಸಿ ವ್ಯವಸ್ಥೆಯು ವ್ಯಾಪಾರಗಳು ತಮ್ಮ ಖರೀದಿಗಳಿಗೆ ಪಾವತಿಸಿದ GST ಮೇಲೆ ಕ್ರೆಡಿಟ್ ಕ್ಲೈಮ್ ಮಾಡುವ ಮೂಲಕ ತಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಈ ನಕಲಿ ಕಂಪನಿಗಳು ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುವ ಮೂಲಕ ಮತ್ತು ಖರೀದಿಗಳನ್ನು ಮಾಡುವುದರ ಮೂಲಕ ಈ ವ್ಯವಸ್ಥೆಯನ್ನು ಬಳಸಿಕೊಂಡಿವೆ.
ಈ ರೀತಿಯಾಗಿ, ಸಾರ್ವಜನಿಕ ಸೇವೆಗಳು ಮತ್ತು ಸರ್ಕಾರಿ ಯೋಜನೆಗಳಿಗೆ ಹೋಗಬೇಕಾದ ಹಣವನ್ನು ತೆಗೆದುಕೊಳ್ಳುವ ಅಂದರೆ ಎಂದಿಗೂ ನಡೆಯದ ವಹಿವಾಟುಗಳ ಮೇಲೆ ತೆರಿಗೆ ಮರುಪಾವತಿಯನ್ನು ಕಂಪೆನಿಗಳು ಕ್ಲೈಮ್ ಮಾಡಿ, ಪಡೆದು ವಂಚನೆ ನಡೆಸುತ್ತಾರೆ. ಇನ್ನು ಭವಿಷ್ಯದಲ್ಲಿ ಇಂತಹ ವಂಚನೆಯನ್ನು ತಡೆಗಟ್ಟಲು, ನಕಲಿ ವ್ಯವಹಾರಗಳಿಗೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಕಷ್ಟವಾಗುವಂತೆ GST ನೋಂದಣಿಗಳ ಮೇಲೆ ಭೌತಿಕ ತಪಾಸಣೆಗಳನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಈ ಹೊಸ ವಿಧಾನವು ನಿಜವಾದ ವ್ಯವಹಾರಗಳು ಮಾತ್ರ ITC ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
More From GoodReturns

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications