GST: ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮೇಲಿನ ಜಿಎಸ್‌ಟಿ ವಿವಾದಕ್ಕೆ ಸರ್ಕಾರ ಸ್ಪಷ್ಟನೆ!

ಹಳೆಯ ಹಾಗು ಬಳಸಿದ ವಾಹನಗಳ ಮಾರಾಟ ಮೇಲೆ ಸಚಿವಾಲಯ ಜಿಎಸ್ ಟಿ ವಿಧಿಸಿದಕ್ಕೆ ಸಾಮಾಜಿಕ ಮಧ್ಯಮದಲ್ಲಿ ಸಾಕಷ್ಟು ಚರ್ಚೆಗಾಳಾಗಿದ್ದವು. ಅಲ್ಲದೆ ಈ ಹಿನ್ನೆಲೆ ಸರ್ಕಾರ ಟೀಕೆಗ ಕೂಡ ಗುರಿಯಾಗಿತ್ತು. ಇನ್ನು ಈ ಎಲ್ಲಾ ಗೊಂದಲಗಳಿಗೆ ಸರ್ಕಾರ ಸ್ಪಷ್ಟನೆ ನೀಡಿದೆ.

ಡಿಸೆಂಬರ್‌ 21, 2024ರಂದು ಸೆಕೆಂಡ್‌ಹ್ಯಾಂಡ್‌ ವಾಹನಗಳ ಮಾರಾಟದ ಮೇಲೆ ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ ಹಲವು ಚರ್ಚೆಗಳನ್ನ ಮಾಡಿತ್ತು. ಆದ್ರೆ ಜಿಎಸ್‌ಟಿ ಕೌನ್ಸಿಲ್‌ ಈ ನಿರ್ಧಾರದಿಂದಾಗಿ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಈ ಹಳೆಯ ವಾಹನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನ ಒಳಗೊಂಡಂತೆ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿತ್ತು. ಆದರೆ ಭಾರೀ ಟೀಕೆಗಳ ನಡುವೆ ಸರ್ಕಾರ ಮೂರು ದಿನದ ನಂತರ ಸ್ಪಷ್ಟನೆಯನ್ನ ನೀಡಿದೆ. ಹಳೆಯ ವಾಹನಗಳ ಮಾರಾಟದ ಮೇಲೆ ಜಿಎಸ್‌ಟಿ ವಿಧಿಸುವ ಗೊಂದಲಕ್ಕೆ ಸರ್ಕಾರ ಬ್ರೇಕ್‌ ಹಾಕಿದೆ. ಹಳೆಯ ವಾಹನಗಳ ಮಾರಾಟದ ಮಾರ್ಜಿನ್ ಋಣಾತ್ಮಕವಾಗಿದ್ದರೆ ಹಾಗೆ ಯಾವುದೇ ಲಾಭವನ್ನು ಹೊಂದದಿದ್ದರೆ, ಅದರ ಮೇಲೆ ಜಿಎಸ್‌ಟಿ ಇರುವದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಹಳೆಯ ವಾಹನಗಳ ಮೇಲಿನ ಜಿಎಸ್‌ಟಿ ವಿವಾದಕ್ಕೆ ಸರ್ಕಾರ ಸ್ಪಷ್ಟನೆ!

ಎಲೆಕ್ಟ್ರಿಕ್‌ ವಾಹನಗಳು ಸೇರಿದಂತೆ ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮಾರಾಟದ ಮೇಲೆ GST ಕುರಿತು ಸರ್ಕಾರವು FAQಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ಜನರ ಮನಸ್ಸಿನಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉದಾಹರಣೆ ಮೂಲಕ ಉತ್ತರಿಸುವ ಪ್ರಯತ್ನವನ್ನ ಮಾಡಿದೆ. ಇದರಿಂದ ಜನರ ಕಡಿಮೆಯಾಗಬಹುದು ಹಾಗೆ ಅವರ ಎಲ್ಲಾ ಸಮಸ್ಯೆಗೆ ಬಗ್ಗೆ ಉತ್ತರ ಕೂ ಸಿಗುತ್ತದೆ..

ಇವಿಗಳನ್ನು ಹೊರತುಪಡಿಸಿ ಹಳೆಯ ವಾಹನಗಳ ಮಾರಾಟದ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಯಾವ ಸಲಹೆ ನೀಡಲಾಗಿದೆ

ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಈ ವಿಷಯವನ್ನು ಇನ್ನಷ್ಟು ಸರಳ ಮಡಲು, GST ಕೌನ್ಸಿಲ್ ಎಲೆಕ್ಟ್ರಿಕ್‌ ವಾಹನಗಳು ಸೇರಿದಂತೆ ಎಲ್ಲಾ ಹಳೆಯ ಮತ್ತು ಬಳಸಿದ ವಾಹನಗಳ ಮೇಲೆ ಶೇಕಡಾ 18ರಷ್ಟು GST ಅನ್ನು ವಿಧಿಸಲು ನಿರ್ಧಾರ ಮಡಿದೆ. ಈ ಹಿಂದೆ ಎೆಕ್ಟ್ರಿಕ್‌ ವಾಹನಗಳು ಹಾಗು ಇತರೆ ವಾಹನಗಳಿಗೆ ಬೇರೆ ಬೇರೆ ದರಗಳನ್ನು ವಿಧಿಸುತ್ತಿತ್ತು. ಆದ್ರೆ ಈ ಭಾರಿ ಜಿಎಸ್‌ಟಿ ಕೌನ್ಸಿಲ್ ಯಾವುದೇ ಹೊಸ ತೆರಿಗೆ ವಿಧಿಸಲು ಶಿಫಾರಸು ಮಾಡಿಲ್ಲ.

ಹಳೆಯ ಮತ್ತು ಬಳಸಿದ ವಾಹನಗಳ ಮಾರಾಟಕ್ಕೆ ಸಂಬಂಧಿಸಿದ ವ್ಯವಹಾರವನ್ನು ಮಾಡುವ ನೋಂದಾಯಿತ ವ್ಯಕ್ತಿಗಳು ಮಾತ್ರ GST ಪಾವತಿ ಮಾಡಬೇಕು. ಹಾಗೆ ಒಬ್ಬ ವ್ಯಕ್ತಿಯು ಹಳೆಯ ಮತ್ತು ಬಳಸಿದ ಕಾರನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದರೆ, ಅಂತಹ ಸಂದರ್ಭದಲ್ಲಿ ಜಿಎಸ್‌ಟಿ ಅನ್ವಯವಾಗುವುದಿಲ್ಲ.

ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮಾರಾಟ ಮೌಲ್ಯದ ಮೇಲೆ GST ಇರಲಿದೆಯಾ

GSTಯಲ್ಲಿ ನೋಂದಾಯಿಸಲಾದ ವ್ಯಕ್ತಿಯು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 32 ರ ಅಡಿಯಲ್ಲಿ ಇದನ್ನ ಕ್ಲೈಮ್ ಮಾಡಿದ್ದಾರೆ. GST ಯನ್ನು ಪೂರೈಕೆದಾರರ ಮಾರ್ಜಿನ್ ಮೌಲ್ಯದ ಆದಾರದ ಮೇಲೆ ಪಾವತಿ ಮಾಡಬೇಕಾಗುತ್ತದೆ. ಅಂದರೆ ಪ್ರಯಾಣಿಕ ವಾಹನಗಳ ಮಾರಾಟ ಮೌಲ್ಯ ಮತ್ತು ಸವಕಳಿ ಮೌಲ್ಯದ ನಡುವಿನ ವ್ಯತ್ಯಾಸದ ಮೇಲೆ GST ಪಾವತಿ ಮಾಡಬೇಕಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ಮಾರ್ಜಿನ್ ಋಣಾತ್ಮಕವಾಗಿದ್ದರೆ ಆಗ ಯಾವುದೇ GST ಇರವುದಲ್ಲ.

ಈ ವಿಚಾರದಲ್ಲಿ ಸ್ಪಷ್ಟನೆ ನೀಡಲು ಸರ್ಕಾರ ಉದಾಹರಣೆಗಳ ಮೂಲಕ ಜನರಿಗೆ ಸಪಷ್ಟನೆಯನ್ನ ನೀಡಿದೆ. ಅಂದರೆ ಈಗ ಒಬ್ಬ ನೋಂದಾಯಿತ ವ್ಯಕ್ತಿಯು ಹಳೆಯ ಮತ್ತು ಬಳಸಿದ ಕಾರನ್ನು 10 ಲಕ್ಷಕ್ಕೆ ಇನ್ನೊಬ್ಬರಿಗೆ ಮಾರಾಟ ಮಾಡಲು ಹೊರಟಾಗ, ಅದರ ಖರೀದಿ ಮೌಲ್ಯ 8 ಲಕ್ಷ ರೂ ಇದ್ದರೆ ಆಗ ಅವರು ಪೂರೈಕೆದಾರರ ಅಂಚಿನಲ್ಲಿ ಯಾವುದೇ GST ಪಾವತಿಸಬೇಕಾಗಿಲ್ಲ. ಅಂದರೆ ಮಾರಾಟದ ಬೆಲೆಯ ವ್ಯತ್ಯಾಸದ ಮೌಲ್ಯವು ರೂ 10 ಲಕ್ಷ ಮತ್ತು ಸವಕಳಿ ಮೌಲ್ಯವು ಋಣಾತ್ಮಕವಾಗಿರುತ್ತದೆ.

ಆದ್ರೆ ಕರಿನ ಮೂಲ ಬೆಲೆ 12 ಲಕ್ಷ ರೂ ಆಗಿದ್ದರೆ ಮತ್ತು ಕಾರಿನ ಮಾರಾಟದ ಬೆಲೆ 15 ಲಕ್ಷ ರೂ ಆಗಿದ್ದರೆ, ಅಂತಹ ಸಂದರ್ಭದಲ್ಲಿ ಪೂರೈಕೆದಾರರು 3 ಲಕ್ಷ ರೂಪಾಯಿಗಳ ಮಾರ್ಜಿನ್‌ನಲ್ಲಿ ಶೇಕಡಾ 18 ರಷ್ಟು ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ.

ಅಲ್ಲದೆ ಒಬ್ಬ ನೋಂದಾಯಿತ ವ್ಯಕ್ತಿಯ ಖರೀದಿ ಬೆಲೆ 12 ಲಕ್ಷ ರೂ. ಇದ್ದು. ಅದೇ ನೋಂದಾಯಿತ ವ್ಯಕ್ತಿಯು ಹಳೆಯ ಮತ್ತು ಬಳಸಿದ ವಾಹನವನ್ನು ಇನ್ನೊಬ್ಬ ವ್ಯಕ್ತಿಗೆ 10 ಲಕ್ಷ ರೂ.ಗೆ ಮಾರಾಟ ಮಾಡಿದರೆ, ಅಂತಹ ಸಂದರ್ಭದಲ್ಲಿ ಪೂರೈಕೆದಾರರು ಯಾವುದೇ GST ಪಾವತಿಸಬೇಕಾಗಿಲ್ಲ ಏಕೆಂದರೆ ಪೂರೈಕೆದಾರರ ಅಂಚು ಋಣಾತ್ಮಕವಾಗಿರುತ್ತದೆ. ಆದರೆ ಖರೀದಿ ಬೆಲೆ 20 ಲಕ್ಷ ಮತ್ತು ಮಾರಾಟದ ಬೆಲೆ 22 ಲಕ್ಷ ಆಗಿದ್ದರೆ, ಪೂರೈಕೆದಾರರ ಮಾರ್ಜಿನ್ 2 ಲಕ್ಷಕ್ಕೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+