ಇಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯ ಆಚರಣೆ ಇದೆ. ಇದೊಂದು ಪವಿತ್ರ ಹಬ್ಬಗಳಂತೆ ಆಚರಣೆ ಮಾಡಲಾಗುವ ಪರಂಪರೆ ಭಾರತದಲ್ಲಿದೆ. ಆಧ್ಯಾತ್ಮಿಕ ಮತ್ತು ಶೈಕ್ಷಣಿಕೆ ಮಾರ್ಗದರ್ಶಕರಿಗೆ ಗೌರವ ಸಲ್ಲಿಸುವ ಸಲುವಾಗಿ, ಈ ವಿಶೇಷ ದಿನವನ್ನು ಆಚರಿಸುತ್ತಾರೆ. ಒಂದು ಸಾಂಪ್ರದಾಯಿಕ ಹಬ್ಬಗಳಂತೆ ಆಚರಿಸುವ ಗುರು ಪೂರ್ಣಿಮೆಯ ದಿನ, ಬ್ಯಾಂಕ್‌ಗಳಿಗೆ ರಜೆ ಇದೆಯೋ ಇಲ್ಲವೋ ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ನೀವು ಬ್ಯಾಂಕ್‌ಗೆ ಹೋಗುವ ಮುನ್ನ, ಈ ಲೇಖನ ಓದಿರಿ.

ಬ್ಯಾಂಕ್ ರಜಾದಿನಗಳ ನಿಯಮಾವಳಿ:
ಭಾರತದಲ್ಲಿ ಬ್ಯಾಂಕ್ ರಜಾದಿನಗಳ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಪ್ರತ್ಯೇಕ ರಾಜ್ಯ ಸರ್ಕಾರಗಳು ಹಲವು ಅಂಶಗಳ ಆಧಾರದಲ್ಲಿ ತಯಾರಿಸುತ್ತವೆ. ಧಾರ್ಮಿಕ ಹಬ್ಬಗಳು, ಸ್ಥಳೀಯ ಉತ್ಸವಗಳು, ಸಾಂಸ್ಕೃತಿಕ ಸಂದರ್ಭಗಳು ಮತ್ತು ಆಡಳಿತಾತ್ಮಕ ಅಗತ್ಯತೆಗಳೆಲ್ಲಾ ಇದರ ಅಡಿಯಲ್ಲಿ ಬರುವವು. ಜುಲೈ ತಿಂಗಳಲ್ಲಿ ಮಾತ್ರ ಒಟ್ಟು ಏಳು ಅಧಿಕೃತ ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ನಿಗದಿಯಾಗಿವೆ.
ಇದರಿಂದ ಹೊರತುಪಟ್ಟು, ದೇಶದಾದ್ಯಂತದ ಎಲ್ಲ ಬ್ಯಾಂಕುಗಳಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಪ್ರತಿಯೊಂದು ಭಾನುವಾರ ರಜಾದಿನಗಳಾಗಿ ನಿಗದಿಯಾಗಿವೆ. ಈ ನಿಯಮವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಆದರೆ ಗುರುಪೂರ್ಣಿಮೆಯಾದ ಇಂದು, ಬ್ಯಾಂಕ್ ರಜೆ ಪಟ್ಟಿಯಲ್ಲಿ ಇಲ್ಲ. ಹಾಗಾದ್ರೆ ಮುಂದಿನ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ ಎಂದು ಇಲ್ಲಿ ತಿಳಿಯಿರಿ.
2025ರ ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿ:
ಜುಲೈ 3 (ಗುರುವಾರ) - ಖರ್ಚಿ ಪೂಜೆ (ತ್ರಿಪುರಾ)
ಜುಲೈ 5 (ಶನಿವಾರ) - ಗುರು ಹರಗೋವಿಂದರ ಜಯಂತಿ (ಜಮ್ಮು ಮತ್ತು ಕಾಶ್ಮೀರ್)
ಜುಲೈ 6 (ಭಾನುವಾರ) - ಸಾಮಾನ್ಯ ಭಾನುವಾರದ ರಜೆ
ಜುಲೈ 12 (ಶನಿವಾರ) - ಎರಡನೇ ಶನಿವಾರ
ಜುಲೈ 13 (ಭಾನುವಾರ) - ಸಾಮಾನ್ಯ ಭಾನುವಾರದ ರಜೆ
ಜುಲೈ 14 (ಸೋಮವಾರ) - ಬೆಹ್ ದೀಂಕ್ಲಾಮ್ ಹಬ್ಬ (ಮೇಘಾಲಯ)
ಜುಲೈ 16 (ಬುಧವಾರ) - ಹರೇಲಾ ಹಬ್ಬ (ಉತ್ತರಾಖಂಡ, ಹಿಮಾಚಲ ಪ್ರದೇಶ)
ಜುಲೈ 17 (ಗುರುವಾರ) - ಯು ತಿರೋತ್ ಸಿಂಗ್ ಪುಣ್ಯತಿಥಿ (ಮೇಘಾಲಯ)
ಜುಲೈ 19 (ಶನಿವಾರ) - ಕೇರ್ ಪೂಜೆ (ತ್ರಿಪುರಾ)
ಜುಲೈ 26 (ಶನಿವಾರ) - ನಾಲ್ಕನೇ ಶನಿವಾರ
ಜುಲೈ 27 (ಭಾನುವಾರ) - ಸಾಮಾನ್ಯ ಭಾನುವಾರದ ರಜೆ
ಜುಲೈ 28 (ಸೋಮವಾರ) - ಡ್ರುಕ್ಪಾ ತ್ಶೆ-ಜಿ ಹಬ್ಬ (ಸಿಕ್ಕಿಂ)
ಇವುಗಳಲ್ಲಿ ಕೆಲವು ಮಾತ್ರ ಪ್ರದೇಶಿಕ (ರಾಜ್ಯವಾರು) ರಜಾದಿನಗಳಾಗಿದ್ದು, ಇತರ ರಾಜ್ಯಗಳಲ್ಲಿನ ಬ್ಯಾಂಕುಗಳು ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ತೊಡಗಿರುತ್ತವೆ.
ಇದೊಂದು ಶಿಕ್ಷಕರ ದಿನವೂ ಹೌದು. ಇದನ್ನು ವಿದ್ಯಾ, ಶ್ರದ್ಧಾ ಮತ್ತು ಸಂಸ್ಕೃತಿಯ ನಿಜವಾದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಮಕ್ಕಳಿಗೆ ಕೇವಲ ಪಾಠವಷ್ಟೇ ಅಲ್ಲದೆ ಮೌಲ್ಯಗಳನ್ನು ಕಲಿಸುವ ಶಿಕ್ಷಕರಿಗೆ, ಈ ದಿನದಂದು ಕೃತಜ್ಞತೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಅನನ್ಯ ಅಂಶವಾಗಿದೆ. ಇದನ್ನು ಆಧ್ಯಾತ್ಮಿಕ ಗುರುಗಳಿಗೆ, ಜೀವನ ಮಾರ್ಗದರ್ಶಕರಿಗೂ ಸಮರ್ಪಿಸುವ ದಿನವೆಂದು ನೋಡಬಹುದು.
ಹಬ್ಬದ ಸಂಭ್ರಮ ಮತ್ತು ಆಧ್ಯಾತ್ಮಿಕ ಭಾವನೆಗಳ ನಡುವೆಯೂ, ಬ್ಯಾಂಕುಗಳ ಕಾರ್ಯಾಚರಣೆ ಕುರಿತು ಸ್ಪಷ್ಟ ಮಾಹಿತಿ ಇರಬೇಕಾದ ಅಗತ್ಯವಿದೆ. ಈ ವರ್ಷದ ಗುರು ಪೂರ್ಣಿಮೆ ದಿನಾಂಕಕ್ಕೆ ಯಾವುದೇ ರಾಷ್ಟ್ರೀಯ ಅಥವಾ ಬ್ಯಾಂಕ್ ರಜಾದಿನ ಘೋಷಿತವಾಗಿಲ್ಲವಾದ್ದರಿಂದ, ದೇಶದಾದ್ಯಂತದ ಬಹುತೆಕ ಬ್ಯಾಂಕುಗಳು ಸಾಮಾನ್ಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆ.


Click it and Unblock the Notifications