ಬೆಂಗಳೂರು, ಏಪ್ರಿಲ್ 15: ಭಾರತವು ರಕ್ಷಣಾ ಸಾಮಾಗ್ರಿಗಳ ರಫ್ತು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿದೆ. ಈ ಮೂಲಕ ಅಮೆರಿಕ & ಯುರೋಪ್ ದೇಶಗಳಿಗೆ ಚಾಲೆಂಜ್ ಹಾಕುವ ರೀತಿ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡುತ್ತಿದೆ. ಈ ಪೈಕಿ ಭಾರತದ ಈ ಸಾಧನೆಯಲ್ಲಿ, ನಮ್ಮ ಎಚ್‌ಎಎಲ್ (HAL) ಪಾತ್ರ ತುಂಬಾ ದೊಡ್ಡದಾಗಿದೆ. ಇದೀಗ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಬರೋಬ್ಬರಿ 67 ಸಾವಿರ ಕೋಟಿ ರೂಪಾಯಿ ಟೆಂಡರ್ ಸಿಕ್ಕಿದೆ.
ಭಾರತದ ಸೇನೆ ಸೇರಿದಂತೆ ಭಾರತದ ಮಿತ್ರ ದೇಶಗಳ ಸೇನೆಗಳಿಗೆ ಕೂಡ ರಕ್ಷಣಾ ಸಾಮಾಗ್ರಿ ಸರಬರಾಜು ಮಾಡುತ್ತಿದೆ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್). ಹೀಗೆ, ಪ್ರತಿ ವರ್ಷ ಕೋಟಿ ಕೋಟಿ ಲಾಭ ಗಳಿಸುತ್ತಿದೆ. ಹಾಗೇ ಇದೀಗ ಭಾರತೀಯ ಸೇನೆಗೆ ಕೂಡ ಭಾರಿ ದೊಡ್ಡ ಮೊತ್ತದ ರಕ್ಷಣಾ ಸಾಮಾಗ್ರಿ ಸರಬರಾಜು ಮಾಡಲು ಆರ್ಡರ್ ಪಡೆಯಲಾಗಿದೆ. ಹಾಗಾದರೆ ಈಗ ಸಿಕ್ಕಿರುವ ಆರ್ಡರ್ ಆದರೂ ಏನು? ಇದರಿಂದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ ಹೇಗೆ ಸಹಾಯ ಆಗಲಿದೆ?

ಭಾರತೀಯ ವಾಯುಪಡೆಗೆ ತೇಜಸ್ ಎಂಕೆ-1ಎ ಸರಣಿಯ ಲಘು ಯುದ್ಧ ವಿಮಾನ ಪೂರೈಸಲು ದೊಡ್ಡ ಆರ್ಡರ್ ಪಡೆದಿದೆ ಎಚ್‌ಎಎಲ್. ಇದೀಗ ತೇಜಸ್ ಎಂಕೆ-1ಎ ಸರಣಿಯ ಒಟ್ಟಾರೆ 97 ಲಘು ಯುದ್ಧ ವಿಮಾನ ಪೂರೈಸುವುದಕ್ಕೆ ಈಗ ಆರ್ಡರ್ ಸಿಕ್ಕಿದೆ. ಈ ಕುರಿತಾಗಿ ಈಗ ಸರ್ಕಾರಿ ಸ್ವಾಮ್ಯದ, ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ ಕೇಂದ್ರ ರಕ್ಷಣಾ ಸಚಿವಾಲಯ ಟೆಂಡರ್ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಒಟ್ಟು ₹67 ಸಾವಿರ ಕೋಟಿ ರೂಪಾಯಿ ಆದಾಯ ಎಚ್‌ಎಎಲ್ ಪಾಲಾಗಲಿದೆ. ಮತ್ತೊಂದು ಕಡೆ ಈ ಆರ್ಡರ್ ಮೂಲಕ ಭಾರತೀಯ ವಾಯು ಪಡೆ ಕೂಡ ಮತ್ತಷ್ಟು ಬಲವಾಗಲಿದೆ.
ಶಕ್ತಿಶಾಲಿ ಲಘು ಯುದ್ಧ ವಿಮಾನ
ತೇಜಸ್ ಎಂಕೆ-1ಎ ಸರಣಿಯ ಲಘು ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯದ ಮೂಲಕವೇ ಗಮನ ಸೆಳೆದಿವೆ. ಶತ್ರುಗಳ ಮೇಲೆ ಆಕ್ರಮಣಕಾರಿ ವಾಯು ದಾಳಿ ನಡೆಸಲು, ಸ್ವದೇಶಿ ನಿರ್ಮಿತ ತೇಜಸ್ ವಿಮಾನ ಮುಂಚೂಣಿ ಅಸ್ತ್ರವಾಗಿ ಬಳಕೆ ಆಗುತ್ತಿದ್ದು. ಭಾರತೀಯ ವಾಯುಪಡೆಯ ಕಾರ್ಯಾಚರಣೆಗೆ ಇದರಿಂದ ಸಾಕಷ್ಟು ಸಹಾಯ ಆಗಲಿದೆ. ಶತ್ರು ಪಾಳೆಯದ ಆಯಕಟ್ಟಿನ ನೆಲೆಗಳನ್ನು ಪತ್ತೆ ಮಾಡಲು ಕೂಡ ಇದು ಸಹಾಯ ಮಾಡಲಿದೆ. ಇದರ ಜೊತೆ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ಕೂಡ ವಿಮಾನಗಳು ಸಹಾಯಕವಾಗಿವೆ.
ಇದೀಗ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಪಡೆದಿರುವ ಟೆಂಡರ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ 2023ರ ನವೆಂಬರ್ ತಿಂಗಳಲ್ಲಿಯೇ ಒಪ್ಪಿಗೆಯನ್ನು ನೀಡಿತ್ತು ರಕ್ಷಣಾ ಖರೀದಿ ಪರಿಷತ್ತು. ಈ ಮೂಲಕ, ಭಾರತೀಯ ವಾಯುಪಡೆಗೆ ತೇಜಸ್ ಲಘು ಯುದ್ಧ ವಿಮಾನ ಪೂರೈಕೆ ಸಾಧ್ಯವಾಗಲಿದೆ. ಇದರ ಜೊತೆಯಲ್ಲಿ ಸುಖೋಯ್-30 ಯುದ್ಧ ವಿಮಾನ ಮೇಲ್ದರ್ಜೆಗೆ ಏರಿಸಲು ಎಚ್‌ಎಎಲ್‌ಗೆ ಅನುಮೋದನೆ ನೀಡಲಾಗಿದೆ. ಇದು ಮುಂದೆ ಭಾರತದ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಿದೆ.


Click it and Unblock the Notifications