ಓದಲೆಂದು ಲಂಡನ್ ಹೋಗಿ ಹಿಂದಿರುಗಿದ್ದು ವಿನೂತನ ಉದ್ಯಮದ ಕಲ್ಪನೆಯೊಂದಿಗೆ!

ನವದೆಹಲಿ, ಜುಲೈ 22: ಇಂದಿನ ಯುವ ಜನತೆ ಯಶಸ್ಸಿನ ಉತ್ತುಂಗಕ್ಕೆ ಏರಲು ಎಲ್ಲಾ ಸದಾವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ಹಠದೊಂದಿಗೆ ತಾವು ಹಾಕಿಕೊಂಡಿದ್ದ ಯೋಜನೆ ಅಥವಾ ಕನಸುಗಳ ಮೇಲೆ ಗಮನ , ಪ್ರಯತ್ನಗಳನ್ನು ಕೇಂದ್ರೀಕರಿಸುವ ಮೂಲಕ ಯಶಸ್ಸಿನೆಡೆಗೆ ತಲುಪಲು ಶತಪ್ರಯತ್ನ ಮಾಡುತ್ತಾರೆ. ಇದೇ ರೀತಿಯಲ್ಲಿ ಸಾಗಿದ ಓರ್ವ ಯುವಕನ ಸಾಧನೆಯ ಸ್ಫೋರಿ ಇಲ್ಲಿದೆ. ಹರ್ಷಿತ್ ಗೋಧಾ ಎಂಬ ಯುವಕ ಓದಲೆಂದು ಲಂಡನ್ ಗೆ ಹೋಗಿ ಭಾರತಕ್ಕೆ ಮರಳಿ ಬಂದಿದ್ದು ಹೊಸ ಉದ್ಯಮದ ಕಲ್ಪನೆಯೊಂದಿಗೆ.

ಹರ್ಷತ್ ಅವರು ಬಿಬಿಎ ಓದುತ್ತಿಲೆಂದು ಲಂಡನ್ ಗೆ ತೆರಳಿದ್ದರು. ಅಲ್ಲಿ ಒಮ್ಮೆ ಆವಕಾಡೊ ಸವಿಯುತ್ತಿರುವಾಗ ಅವರು ಒಂದು ಕುತೂಹಲಕಾರಿ ಸಂಗತಿಯನ್ನು ಗಮನಿಸಿದರು. ಲಂಡನ್ ನಲ್ಲಿ ಬೆಣ್ಣೆಹಣ್ಣುಗಳನ್ನು ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರಿಗೆ ತಿಳಿದು ಬಂತು. ಈ ಆವಕಾಡೊಗಳ ವಿಶಿಷ್ಟತೆ ಮತ್ತು ಅವುಗಳ ಕೃಷಿ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಅವರು ಇಸ್ರೇಲಿ ರೈತರು ಮತ್ತು ಆವಕಾಡೊ ತಜ್ಞರೊಂದಿಗೆ ಚರ್ಚೆ ಮಾಡಲು ಪ್ರಾರಂಭಿಸಿದರು. ಅವುಗಳ ವಿಶೇಷ ಗುಣಮಟ್ಟದ ಕಾರಣದಿಂದ ಲಂಡನ್ ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲು ಮುಖ್ಯ ಕಾರಣ ಎಂಬುವುದು ಅವರ ಗಮನಕ್ಕೆ ಬಂತು.

ಓದಲೆಂದು ಲಂಡನ್ ಹೋದವ ತಂದಿದ್ದೇನು ಗೊತ್ತಾ?

ಮೂಲತಃ ಭೋಪಾಲ್‌ನ ಹರ್ಷಿತ್ ಗೆ ಆಗ ಕೇವಲ 22 ವರ್ಷ. ಬಿಬಿಎ ಓದುತ್ತಿರುವಾಗ ಇಂಟರ್ನ್‌ಶಿಪ್ ತೊರೆದು ಇಸ್ರೇಲಿ ಆವಕಾಡೊ ಕೃಷಿಯ ಬಗ್ಗೆ ಕಲಿಯಲು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದರು. ಕೆಲ ದಿನಗಳ ಅಧ್ಯಯನದ ಬಳಿಕ ಲಂಡನ್‌ಗೆ ಹಿಂತಿರುಗಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಭಾರತಕ್ಕೆ ಹಿಂತಿರುಗಿದರು.

ತಾಯ್ನಾಡಿಗೆ ಮರಳಿದ ಬಳಿಕ ತಮ್ಮ ಕನಸಿನ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ತಮ್ಮೆಲ್ಲಾ ಪರಿಶ್ರಮ ಹಾಕಲು ಆರಂಭಿಸಿದರು. ಭಾರತದಲ್ಲಿ ಇಸ್ರೇಲಿ ಆವಕಾಡೊಗಳನ್ನು ಬೆಳೆಸುವತ್ತ ಗಮನ ಹರಿಸಿದರು. 2019 ರಲ್ಲಿ ಹರ್ಷಿತ್ ಅವರು ಭೋಪಾಲ್‌ನಲ್ಲಿ ತನ್ನ ಅಗ್ರಿ-ಸ್ಟಾರ್ಟ್ಅಪ್ ಇಂಡೋ ಇಸ್ರೇಲ್ ಆವಕಾಡೊ ಎಂಬ ಸಂಸ್ಥೆ ಹುಟ್ಟುಹಾಕಿ ಕನಸಿನ ಸ್ಟಾರ್ಟ್ಅಪ್ ಆರಂಭಿಸಿದರು. ಇದಕ್ಕಾಗಿ ರೂ.50 ಲಕ್ಷ ಖರ್ಚು ಮಾಡಿ 5 ಎಕರೆ ಜಮೀನು ಖರೀದಿಸಿ ಇದನ್ನು ಹೈಡ್ರೋಪೋನಿಕ್ ವ್ಯವಸ್ಥೆ ಮತ್ತು ಆವಕಾಡೊ ನರ್ಸರಿಯೊಂದಿಗೆ ಪಾಲಿಹೌಸ್ ಆಗಿ ಪರಿವರ್ತಿಸಿದರು. ಇದೇ ವೇಳೆ, ಇಸ್ರೇಲ್‌ನಿಂದ ಅವಕಾಡೋ ಸಸ್ಯಗಳನ್ನು ಆಮದು ಮಾಡಿಕೊಳ್ಳಲು ಕರೋನಾ ಸಾಂಕ್ರಾಮಿಕವು ಅಡಚಣೆಯಾಗಿದೆ.

ಆಮದು ಪರವಾನಗಿ ಪಡೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಸಸ್ಯಗಳು ದೊಡ್ಡದಾಗಿ ಸಾಗಣೆ ವೆಚ್ಚವನ್ನು ಐದರಿಂದ ಆರು ಪಟ್ಟು ಹೆಚ್ಚಿಸಿತು. ಛಲ ಬಿಡದೆ ಆದ್ದರಿಂದ 2021 ರಲ್ಲಿ, ಸಸ್ಯಗಳನ್ನು ಆಮದು ಮಾಡಿಕೊಂಡು ಭೋಪಾಲ್ ವಿಮಾನ ನಿಲ್ದಾಣದ ಬಳಿ ಐದು ಎಕರೆ ಜಾಗದಲ್ಲಿ ತಮ್ಮ 20,000 ಗಿಡಗಳೊಂದಿಗೆ ಆವಕಾಡೊ ತೋಟವನ್ನು ಪ್ರಾರಂಭಿಸಿದರು.

ಕೊವೀಡ್ ಬಂದು ವಿಳಂಬವಾದಾಗ ಇಂಡೋ-ಇಸ್ರೇಲ್ ಆವಕಾಡೊದ ಸಂಸ್ಥಾಪಕತಾಗಿದ್ದ ಹರ್ಷಿತ್ ಪೂರ್ವಭಾವಿಯಾಗಿಯೇ ಇದಕ್ಕೆಲ್ಲಾ ತಯಾರಾಗಿದ್ದಂತೆ ತಮಗಿದ್ದ ಜ್ಞಾನವನ್ನು ತಮ್ಮ ಆವಕಾಡೊ ಕೃಷಿ ಕಲಿಕೆಯ ಪ್ರಯಾಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದಾಖಲಿಸಿತೊಡಗಿದರು. ಆವಕಾಡೊಗಳನ್ನು ಬೆಳೆಸಲು ಪರಿಗಣಿಸಬೇಕಾದ 7 ವಿಷಯಗಳು' ಎಂಬ ಶೀರ್ಷಿಕೆಯ ಇ-ಪುಸ್ತಕವನ್ನು ಬರೆದರು ಮತ್ತು ನಿರ್ದಿಷ್ಟ ಮತ್ತು ಉದ್ದೇಶಿತ ಜ್ಞಾನವನ್ನು ಹಂಚಿಕೊಳ್ಳಲು YouTube ಚಾನಲ್ ಅನ್ನು ಪ್ರಾರಂಭಿಸಿದರು.

ಇದರ ಜೊತೆಗೆ ತಮ್ಮ ಸುತ್ತಮುತ್ತಲಿದ್ದ ರೈತರಿಗೂ ಅವಕಾಡೋ ಬೆಳೆಯಲು ಪ್ರೋತ್ಸಾಹಿಸಿದರು. ಇಂದು ಹರ್ಷಿತ್ ಅವರು ಇಂಡೋ-ಇಸ್ರೇಲ್ ಆವಕಾಡೊ ಮೂಲಕ ಅರುಣಾಚಲ ಪ್ರದೇಶ, ಸಿಕ್ಕಿಂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರಿಗೆ ಸಸ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಕೃಷಿಯನ್ನು 100 ಎಕರೆಗೆ ವಿಸ್ತರಿಸಲು ಅವರು ಯೋಜಿಸಿದ್ದಾರೆ.

ಭೋಪಾಲ್‌ನ ವಕೀಲರ ಕುಟುಂಬದಿಂದ ಬಂದ ಹರ್ಷಿತ್ ಈಗ ಕೇವಲ 28 ವರ್ಷ. ಉದ್ಯಮಿಯಾಗಬೇಕು ಎನ್ನುವುದು ಅವರ ಕನಸಾಗಿತ್ತು. ಪ್ರಸ್ತುತ ತನ್ನ 5 ಎಕರೆ ತೋಟದಿಂದ ವಾರ್ಷಿಕ 50 ಲಕ್ಷ ರೂ. ಕಾಯಿಗಳನ್ನು ಮಾರುತ್ತಿದ್ದು, ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಮೂಲಕ ವಾರ್ಷಿಕ ರೂ.10 ಕೋಟಿ ಗಳಿಸುವ ಗುರಿ ಹೊಂದಿದ್ದಾರೆ. ಇದರೊಂದಿಗೆ ಭವಿಷ್ಯದಲ್ಲಿ ಆವಕಾಡೊ ಸಸ್ಯಗಳ ಜೊತೆಗೆ, ಆವಕಾಡೊ ಹಣ್ಣುಗಳನ್ನು ಚಿಲ್ಲರೆ ಮತ್ತು ಸಗಟು ಆಗಿ ವಿವಿಧ ಫ್ಲಾಟ್ ಫಾರ್ಮ್ ಮೂಲಕ ಭಾರತದಾದ್ಯಂತ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+