ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೋರೇಶನ್ ಕಂಪನಿ ಲಿಮಿಟೆಡ್ (ಎಚ್‌ಒಇಸಿ) ನಲ್ಲಿನ ತನ್ನ ಪಾಲನ್ನು ಕಡಿಮೆ ಮಾಡಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ತಿಳಿಸಿದೆ.
ಎಚ್‌ಒಇಸಿ ಅಥವಾ ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೋರೇಶನ್ ಕಂಪನಿ ಲಿಮಿಟೆಡ್ ತೈಲ ಮತ್ತು ಅನಿಲ ಪರಿಶೋಧನಾ ವಲಯದ ಕಂಪನಿಯಾಗಿದ್ದು, ಭಾರತದಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪರಿಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ತೊಡಗಿದೆ.

ಷೇರುಗಳನ್ನು ಮಾರ್ಚ್ 31, 2022 ರಂದು ಮತ್ತು ಜೂನ್ 23, 2023 ರಂದು ಈಗ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ವಿಲೀನವಾಗಿರುವ ಈ ಹಿಂದೆ ಪ್ರತ್ಯೇಕವಾಗಿದ್ದ ಎಚ್‌ಡಿಎಫ್‌ಸಿ ಲಿಮಿಟೆಡ್ ಮಾರಾಟ ಮಾಡಲಾಗಿತ್ತು. ಹಾಗೆಯೇ ಸೆಪ್ಟೆಂಬರ್ 1, 2023 ಮತ್ತು ಸೆಪ್ಟೆಂಬರ್ 21, 2023 ರ ನಡುವೆಯೂ ಮಾರಾಟ ಮಾಡಲಾಗಿದೆ.
ಎರಡು ಅವಧಿಯಲ್ಲಿ ಮಾರಾಟವಾದ ಷೇರುಗಳನ್ನು ಒಟ್ಟುಗೂಡಿಸಿದಾಗ, ಸ್ಟಾಕ್ ಸುಮಾರು ಶೇಕಡ 2.22 ರಷ್ಟಾಗಿದೆ. "ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೋರೇಶನ್ ಕಂಪನಿ ಲಿಮಿಟೆಡ್‌ನಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್ ಪ್ರತಿ ಷೇರಿನ ದರ ಹತ್ತು ರೂಪಾಯಿಯಂತೆ 86,83,148 ಈಕ್ವಿಟಿ ಷೇರುಗಳಲ್ಲಿ 239,144 ಷೇರುಗಳನ್ನು ಮಾರ್ಚ್ 31, 2022 ಮತ್ತು ಜೂನ್ 23, 2023ರಂದು ಮಾರಾಟ ಮಾಡಿದೆ. ಜುಲೈ 1, 2023 ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಎಚ್‌ಡಿಎಫ್‌ಸಿ ವಿಲೀನವಾಗಿದೆ. ಈಗ ಬ್ಯಾಂಕ್ 26,98,744 ಷೇರುಗಳನ್ನು ಮಾರಾಟ ಮಾಡಿದೆ. ಇದರಿಂದಾಗಿ ಒಟ್ಟಾಗಿ ಶೇಕಡ 2.22 ರಷ್ಟು ಷೇರನ್ನು ಮಾರಾಟ ಮಾಡಿದಂತಾಗಿದೆ," ಎಂದು ಕಂಪನಿಯ ನಿರ್ದೇಶಕರ ಮಂಡಳಿಯು ಫೈಲಿಂಗ್‌ನಲ್ಲಿ ಹೇಳಿದೆ.
ಶುಕ್ರವಾರ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಷೇರುಗಳು 1,557 ರೂಪಾಯಿಗಳಿಗೆ ವಹಿವಾಟು ಪ್ರಾರಂಭ ಮಾಡಿದೆ. ಪ್ರಸ್ತುತ ಶೇಕಡ 0.98 ರಷ್ಟು ಇಳಿಕೆಯಾಗಿ, 1,538.15 ರೂಪಾಯಿ ಆಗಿದೆ. ಇದರ 52 ವಾರದ ಗರಿಷ್ಠ ಮಟ್ಟವು ತಲಾ 1,757.80 ರೂಪಾಯಿ ಆಗಿದೆ. 52 ವಾರದ ಕನಿಷ್ಠ ಮಟ್ಟವು 1,365.05 ರೂಪಾಯಿ ಆಗಿದೆ.
ಸ್ಟಾಕ್ ಒಂದು ವಾರದಲ್ಲಿ ಶೇಕಡ 6.70ರಷ್ಟು ಮತ್ತು ಒಂದು ತಿಂಗಳ ಅವಧಿಯಲ್ಲಿ ಶೇಕಡ 2 ರಷ್ಟು ಕುಸಿದಿದೆ. ಇನ್ನು ಕ್ರಮವಾಗಿ ಒಂದು ವರ್ಷದಲ್ಲಿ ಶೇಕಡ 12.35 ರಷ್ಟು, 3 ವರ್ಷಗಳಲ್ಲಿ ಶೇಕಡ 49.66 ರಷ್ಟು ಮತ್ತು ಐದು ವರ್ಷಗಳ ಅವಧಿಯಲ್ಲಿ ಶೇಕಡ 57.50 ರಷ್ಟು ಗಳಿಸಿದೆ.


Click it and Unblock the Notifications