ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆ ಈಗ ಸತತ ಮೂರು ದಿನಗಳಿಂದ ಕುಸಿಯುತ್ತಿದೆ. ಗುರುವಾರ ಸುಮಾರು ಶೇಕಡ 2 ರಷ್ಟು ಷೇರು ಮೌಲ್ಯ ಕುಸಿತ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಪ್ರಮುಖವಾಗಿ ಈ ವಾರ ಪೂರ್ಣ ನಷ್ಟದೊಂದಿಗೆಯೇ ಸಾಗಿದೆ. 3 ದಿನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಕಡಿಮೆಯಾಗಿದೆ.
ಎನ್‌ಬಿಎಫ್‌ಸಿ ದೈತ್ಯ ಸಂಸ್ಥೆ ಎಚ್‌ಡಿಎಫ್‌ಸಿಯ ವಿಲೀನವಾದ ಬಳಿಕ ಇತ್ತೀಚೆಗೆ ವಿಶ್ಲೇಷಕರ ಸಭೆಯ ನಂತರ, ಜಾಗತಿಕ ಬ್ರೋಕರೇಜ್ ಸಂಸ್ಥೆ ನೋಮುರಾ ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಅನ್ನು 'buy' (ಖರೀದಿ) ಯಿಂದ 'neutral' (ತಟಸ್ಥ) ಕ್ಕೆ ಇಳಿಸಿದೆ. ಟಾರ್ಗೆಟ್ ಬೆಲೆಯನ್ನು 1,970 ರೂಪಾಯಿಯಿಂದ 1,800 ರೂಪಾಯಿಗೆ ಕಡಿತಗೊಳಿಸಲಾಗಿದೆ. ಇದಾದ ಬಳಿಕ ಸ್ಟಾಕ್ ಕುಸಿತ ಕಾಣುತ್ತಾ ಬಂದಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ನಷ್ಟದೊಂದಿಗೆ ಸಾಗುತ್ತಿದೆ. ಸೆಪ್ಟೆಂಬರ್ 21 ರಂದು, ಬ್ಯಾಂಕಿನ ಷೇರಿನ ಬೆಲೆಯು ಶೇಕಡ 1.7 ರಷ್ಟು ಕಡಿಮೆಯಾಗಿದ್ದು, ದಿನದ ಕನಿಷ್ಠ ಮಟ್ಟ 1,538.05 ರೂಪಾಯಿಗೆ ಇಳಿದಿದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು 11,50,892.22 ಕೋಟಿ ರೂಪಾಯಿಗೆ ಇಳಿದಿದೆ. ಈ ಹಿಂದಿನ ಮಾರುಕಟ್ಟೆ ಮೌಲ್ಯ 11,84,748.93 ಕೋಟಿ ರೂಪಾಯಿಯಿಂದ ಇದು ಸುಮಾರು 33,857 ಕೋಟಿಯಷ್ಟು ಕೆಳಕ್ಕೆ ಇಳಿದಿದೆ. ಆ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರತಿ ಷೇರಿನ ದರವು 1,563.90 ರೂಪಾಯಿ ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸೆಪ್ಟೆಂಬರ್ 18 ರಿಂದ ನಷ್ಟವನ್ನು ಕಾಣುತ್ತಾ ಬಂದಿದೆ. ಮೂರು ದಿನಗಳ ಅವಧಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಶೇಕಡ 7.5 ರಷ್ಟು ನಷ್ಟವನ್ನು ಕಂಡಿದೆ. ಸೆಪ್ಟೆಂಬರ್ 15 ರಂದು, ಬ್ಯಾಂಕಿನ ಷೇರಿನ ಬೆಲೆಯು ಬಿಎಸ್‌ಇಯಲ್ಲಿ 1,661.90 ರೂಪಾಯಿಗಳಾಗಿದ್ದು, ಮಾರುಕಟ್ಟೆ ಮೌಲ್ಯ 1,24,3535.63 ಕೋಟಿ ರೂಪಾಯಿ ಆಗಿದೆ. ಮೂರು ದಿನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 92,643.4 ಕೋಟಿ ರೂಪಾಯಿ ನಷ್ಟಗೊಂಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ 52 ವಾರಗಳ ಗರಿಷ್ಠ ಮತ್ತು ಕನಿಷ್ಠ ಬಿಎಸ್‌ಇಯಲ್ಲಿ ಕ್ರಮವಾಗಿ ತಲಾ 1,757.80 ರೂಪಾಯಿ ಮತ್ತು 1,365.05 ರೂಪಾಯಿ ಆಗಿದೆ. ಮೂರು ದಿನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಶೇಕಡ 20 ರಷ್ಟು, ನಿಫ್ಟಿ 50 ಸುಮಾರು ಶೇಕಡ 50 ರಷ್ಟು ನಷ್ಟವನ್ನು ಕಂಡಿದೆ. ಈ ವಾರದವರೆಗೆ ಸೆನ್ಸೆಕ್ಸ್ 4.62 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತನ್ನು ಕಳೆದುಕೊಂಡಿದೆ.
"ಎಚ್‌ಡಿಎಫ್‌ಸಿ ಬ್ಯಾಂಕ್ ವಿಶ್ಲೇಷಕರ ಸಭೆಯಲ್ಲಿ ವಿಲೀನಗೊಂಡ ಹಣಕಾಸುಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದೆ. ಐಆರ್‌ಎಸಿ, ಕ್ರೆಡಿಟ್ ಪಾಲಿಸಿ ಹಾರ್ಮೊನೈಸೆಷನ್, ಡಿಟಿಎಲ್ ಮೀಸಲು ರಚನೆಯು ಬಿವಿಪಿಎಸ್ ಮೇಲೆ ಶೇಕಡ 5 ರಷ್ಟು ಪರಿಣಾಮ ಬೀರುತ್ತದೆ. ಆದರೂ ಹಣಕಾಸು ವರ್ಷ 2024 ರ ದ್ವಿತೀಯಾರ್ಧದಲ್ಲಿ ಲಾಭ ಕಾಣಬಹುದು," ಎಂದು ಪ್ರಭುದಾಸ್ ಲಿಲ್ಲಾಧರ್ ಸಂಶೋಧನಾ ವಿಶ್ಲೇಷಕ, ಗೌರವ್ ಜಾನಿ ಹೇಳಿದರು.
"ಹಣಕಾಸು ವರ್ಷ 2024 ರ ಎನ್‌ಐಎಂ ವರ್ಷಕ್ಕೆ ಶೇಕಡ 3.8 ರಿಂದ ಶೇಕಡ 3.6 ಕ್ಕೆ ಇಳಿಯಬಹುದು. ಆದರೂ ಎಚ್‌ಡಿಎಫ್‌ಸಿ ಲಿಮಿಟೆಡ್ ಸೇರ್ಪಡೆ ಬಳಿಕ ಎನ್‌ಐಎಂ ಶೇಕಡ 3.6 ರಿಂದ ಶೇಕಡ 3.8 ಕ್ಕೆ ಹಣಕಾಸು ವರ್ಷ 2024- 2026ರಲ್ಲಿ ಏರಿಕೆಯಾಗಬಹುದು. ಎನ್‌ಐಎಂ ಮತ್ತು ಸಾಲದ ಬೆಳವಣಿಗೆಯು ಸಾಮಾನ್ಯವಾದಾಗ ಗಳಿಕೆಯು ಬೆಳೆಯುವುದು. ಟೇಕ್ ಪ್ರಾಫಿಟ್ (ಟಿಪಿ) ಯೊಂದಿಗೆ 2,025 ರೂಪಾಯಿಗೆ ಖರೀದಿಸಿ," ಎಂದು ತಿಳಿಸಿದರು.
ಗಮನಿಸಿ: ಮೇಲಿನ ಶಿಫಾರಸುಗಳನ್ನು ಮಾರುಕಟ್ಟೆ ವಿಶ್ಲೇಷಕರ ಆಧಾರದಲ್ಲಿ ಮಾಡಲಾಗಿದೆ. ಲೇಖಕರು ಅಥವಾ ಗ್ರೇನಿಯಮ್ ಈ ಸ್ಟಾಕ್ ಖರೀದಿಯ ಸಲಹೆಯನ್ನು ನೀಡಿರುವುದಲ್ಲ. ಈ ಬರವಣಿಗೆಯ ಆಧಾರದ ಮೇಲೆ ಸ್ಟಾಕ್ ಮಾರುಕಟ್ಟೆ ಹೂಡಿಕೆಯಿಂದ ಉಂಟಾದ ಯಾವುದೇ ನಷ್ಟಗಳಿಗೆ ಲೇಖಕರು, ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು ಎಂದು ಗುಡ್‌ರಿಟರ್ನ್ಸ್ ಕನ್ನಡ ಸಲಹೆ ನೀಡುತ್ತದೆ.


Click it and Unblock the Notifications