ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಎಚ್ ಎಸ್ ಬಿಸಿ ಬ್ಯಾಂಕ್ 2020ನೇ ಇಸವಿಯ ಟಾಪ್ 10 ಬ್ಯಾಂಕ್ ಗಳಾಗಿ ಹೊರಹೊಮ್ಮಿವೆ. ಇನ್ನು ವರದಿಯ ಪ್ರಕಾರ ಗೂಗಲ್ ಪೇ ಹಾಗೂ ಫೋನ್ ಪೇ ಟಾಪ್ ವ್ಯಾಲೆಟ್ ಗಳು ಎನಿಸಿವೆ.
ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವೀಸಸ್ ಅಂಡ್ ಇನ್ಷೂರೆನ್ಸ್ (BFSI) ಮೂವರ್ಸ್ ಅಂಡ್ ಶೇಕರ್ಸ್ 2020 ವರದಿ ವಿಜಿಕೀಯಿಂದ ಬಂದಿದ್ದು, ಭಾರತದ ಟಾಪ್ 100 ಬ್ಯಾಂಕ್ ಗಳು ಮತ್ತು ಬಿಎಫ್ ಎಸ್ ಐ ಮಾಡೆಲ್ ಗಳಾದ ವ್ಯಾಲೆಟ್ ಗಳು, ಯುಪಿಐ, ನಿಯೋಬ್ಯಾಂಕ್ಸ್, ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನೀಸ್ (ಎನ್ ಬಿಎಫ್ ಸಿ), ಸಣ್ಣ ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್ಸ್ ಬ್ಯಾಂಕ್ ಗಳ ಬಗ್ಗೆ ಪ್ರಸ್ತಾವ ಮಾಡಲಾಗಿದೆ.
ಬ್ಯಾಂಕಿಂಗ್ ಹೊರತುಪಡಿಸಿ ಮತ್ತೊಂದು ಪ್ರಮುಖ ವಲಯ ಅಂದರೆ ಇನ್ಷೂರೆನ್ಸ್. ಕೊರೊನಾ ಕಾರಣಕ್ಕೆ ಈ ವರ್ಷ ಇನ್ಷೂರೆನ್ಸ್ ಬಹಳ ಜನಪ್ರಿಯತೆ ಕಂಡಿತು. "ಎಚ್ ಡಿಎಫ್ ಸಿ, ಐಸಿಐಸಿಐ, ಎಸ್ ಬಿಐ, ಯೆಸ್ ಬ್ಯಾಂಕ್, ಪಿಎನ್ ಬಿ, ಎಚ್ ಎಸ್ ಬಿಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ದಾಯಿಶ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ 2020ರ ಟಾಪ್ 10 ಬ್ಯಾಂಕ್ ಗಳು," ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವರ್ಷ ಯುಪಿಐ ಮತ್ತು ವ್ಯಾಲೆಟ್ ಗಳಲ್ಲೂ ಭರ್ಜರಿ ಏರಿಕೆ ಕಂಡುಬಂದಿದೆ. "ಲಾಕ್ ಡೌನ್ ಸಂದರ್ಭದಲ್ಲಿ ಗೂಗಲ್ ಪೇ ನಂಬರ್ ಒನ್ ಮೂವರ್ ಅಂಡ್ ಶೇಕರ್ ಆಗಿದ್ದು, ಫೋನ್ ಪೇ ಎರಡನೇ ಸ್ಥಾನದಲ್ಲಿದೆ," ಎಂದು ತಿಳಿಸಲಾಗಿದೆ.
ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸುವ ಕಾರಣಕ್ಕೆ ರಾತ್ರೋರಾತ್ರಿ ಮೂರು ಬ್ಯಾಂಕ್ ಗಳು ಬದಲಾವಣೆ ಕಂಡಿವೆ. ಐಸಿಐಸಿಐ, ಎಚ್ ಡಿಎಫ್ ಸಿ ಮತ್ತು ಎಸ್ ಬಿಐ ಸಂಖ್ಯೆ ಹಾಗೂ ಗುಣಮಟ್ಟದಿಂದ ಮುಂದಿವೆ. ಇವುಗಳ ಜತೆಗೆ ಆಕ್ಸಿಸ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಸೇರಿಕೊಂಡಿವೆ.
ವಾಟ್ಸಾಪ್ ಕೂಡ ಪೇಮೆಂಟ್ ಸರ್ವೀಸ್ ಶುರು ಮಾಡಿದ್ದು, ಇತರರಿಗಿಂತ ಹಿಂದಿದೆ. ನಿಯೋ ಬ್ಯಾಂಕ್ಸ್ ಎಂಬ ಮತ್ತೊಂದು ವಿಭಾಗ ಈ ವರ್ಷ ಸುದ್ದಿಯಲ್ಲಿತ್ತು. "ಯೋನೋ ಮೊದಲ ಸ್ಥಾನದಲ್ಲಿದ್ದರೆ, ನಿಯೊ ಎರಡು ಹಾಗೂ ಕೊಟಕ್ 811 ಈ ಕ್ಯಾಟಗರಿಯಲ್ಲಿ ಮೂರನೇ ಸ್ಥಾನದಲ್ಲಿ ಇವೆ," ಎನ್ನಲಾಗಿದೆ.
ಈ ವರ್ಷ ಆತಿ ಮುಖ್ಯ ಪಾತ್ರ ವಹಿಸಿದ್ದು ಎನ್ ಬಿಎಫ್ ಸಿಗಳು. ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಟಾಪ್ ನಲ್ಲಿದ್ದರೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಉತ್ತಮ ಸಾಧನೆ ಮಾಡಿದೆ. ಇನ್ನು ಈ ವರದಿಯನ್ನು ಸಿದ್ಧ ಪಡಿಸಲು ಎಐ ಹಾಗೂ ಎಂಎಲ್ ತಂತ್ರಜ್ಞಾನವನ್ನು ಬಳಸಲಾಗಿದೆ. ಜತೆಗೆ 50 ಲಕ್ಷ ಸುದ್ದಿ ಬರಹಗಳನ್ನು ವಿಶ್ಲೇಷಿಸಲಾಗಿದೆ ಎಂದು ತಿಳಿಸಲಾಗಿದೆ.


Click it and Unblock the Notifications