ಕಾಲ ಅಭಿವೃದ್ಧಿಯತ್ತ ಸಾಗುತ್ತಿದ್ದು ಇದೊಂದು ಬ್ರಾಂಡೆಡ್ ಯುಗವಾಗಿದೆ. ತಿನ್ನೋ ಊಟಕ್ಕೂ ಬ್ರಾಂಡ್, ಹಾಕೋ ಬಟ್ಟೆಗೂ ಬ್ರಾಂಡ್..ಈ ಬ್ರಾಂಡೆಡ್‌ಮಯವಾಗಿರುವ ಜಗತ್ತಿನಲ್ಲಿ ಎಲ್ಲದರ ಬೆಲೆಯೂ ಅಷ್ಟೇ ಬಿಸಿಯಾಗಿದೆ. ಹೀಗಿರುವಾಗ ಎಲ್ಲಾ ವರ್ಗದವರಿಗೂ ಆದಾಯ ತೂಗಿಸಲು ಆಫರ್, ಕ್ಯಾಶ್‌ಬ್ಯಾಕ್‌ಗಳು ಕೂಡ ಸಿಗುತ್ತಿವೆ. ಕ್ಯಾಶ್‌ಬ್ಯಾಕ್ ಬರುತ್ತೆ ಅನ್ನೋದಾದ್ರೆ ಎಲ್ಲದನ್ನೂ ಖರೀದಿಸ್ತಾರೆ ಜನ. ಜನರ ಈ ಕ್ಯಾಶ್‌ಬ್ಯಾಕ್ ಮನಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು, ಹೆಚ್‌ಡಿಎಫ್‌ಸಿ ಬ್ಯಾಂಕ್ ಒಂದು ವಿಶೇಷ ಕೊಡುಗೆ ನೀಡುತ್ತಿದೆ. HDFC ಬ್ಯಾಂಕ್ ಮಿಲೇನಿಯಾ ಕ್ರೆಡಿಟ್ ಕಾರ್ಡ್‌ನಡಿ ಗ್ರಾಹಕರು ಖರೀದಿಸುವ ವಸ್ತುಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಹೌದು, ಹೆಚ್‌ಡಿಎಫ್‌ಸಿ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಒಂದು ಕ್ಯಾಶ್‌ಬ್ಯಾಕ್ ಕಾರ್ಡ್ ಆಗಿದೆ ಅಂತಲೇ ಹೇಳಬಹುದು. ಈ ಕಾರ್ಡ್‌ನಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಅಲ್ಲದೇ ಇದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಹಾಗಾದ್ರೆ ಆ ಪ್ರಯೋಜನಗಳು ಯಾವುವು, ಈ ಕಾರ್ಡ್ ಪಡೆಯಲು ಏನೆಲ್ಲಾ ಮಾನದಂಡಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ..
HDFC ಮಿಲೇನಿಯಾ ಕಾರ್ಡ್ ಪ್ರಯೋಜನ:
1. HDFC ಮಿಲೇನಿಯಾ ಕಾರ್ಡ್ ಆನ್‌ಲೈನ್‌ನಲ್ಲಿ ತಮ್ಮ ಖರೀದಿ ಮೇಲೆ 5% ಕ್ಯಾಶ್‌ಬ್ಯಾಕ್ ನೀಡುತ್ತದೆ.
2. ಮೂರು ತಿಂಗಳಿನಲ್ಲಿ ₹1 ಲಕ್ಷ ಖರ್ಚು ಮಾಡಿದರೆ 1,000 ರೂ. ಮೌಲ್ಯದ ಗಿಫ್ಟ್ ವೋಚರ್ ಉಚಿತ
3. ವರ್ಷದಲ್ಲಿ 8 ಉಚಿತ ದೇಶೀಯ ವಿಮಾನ ನಿಲ್ದಾಣ ಲೌಂಜ್ ಪ್ರವೇಶ
4. ಗ್ರಾಹಕರು ಭರಿಸುವ ₹400 ರಿಂದ ₹5,000 ವರೆಗಿನ ಇಂಧನ ಖರೀದಿಯಲ್ಲಿ ರಿಯಾಯಿತಿ
5. 5,000 ರೂ. ವರೆಗಿನ ವ್ಯವಹಾರಗಳಿಗೆ ಪಿನ್ ನಮೂದಿಸದೇ ಪಾವತಿ (ಟ್ಯಾಪ್-ಅಂಡ್-ಪೇ ಪಾವತಿ)
ಇನ್ನು ಉಚಿತವಾಗಿ ನೀಡುವ 1,000 ರೂ. ಗಿಫ್ಟ್ ವೋಚರ್ ಬೇಕೆಂದರೆ, ಕ್ಯಾಲೆಂಡರ್ ಪ್ರಕಾರವಾದ ತ್ರೈಮಾಸಿಕ ಅವಧಿಯಲ್ಲಿ 1 ಲಕ್ಷ ರೂಪಾಯಿಗಳ ನಿವ್ವಳ ಖರ್ಚು ಸಾಧಿಸಬೇಕು. ಆಗ ಮಾತ್ರ ಈ ಗಿಫ್ಟ್ ವೋಚರ್ ಸಿಗಲಿದ್ದು ಇದು ಅಮೆಜಾನ್ ಪೇ, ಬಿಗ್‌ಬಾಸ್ಕೆಟ್, ಬುಕ್‌ಮೈಶೋ, ಪಿಜ್ಜಾ ಹಟ್, ಪಿವಿಆರ್, ಉಬರ್, ಇತ್ಯಾದಿ ಬ್ರಾಂಡ್‌ಗಳ ಮೇಲೆ ಕೋಡ್ ರಿಡೀಮ್ ಮಾಡಬಹುದು. ತ್ರೈಮಾಸಿಕದ ಅವಧಿ ಎಂದರೆ ಜನವರಿ 1 ರಿಂದ ಮಾರ್ಚ್ 31, ಏಪ್ರಿಲ್ 1 ರಿಂದ ಜೂನ್ 30, ಜುಲೈ 1 ರಿಂದ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ಆಗಿರುತ್ತದೆ.
ಕಾರ್ಡ್ ಹೊಂದಿರುವವರು ತಮ್ಮ ಖರ್ಚನ್ನು ನೆಟ್ ಬ್ಯಾಂಕಿಂಗ್ ಮೂಲಕ ಪರಿಶೀಲಿಸಬಹುದು. ಕರ್ಚು ಗುರಿಯನ್ನು ಸಾಧಿಸಿದ ನಂತರವೇ ಗಿಫ್ಟ್ ವೋಚರ್‍ನ, ಕಾರ್ಡ್ ಹೋಲ್ಡರ್ ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ 30 ದಿನಗಳಲ್ಲಿ ಕಳುಹಿಸಲಾಗುತ್ತದೆ. ಈ ಕಾರ್ಡ್ ಪಡೆದ 60 ದಿನಗಳಲ್ಲಿ ವೋಚರ್ ರಿಡೀಮ್ ಮಾಡಬಹುದು.
ಯಾವ್ಯಾವ ಖರೀದಿ ಮೇಲೆ ಕ್ಯಾಶ್‌ಬ್ಯಾಕ್..?
ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ಆಗಿರುವ ಈ ಹೆಚ್‌ಡಿಎಫ್‌ಸಿ ಮಿಲೇನಿಯಾ ಕಾರ್ಡ್ ನಿರ್ದಿಷ್ಟ ವ್ಯವಹಾರಗಳ ಮೇಲೆ 5% ಕ್ಯಾಶ್‌ಬ್ಯಾಕ್ ನೀಡುತ್ತದೆ. ಅಂದರೆ ಅವುಗಳಲ್ಲಿ ಅಮೇಜಾನ್, ಫ್ಲಿಪ್‌ಕಾರ್ಟ್, ಕಲ್ಟ್ ಫಿಟ್, ಮಿಂತ್ರ, ಸೋನಿ, ಟಾಟಾ ಕ್ಲಿಕ್, ಊಬರ್, ಜೊಮ್ಯಾಟೋ, ಬುಕ್ ಮೈ ಶೋ ಸೇರಿದೆ. ಆದರೆ ಕ್ಯಾಶ್‌ಬ್ಯಾಕ್‌ಗೂ ಒಂದು ಮಾನದಂಡವಿದೆ. ಅದೇನೆಂದರೆ ಇಎಂಐ ಅಲ್ಲದ ಖರೀದಿಗೆ ಮಾತ್ರ ಈ ಕ್ಯಾಶ್‌ಬ್ಯಾಕ್ ಅನ್ವಯವಾಗುತ್ತದೆ.
ಕ್ಯಾಶ್‌ಪಾಯಿಂಟ್‌ಗಳ ರೂಪದಲ್ಲಿ ಕ್ಯಾಶ್‌ಬ್ಯಾಕ್ ಗಳಿಕೆ:
ಹೆಚ್‌ಡಿಎಫ್‌ಸಿ ಮಿಲೇನಿಯಮ್ ಕ್ರೆಡಿಟ್ ಕಾರ್ಡ್ ಖಾತೆಯಲ್ಲಿ, ರಿವಾರ್ಡ್ ಪಾಯಿಂಟ್‌ಗಳೂ ಬರಲಿದ್ದು ಅದರ ಅಡಿಯಲ್ಲಿ ಕ್ಯಾಶ್‌ಪಾಯಿಂಟ್‌ನ ನೀಡುತ್ತದೆ. ಈ ಕ್ಯಾಶ್ ಪಾಯಿಂಟ್‌ಗಳನ್ನು ಕ್ಯಾಲೆಂಡರ್ ತಿಂಗಳ ಆಧಾರದ ಮೇಲೆ ಕಳುಹಿಸಲಾಗುತ್ತದೆ. ಅಂದರೆ ಈ ತಿಂಗಳು ಗಳಿಸಿದ ಕ್ಯಾಶ್ ಪಾಯಿಂಟ್‌ಗಳು ಮುಂದಿನ ತಿಂಗಳು ಬರುತ್ತವೆ. ಸ್ಟೇಟ್‌ಮೆಂಟ್ ಬ್ಯಾಲೆನ್ಸ್‌ಗೆ ಪ್ರತಿಯಾಗಿ ಕ್ಯಾಶ್‌ಬ್ಯಾಕ್ ಆಗಿ ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡಬಹುದು. ಅಲ್ಲದೇ ಸ್ಟೇಟ್‌ಮೆಂಟ್ ಬ್ಯಾಲೆನ್ಸ್‌ಗೆ ಪ್ರತಿಯಾಗಿ ಕ್ಯಾಶ್‌ಬ್ಯಾಕ್ ರಿಡೀಮ್ ಮಾಡಬಹುದು. ಒಂದು ಕ್ಯಾಶ್‌ಪಾಯಿಂಟ್ ಮೌಲ್ಯ 1 ರೂ.ಗೆ ಸಮವಾಗಿರುತ್ತದೆ. ಇದನ್ನು ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಅಥವಾ ಭೌತಿಕ ರಿಡೆಂಪ್ಶನ್ ಫಾರ್ಮ್ ಮೂಲಕ ಮಾಡಬಹುದು ಮತ್ತು ರೂ. 50 ರಿಡೆಂಪ್ಶನ್ ಶುಲ್ಕವನ್ನು ಹೊಂದಿರುತ್ತದೆ. ಕ್ಯಾಶ್‌ಬ್ಯಾಕ್ ರಿಡೆಂಪ್ಶನ್‌ಗೆ ಕನಿಷ್ಠ ಕ್ಯಾಶ್‌ಪಾಯಿಂಟ್‌ಗಳ ಅವಶ್ಯಕತೆ 500 ಆಗಿರುತ್ತದೆ. ಹೀಗೆ ಗರಿಷ್ಠ 3,000 ಕ್ಯಾಶ್‌ಪಾಯಿಂಟ್‌ಗಳನ್ನು ಕ್ಯಾಶ್‌ಬ್ಯಾಕ್‌ಗಾಗಿ ರಿಡೀಮ್ ಮಾಡಬಹುದು.
ಸ್ಮಾರ್ಟ್ ಬೈ ರಿವಾರ್ಡ್ಸ್ ಪೋರ್ಟಲ್‌ನಲ್ಲಿ ಫ್ಲೈಟ್ ಟಿಕೆಟ್‌ಗಳು, ಹೋಟೆಲ್ ವಸತಿ ಮತ್ತು ರಿವಾರ್ಡ್ ಕ್ಯಾಟಲಾಗ್‌ನ ಬುಕ್ ಮಾಡಲು ಕ್ಯಾಶ್‌ಪಾಯಿಂಟ್‌ಗಳನ್ನು ಸಹ ರಿಡೀಮ್ ಮಾಡಬಹುದು. ಇವುಗಳಲ್ಲಿ ಮಾತ್ರ ಪ್ರತಿ ಕ್ಯಾಶ್‌ಪಾಯಿಂಟ್‌ನ ಮೌಲ್ಯವು ರೂ. 0.30 ಆಗಿದೆ.ಈ ನಗದು ಪಾಯಿಂಟ್‌ಗಳು ಎರಡು ವರ್ಷಗಳ ಮಾನ್ಯತೆಯನ್ನು ಹೊಂದಿರುತ್ತವೆ. ಮಾನ್ಯತೆಯ ಅವಧಿಯಲ್ಲಿ ಅವುಗಳನ್ನು ರಿಡೀಮ್ ಮಾಡದಿದ್ದರೆ ಅವು ರದ್ದಾಗುತ್ತವೆ.
ನಿರ್ದಿಷ್ಟ ವಹಿವಾಟುಗಳ ಮೇಲಿನ ಶುಲ್ಕ:
ಒಂದಷ್ಟು ನಿರ್ದಿಷ್ಟ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ. ವಹಿವಾಟು ಸಂಬಂಧ 1% ಶುಲ್ಕ ವಿಧಿಸಲಾಗುತ್ತದೆ. ಹಾಗೂ ಆ ಶುಲ್ಕವನ್ನು ಪ್ರತಿ ವಹಿವಾಟಿಗೆ 3,000 ರೂ.ಗೆ ಮಿತಿಗೊಳಿಸಲಾಗಿದೆ. ಇಂಧನ ವೆಚ್ಚಗಳಿಗೆ ಪ್ರತಿ ವಹಿವಾಟು 15,000 ರೂಪಾಯಿಗಿಂತ ಹೆಚ್ಚಾದರೆ, ಸಂಪೂರ್ಣ ವಹಿವಾಟಿನ ಮೊತ್ತದ ಮೇಲೆ 1% ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಪ್ರತಿ ವಹಿವಾಟಿಗೆ . 50,000 ರೂಪಾಯಿಗಿಂತ ಹೆಚ್ಚು ಯುಟಿಲಿಟಿ ಬಿಲ್ ಪಾವತಿಸುವುದಾದರೆ, ಅದರ ಸಂಪೂರ್ಣ ವಹಿವಾಟಿನ ಮೊತ್ತದ ಮೇಲೆ 1% ಶುಲ್ಕ ವಿಧಿಸಲಾಗುತ್ತದೆ. ಇವುಗಳಿಗೂ ಶುಲ್ಕದ ಮಿತಿ 3,000 ರೂ. ಎನ್ನಲಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications