ನವದೆಹಲಿ, ಫೆಬ್ರವರಿ 8: ಅನೇಕ ಭಾರತೀಯರು ತಮ್ಮ ದೇಶದಲ್ಲಿ ಪ್ರಾರ್ಥಮಿಕ ಶಿಕ್ಷಣವನ್ನು ಪಡೆದ ಬಳಿಕ ನಂತರ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿ, ಅಲ್ಲಿ ವಿದ್ಯಾಭಾಸದ ಬಳಿಕ ಉದ್ಯೋಗ ಪಡೆದು ಒಂದಷ್ಟು ಅನುಭವ ಪಡೆದು ಭಾರತಕ್ಕೆ ಮರಳುತ್ತಾರೆ. ಬಳಿಕ ಸ್ವದೇಶದಲ್ಲಿ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಲು ತಮ್ಮದೇ ಆದ ಕಂಪನಿಗಳನ್ನು ಪ್ರಾರಂಭಿಸುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಒಬ್ಬರು ಹೈಕ್ ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಕವಿನ್ ಭಾರತಿ ಮಿತ್ತಲ್.
ಕವಿನ್ ಭಾರತಿ ಮಿತ್ತಲ್ ಅವರು ಹೈಕ್ ಮೆಸೆಂಜರ್ ಮತ್ತು ರಶ್ ಗೇಮಿಂಗ್ ಯೂನಿವರ್ಸ್ (RGU), ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗೆ ಖ್ಯಾತರಾದ ಇಂಟರ್ನೆಟ್ ಉದ್ಯಮಿಯಾಗಿದ್ದಾರೆ. 36ರ ಹರೆಯದ ಕವಿನ್ ಭಾರ್ತಿ ಏರ್‌ಟೆಲ್ ಮಾಲೀಕರಾಗಿರುವ ಭಾರತೀಯ ಬಿಲಿಯನೇರ್ ಸುನಿಲ್ ಮಿತ್ತಲ್ ಅವರ ಪುತ್ರರಾಗಿದ್ದಾರೆ. ಫೋರ್ಬ್ಸ್ ಪ್ರಕಾರ ಸುನಿಲ್ ಮಿತ್ತಲ್ ಅವರು ರಿಯಲ್ ಟೈಮ್ ನಿವ್ವಳ ಮೌಲ್ಯ 74730 ಕೋಟಿ ರೂ. (USD 9 ಶತಕೋಟಿ) ಆಗಿದೆ.

ಕವಿನ್ ದೆಹಲಿಯಲ್ಲಿ ಬೆಳೆದಿದ್ದು, ವಿದ್ಯಾಬ್ಸ್ಯಾಸದ ಬಳಿಕ ಇಂಗ್ಲೆಂಡ್ ಗೆ ತೆರಳಿ ಯಾರ್ಕ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಕವಿನ್ ಅವರು ತಮ್ಮ ಸ್ನಾತಕೋತ್ತರ ಪದವಿಯ ಸಂದರ್ಭದಲ್ಲಿ ಮೆಕ್‌ಲಾರೆನ್ ರೇಸಿಂಗ್, ಗೂಗಲ್ ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳಲ್ಲಿ ತರಬೇತಿ ಪಡೆದರು. ಮೆಕ್ಲಾರೆನ್ ರೇಸಿಂಗ್‌ನಲ್ಲಿ, ಸ್ಟೀರಿಂಗ್ ಚಕ್ರಗಳಲ್ಲಿ ಟ್ರ್ಯಾಕ್ ಫ್ಲ್ಯಾಗ್‌ಗಳನ್ನು ತೋರಿಸುವ ತಂತ್ರಜ್ಞಾನವನ್ನು ಎಂಬೆಡ್ ಮಾಡಲು ಅವರು ಫಾರ್ಮುಲಾ1 ತಂಡಕ್ಕೆ ಸಹಾಯ ಮಾಡಿದರು.
ನಂತರ ಅವರು 2011 ರಲ್ಲಿ ಭಾರತಕ್ಕೆ ಮರಳಿ 2012 ರಲ್ಲಿ ಹೈಕ್ ಅನ್ನು ಸ್ಥಾಪಿಸಿದರು. ಮುಂದಿನ ಆರು ವರ್ಷಗಳ ಕಾಲ ಅವರು ಮೇಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡಿದರು. ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಯುನಿಕಾರ್ನ್ ಸ್ಥಿತಿಯನ್ನು ತಲುಪಿತು. ಆದರೆ 2019 ರಲ್ಲಿ, ಮಾರುಕಟ್ಟೆಯಲ್ಲಿನ ಏರುಪೇರುಗಳನ್ನು ಉಲ್ಲೇಖಿಸಿ ಹೈಕ್ ಅಪ್ಲಿಕೇಶನ್ ಅನ್ನು ಮುಚ್ಚಲು ನಿರ್ಧರಿಸಿತು. ಹೈಕ್ ಗೂ ಮೊದಲು, ಅವರು AppSpark ಮತ್ತು MoviesNow ಎರಡು ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ನಿರ್ಮಿಸಿದ್ದರು.


Click it and Unblock the Notifications