ನವದೆಹಲಿ, ಸೆಪ್ಟೆಂಬರ್ 1: ಈ ಆಧುನಿಕ ಜಗತ್ತಿನಲ್ಲಿ ಆರೋಗ್ಯವೇ ಭಾಗ್ಯ ಎಂದು ಹೊಸದಾಗಿ ಹೇಳಬೇಕಿಲ್ಲ. ಆರೋಗ್ಯದ ಸುರಕ್ಷತೆಗೆ ವಿಮೆ ಇದೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ನಿಮ್ಮ ಆರೋಗ್ಯ ಕಾಳಜಿಗೆ ಇರುವ ಒಂದು ಕಾರ್ಡ್ನ ಬಗ್ಗೆ ನಿಮಗೆ ಗೊತ್ತಾ..? ಗೊತ್ತಿಲ್ಲ ಎಂದಾದರೆ ಅದರ ಬಗ್ಗೆ ಸಮಗ್ರ ಮಾಹಿತಿಯನ್ನು ನಾವು ನೀಡುತ್ತೇವೆ. ಈ ಕಾರ್ಡ್ ನಿಮಗೆ ಹೇಗೆಲ್ಲಾ ಸಹಾಯಕ್ಕೆ ಬರುತ್ತೆ.. ಈ ಕಾರ್ಡ್ ಮಾಡಿಸುವುದರಿಂದ ಅದರಿಂದ ಆಗುವ ಲಾಭಗಳು ಏನು ಅನ್ನೋದನ್ನು ಈ ವರದಿ ಮೂಲಕ ತಿಳಿಸಿಕೊಡುತ್ತೇವೆ.
ಹೆಲ್ತ್ ಅಂಡ್ ವೆಲ್ನೆಸ್ ಕ್ರೆಡಿಟ್ ಕಾರ್ಡ್ ನಿಮಗೆ ಆರೋಗ್ಯ ರಕ್ಷಣೆ ಪದಗಿಸುತ್ತದೆ. ಈ ಕ್ರೆಡಿಟ್ ಕಾರ್ಡ್ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ.. ಜೊತೆಗೆ ಅದರಿಂದ ಸಿಗೋ ಲಾಭಗಳ ಕಡೆಗೂ ನಾವು ಗಮನ ಹರಿಸಬೇಕಾಗುತ್ತದೆ. ದೊಡ್ಡ ಕ್ರೆಡಿಟ್ ಕಾರ್ಡ್ ಕಂಪನಿಗಳು ಶಾಪಿಂಗ್, ಪ್ರವಾಸ, ಹಾಗೂ ಜೀವನಶೈಲಿಗಳಂತಹ ಜನಪ್ರಿಯ ಗುಂಪುಗಳ ಜೊತೆಗೆ ವೆಲ್ನೆಸ್ ಗುಂಪಿನಲ್ಲೂ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿವೆ. ಕೋವಿಡ್ ನಂತರ ಬಹಳಷ್ಟು ಜನರಿಗೆ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಾಗಿದೆ. ನೀವೂ ಕೂಡಾ ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡವರಾಗಿದ್ದರೆ ನಿಮ್ಮ ಹಾಗು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರೆ ಇಂತಹ ಆರೋಗ್ಯ-ಆಧಾರಿತ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು.

ಇದರಿಂದ ನೀವು ನಿಮ್ಮ ಹಾಗೂ ಕುಟುಂಬದ ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚಗಳಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು. ಯಾವುದೇ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಎದುರಾಗಬಹುದು ಅನ್ನೋದನ್ನು ಕೊರೋನಾ ನಮಗೆ ತೋರಿಸಿ ಕೊಟ್ಟಿದೆ. ಹೀಗಾಗಿ, ಅಂತಹ ಪರಿಸ್ಥಿತಿಗಳಲ್ಲಿ ಈ ಕ್ರೆಡಿಟ್ ಕಾರ್ಡ್ ಒಂದು ಅತ್ಯಂತ ಪ್ರಯೋಜನಕಾರಿಯಾದ ಹಣಕಾಸು ಸಾಧನವಾಗಬಹುದು.
ಎಚ್.ಡಿ.ಎಫ್.ಸಿ ಬ್ಯಾಂಕ್, ಎಸ್.ಬಿ.ಐ. ಕಾರ್ಡ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ಗಳು ಸೇರಿದಂತೆ ವಿವಿಧ ಪ್ರಮುಖ ಬ್ಯಾಂಕ್ ಗಳು ಅಂತಹ ಕಾರ್ಡ್ಗಳನ್ನು ನೀಡುತ್ತವೆ. ಬಹಳ ಜನಪ್ರಿಯವಾಗಿರೋ ಕೆಲ ಆರೋಗ್ಯ-ಆಧಾರಿತ ಕಾರ್ಡ್ಗಳೆಂದರೆ ಎಸ್.ಬಿ.ಐ. ಕಾರ್ಡ್ ಪಲ್ಸ್, ಆಕ್ಸಿಸ್ ಬ್ಯಾಂಕ್ ಆರಾ (ಎಯುಆರ್ಎ) ಕ್ರೆಡಿಟ್ ಕಾರ್ಡ್, ಅಪೋಲೋ ಎಸ್.ಬಿ.ಐ. ಕ್ರೆಡಿಟ್ ಕಾರ್ಡ್, ಯೆಸ್ ಬ್ಯಾಂಕ್ ವೆಲ್ನೆಸ್ ಕ್ರೆಡಿಟ್ ಕಾರ್ಡ್, ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಡಾಕ್ಟರ್ಸ್ ಸುಪೀರಿಯ ಕ್ರೆಡಿಟ್ ಕಾರ್ಡ್ ಎಂದು ಹೆಸರಿಸಬಹುದು.
ಈ ಕಾರ್ಡ್ಗಳನ್ನು ನೀವು ಪಡೆದುಕೊಂಡಾಗ ನಿಮಗೆ ರಿವಾರ್ಡ್ಗಳು ಮತ್ತು ಕ್ಯಾಷ್ ಬ್ಯಾಕ್ಗಳಂತಹ ಲಾಭಗಳು, ಹೆಲ್ತ್ ಅಂಡ್ ವೆಲ್ನೆಸ್ ಬೆನಿಫಿಟ್ಗಳು, ಮತ್ತು ಸಿನೆಮಾ ಮತ್ತು ಡಿನ್ನರ್ಗಳ ಮೇಲಿನ ಡಿಸ್ಕೌಂಟ್ಗಳಂತಹ ಲೈಫ್ ಸ್ಟೈಲ್ ಬೆನಿಫಿಟ್ಗಳು ಸಿಗುತ್ತವೆ. ವಿಮಾನ ನಿಲ್ದಾಣಗಳಲ್ಲಿ ಲೌಂಜ್ಗೆ ಉಚಿತ ಪ್ರವೇಶಗಳಂತಹ ಪ್ರವಾಸದ ಲಾಭಗಳೂ ಸಹ ನಿಮಗೆ ಸಿಗುತ್ತವೆ. ಈ ಕ್ರೆಡಿಟ್ ಕಾರ್ಡ್ಗಳಿಂದ ನೀವು ನಡೆಸುವ ಪ್ರತಿಯೊಂದು ವ್ಯವಹಾರಕ್ಕೂ ನಿಮಗೆ ರಿವಾರ್ಡ್ಗಳು ಸಿಗಲಿದ್ದು, ಸಾಮಾನ್ಯವಾಗಿ, ಈ ರಿವಾರ್ಡ್ಗಳು ಆರೋಗ್ಯ ಸೇವೆಗಳ ಗುಂಪಿಗೆ ಸಂಬಂಧಿಸಿದ ರಿವಾರ್ಡ್ಗಳಾಗಿರುತ್ತವೆ.
ನಾವೀಗ ಹೆಲ್ತ್ ಮತ್ತು ವೆಲ್ನೆಸ್ ಲಾಭಗಳ ಬಗ್ಗೆ ಮಾತನಾಡೋಣ. ಇಂತಹ ಕಾರ್ಡ್ಗಳನ್ನು ಹೊಂದಿರುವವರು ಆರೋಗ್ಯ ತಪಾಸಣೆ ಮತ್ತು ಔಷಧಗಳನ್ನು ಕೊಳ್ಳುವಾಗ ಡಿಸ್ಕೌಂಟ್ ಪಡೆದುಕೊಳ್ಳುತ್ತಾರೆ. ವೈದ್ಯರೊಂದಿಗೆ ನೀವು ಪಡೆಯುವ ಆಪ್ತ ಸಮಾಲೋಚನೆಯ ಶುಲ್ಕದಲ್ಲೂ ಸಹ ನಿಮಗೆ ಡಿಸ್ಕೌಂಟ್ ಸಿಗುತ್ತದೆ. ಇದಲ್ಲದೇ, ಕೆಲವು ಕಾರ್ಡ್ ಗಳಲ್ಲಿ ನಿಮಗೆ ಪ್ರತಿ ತಿಂಗಳೂ ಫಿಟ್ಪಾಸ್ಪ್ರೊ ಸದಸ್ಯತ್ವ ಅಥವಾ ನೆಟ್ಮೆಡ್ಸ್ಪ್ರೊ ಚಂದಾದಾರಿಕೆಯಂತಹ ಸೌಲಭ್ಯಗಳೂ ಸಹ ಸಿಗುತ್ತವೆ. ಹೀಗಾಗಿ, ನೀವು ಇಂತಹ ಆಪ್ಗಳನ್ನು ಬಳಸಿದಾಗ, ನೀವು ಪ್ರೋತ್ಸಾಹಕ ಫಿಟ್ನೆಸ್ಸೆಷನ್ಗಳು ಮತ್ತು ಉಚಿತ ಸದಸ್ಯತ್ವಗಳನ್ನು ಪಡೆಯುವಿರಿ.
ಆರೋಗ್ಯ-ಆಧಾರಿತ ಕ್ರೆಡಿಟ್ ಕಾರ್ಡ್ ನ ಜೊತೆಗೆ ನೀವು ಅಪಘಾತದಲ್ಲಿ ಮರಣ ಹೊಂದಿದಲ್ಲಿ ಅಥವಾ ವೈಯಕ್ತಿಕ ದೈಹಿಕ ಅಸಮರ್ಥತೆಗೆ ಗುರಿಯಾದಲ್ಲಿ ವಿಮಾ ರಕ್ಷಣೆಯನ್ನೂ ಸಹ ಪಡೆಯಬಹುದು. ಒಟ್ಟಾರೆಯಾಗಿ ನಾವು ಏನು ಹೇಳಬಹುದೆಂದರೆ, ನಿಮಗೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಇದ್ದು ನೀವು ಫಿಟ್ನೆಸ್ ಸೆಷನ್ಗಳ ಲಾಭ ಪಡೆಯಲು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿ ಸಮಸ್ಯೆಗೂ ವೈದ್ಯರ ಸಲಹೆ ಪಡೆಯಲು ಈ ಕಾರ್ಡ್ ನಿಮಗೆ ಬಹಳ ಸಹಕಾರಿಯಾಗಬಹುದು.


Click it and Unblock the Notifications