ಸಾಮಾನ್ಯವಾಗಿ ತುರ್ತು ಅಗತ್ಯದ ದೃಷ್ಟಿಯಿಂದ, ಕುಟುಂಬಕ್ಕೆ ಅಥವಾ ವೈಯಕ್ತಿಕವಾಗಿ ವೈದ್ಯಕೀಯ ವೆಚ್ಚ ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನವರು ಆರೋಗ್ಯ ವಿಮೆ (Health Insurance) ಮಾಡುತ್ತಾರೆ. ಇದು ಆಸ್ಪತ್ರೆ ದಾಖಲಾತಿ, ಚಿಕಿತ್ಸೆ, ತಪಾಸಣೆ, ಶಸ್ತ್ರಚಿಕಿತ್ಸೆ ಈ ರೀತಿಯ ವೈದ್ಯಕೀಯ ವೆಚ್ಚಗಳಿಂದ (Medical Expenses) ಆರ್ಥಿಕ ರಕ್ಷಣೆ ನೀಡುತ್ತದೆ. ಆರೋಗ್ಯ ವಿಮೆ ಮಾಡಿಕೊಂಡರೆ, ಆರೋಗ್ಯ ಸಮಸ್ಯೆ ಬಂದಾಗ ವಿಮಾ ಕಂಪನಿ ನಿಗದಿತ ಮೊತ್ತದವರೆಗೆ ವೆಚ್ಚ ಭರಿಸುತ್ತದೆ. ಆದರೆ ಈ ಆರೋಗ್ಯ ವಿಮೆ ಸಂಬಂಧಿಸಿ ಇದೀಗ ಘಟನೆಯೊಂದು ಭಾರೀ ವೈರಲ್ ಆಗುತ್ತಿದೆ. ವಿಮಾ ಕಂಪನಿಯ (Insurance Company) ನಿರ್ಧಾರ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಹೌದು, ಇಲ್ಲೊಬ್ಬ ಮಗ ತನ್ನ ತಾಯಿಯ ಆರೋಗ್ಯದ ವಿಮೆ ಮಾಡಿ, ಅದರಲ್ಲಿ ಪ್ರತೀ ವರ್ಷ 50,000 ರೂ. ಪ್ರೀಮಿಯಂ ಪಾವತಿಸುತ್ತಿದ್ದರು. ಅಲ್ಲದೇ ವಿಮಾನ ಕಂಪನಿಯ ಮೇಲೆ ಸಂಪೂರ್ಣ ನಂಬಿಕೆಯಿಟ್ಟು, ಅಗತ್ಯಬಿದ್ದಾಗ ಸಹಾಯಕ್ಕೆ ಬರುತ್ತದೆ ಎಂದೂ ಭಾವಿಸಿದ್ದರು, ಆದರೆ ತಾಯಿ ಅನಾರೋಗ್ಯಕ್ಕೆ ಒಳಗಾದಾಗ ವಿಮಾ ಕಂಪನಿಯ ಸತ್ಯ ಬಯಲಾಗಿದೆ.
ನಂಬಿಕೆ ಹುಸಿಯಾಗಿಸಿ ವಿಮಾ ಕಂಪನಿ!
ಪ್ರತಿ ವರ್ಷ ತಮ್ಮ ತಾಯಿಯ ಆರೋಗ್ಯ ವೆಚ್ಚದ ದೃಷ್ಟಿಯಿಂದ ವಿಮೆಗಾಗಿ ₹50,000 ಪ್ರೀಮಿಯಂ ಪಾವತಿಸುತ್ತಿದ್ದ ವ್ಯಕ್ತಿಯೊಬ್ಬರು ಎದುರಿಸಿದ ಸಮಸ್ಯೆ ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿದೆ. ಇತ್ತೀಚೆಗೆ ತಾಯಿಗೆ ಚಿಕಿತ್ಸೆಯ ಅಗತ್ಯ ಬಂದಾಗ, ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಲಖನೌ ಕಚೇರಿಯಲ್ಲಿ ಗಂಟೆಗಟ್ಟಲೆ ಕಾಯಿಸಿದ್ದು ಮಾತ್ರವಲ್ಲದೇ, ಅವರ ಕ್ಲೈಮ್ ಕೂಡಾ ತಿರಸ್ಕರಿಸಲ್ಪಟ್ಟಿದೆ. ಈ ಮೂಲಕ ವಿಮೆ ನೆರವಾಗುತ್ತದೆಂಬ ಅವರ ನಂಬಿಕೆ ಹುಸಿಯಾಗಿದೆ.
ಏಜೆಂಟರಿಂದ ಉಡಾಫೆ ಪ್ರತಿಕ್ರಿಯೆ!
ಇನ್ನು ವಿಮಾ ಕ್ಲೈಮ್‌ಗಾಗಿ ಲಕ್ನೋದಲ್ಲಿ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಚೇರಿಗೆ ಹೋದಾಗ, ಅವರನ್ನು ಗಂಟೆಗಟ್ಟಲೆ ಕಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಂತಿಮವಾಗಿ ಕ್ಲೈಮ್ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ. ದೀರ್ಘಕಾಲ ಕಾಯುವಿಕೆ, ಕ್ಲೈಂ ನಿರಾಕರಣೆಗಿಂತಲೂ ಮೇಲಾಗಿ, ವಿಮಾ ಕಂಪನಿಯ ಏಜೆಂಟ್ "ನೀವು ನಮ್ಮನ್ನು ಕೇಳಿ ಪಾಲಿಸಿ ತೆಗೆದುಕೊಂಡಿದ್ದೀರಾ?" ಎಂದು ನೀಡಿದ ಪ್ರತಿಕ್ರಿಯೆ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಸದ್ಯ ಈ ಘಟನೆ ಬಗ್ಗೆ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಮಾ ಕಂಪನಿಗೆ ಸಕಾಲದಲ್ಲಿ ಪ್ರೀಮಿಯಂ ಕಟ್ಟಬೇಕು, ಆದ್ರೆ ಕ್ಲೈಂ ಮಾಡುವಾಗ ಏಕೆ ಇಷ್ಟೊಂದು ತಡವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಆರೋಗ್ಯ ವಿಮೆ ಕೇವಲ "ಕಾಗದದ ಭರವಸೆ"ಯಾಗಿದೆಯೇ, ರಕ್ಷಣೆಯಿಲ್ಲವೇ ಎಂದು ಪ್ರಶ್ನೆ ಮಾಡುವಂತೆ ಮಾಡಿದೆ.
ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಹೇಳಿದ್ದೇನು?
ಭಾರೀ ವಿವಾದ ಉಂಟಾಗುತ್ತಿದ್ದಂತೆ, ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ ಪ್ರತಿಕ್ರಿಯೆ ನೀಡಿದ್ದು, ಕ್ಲೈಮ್ ನಿರ್ಧಾರಗಳು ದಾಖಲೆಗಳ ಮೇಲೆ ಮತ್ತು ಪರಿಶೀಲಿತ ವೈದ್ಯಕೀಯ ದಾಖಲೆಗಳ ಮೇಲೆ ಆಧರಿಸಿವೆ ಎಂದು ಅದು ಸ್ಪಷ್ಟಪಡಿಸಿದೆ. ಆರೋಗ್ಯ ಸಂಬಂಧಿತ ವಿಷಯಗಳು ಭಾವನಾತ್ಮಕವಾಗಿ ಭಾರೀ ಸವಾಲಿನದ್ದು ಎಂದು ನಾವು ಅರಿತಿದ್ದೇವೆ. ಆದರೆ ಲಕ್ನೋ ಕ್ಲೈಂ ಸಂಬಂಧಿತ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಟಾರ್ ಹೆಲ್ತ್ ಇನ್ಸೂರೆನ್ಸ್, ಲಕ್ನೋದ ಈ ಕ್ಲೈಂ ಬಗ್ಗೆ ವಿವಾದಗಳು ಸರಿಯಲ್ಲ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ ತಪ್ಪಾಗಿ ಚಿತ್ರಿಸಲಾಗಿದೆ ಎಂದು ನಾವು ನಂಬಿದ್ದೇವೆ. ವಿಮಾ ಕ್ಲೈಂ ಬಗ್ಗೆ ಪರಿಶೀಲನೆ ಸಮಯದಲ್ಲಿ ಲಭ್ಯವಿದ್ದ ವೈದ್ಯಕೀಯ ದಾಖಲೆಗಳಿಂದ ಆರೋಗ್ಯ ಸಮಸ್ಯೆ, ವಿಮಾ ಪಾಲಿಸಿ ಇದ್ದವರಿಗೆ ಮೊದಲೇ ಇದ್ದಿರಬಹುದು ಎಂದು ತೋರಿತು. ಇದಕ್ಕೆ ಸಂಬಂಧಿಸಿದ ಹೆಚ್ಚಿನ ದಾಖಲೆಗಳನ್ನು ನಾವು ಅಧಿಕೃತವಾಗಿ ಕೇಳಿದ್ದೆವು. ಆದರೆ ಅನೇಕ ಬಾರಿ ನೆನಪಿಸಿದರೂ, ಈ ದಾಖಲೆಗಳನ್ನು ನೀಡಲಾಗಿಲ್ಲ. ಅದೇ ಕಾರಣದಿಂದ ಕ್ಲೈಂ ನಿರಾಕರಿಸಲಾಯಿತು ಎಂದು ಹೇಳಿದೆ.


Click it and Unblock the Notifications