ಇಂದು (ಮಾರ್ಚ್ 21) ಲಂಡನ್‌ನ ಪ್ರಮುಖ ವಿಮಾನ ನಿಲ್ದಾಣವಾದ ಹೀಥ್ರೂನಲ್ಲಿ ಭಾರಿ ತಾಂತ್ರಿಕ ಸಮಸ್ಯೆ ಸಂಭವಿಸಿದೆ. ಅಂದರೆ ವಿದ್ಯುತ್ ಕಡಿತಗೊಂಡ ಪರಿಣಾಮ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ. ಹೀಥ್ರೂ ನಗರದ ಪಶ್ಚಿಮ ಭಾಗದಲ್ಲಿರುವ ವಿದ್ಯುತ್ ಸಬ್‌ಸ್ಟೇಷನ್‌ನಲ್ಲಿ ಉಂಟಾದ ಬೆಂಕಿಯ ಪರಿಣಾಮವಾಗಿ, ವಿಮಾನ ನಿಲ್ದಾಣಕ್ಕೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಇದರಿಂದ ಹಲವಾರು ವಿಮಾನಯಾನ ಸೇವೆಗಳ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದ್ದು, ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಇನ್ನೂ ಕೆಲವು ವಿಮಾನಗಳು ಬೇರೆಡೆಗೆ ತಿರುಗಿಸಲ್ಪಟ್ಟಿವೆ.

ಇನ್ನು ಈ ವಿದ್ಯುತ್ ಸಮಸ್ಯೆ ಹೀಥ್ರೂ ಮಾತ್ರವಲ್ಲದೇ, ಲಂಡನ್‌ನ ಹಲವಾರು ಮನೆಗಳಿಗೂ ಪರಿಣಾಮ ಬೀರಿದೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ಈ ಸಮಸ್ಯೆ ಯಾವಾಗ ಸರಿಯಾಗಬಹುದೆಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.
ಇನ್ನು ಹೀಥ್ರೂ ವಿಮಾನ ನಿಲ್ದಾಣವನ್ನು ಇದು ಸ್ಥಗಿತಗೊಳಿಸಿದ ನಂತರ, ನಗರದ ಪಶ್ಚಿಮ ಭಾಗದಲ್ಲಿರುವ ವಿದ್ಯುತ್ ಸಬ್‌ಸ್ಟೇಷನ್‌ನಲ್ಲಿ ಬೆಂಕಿ ಸಂಭವಿಸಿತು. ಇದರ ಪರಿಣಾಮ ವ್ಯಾಪಕವಾಗಿ ವಿದ್ಯುತ್ ಕಡಿತಗೊಂಡಿದ್ದು, ಏರ್ ಇಂಡಿಯಾ ನಿರ್ವಹಿಸುವ ವಿಮಾನಗಳು ಸೇರಿದಂತೆ ಅಂದಾಜು 1,351 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ .
ಅಂದಹಾಗೆ ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹೀಥ್ರೂ, ಲಂಡನ್ ಮತ್ತು ಹತ್ತಿರದ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ. ಇದು ಐದು ವಿಮಾನ ನಿಲ್ದಾಣಗಳಲ್ಲಿ ಅತಿ ದೊಡ್ಡದಾದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅವಘಡದಿಂದ ಯುಕೆ ರಾಜಧಾನಿಯಲ್ಲಿ 16,000 ಕ್ಕೂ ಹೆಚ್ಚು ಮನೆಗಳು ವಿದ್ಯುತ್ ಕಡಿತಗೊಂಡವು. ಅಲ್ಲದೇ ಹೀಥ್ರೂ ಮೇಲೆ 120 ವಿಮಾನಗಳು ಹಾರಾಟ ನಡೆಸುತ್ತಿದ್ದವು, ಅವು ಈಗಷ್ಟೇ ಟೇಕ್ ಆಫ್ ಆಗಿದ್ದವು ಅಥವಾ ಇಳಿಯುವ ಹಂತದಲ್ಲಿದ್ದವು. ಆದರೆ ತಕ್ಷಣ ಈ ಅವಘಡ ಸಂಭವಿಸಿದ ಕಾರಣ ಅವುಗಳನ್ನು ಬೇರೆಡೆಗೆ ತಿರುಗಿಸಲಾಯ್ತು.
ಇನ್ನು ಬಾಕಿ ಇರುವ ವಿಮಾನಗಳಲ್ಲಿ ಮುಂಬೈನಿಂದ AI129 ಸೇವೆ ಮತ್ತು ದೆಹಲಿಯಿಂದ AI161 ಸೇರಿವೆ. ಮೊದಲನೆಯ ವಿಮಾನ ಹಿಂತಿರುಗಿದ್ದು, ಎರಡನೆಯ ವಿಮಾನ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ ಎಂದು ಭಾರತೀಯ ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಲಂಡನ್ ಹೀಥ್ರೂಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ಎಲ್ಲಾ ಉಳಿದ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇದರ ನಡುವೆ ಲಂಡನ್‌ನ ಗ್ಯಾಟ್ವಿಕ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಹೀಥ್ರೂದಿಂದ ಆಗ್ನೇಯಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣವು ಹೀಥ್ರೂದಿಂದ ಬೇರೆಡೆಗೆ ತಿರುಗಿಸಲಾದ ವಿಮಾನಗಳನ್ನು ಸ್ವೀಕರಿಸುವುದಾಗಿ ದೆಹಲಿ-ಲಂಡನ್ ವಿಮಾನ ಸೇವೆಯಿಂದ ಮಾಹಿತಿ ಹೊರ ಬಿದ್ದಿದೆ.
ಇನ್ನು ಲಂಡನ್‌ನ ಹೀಥ್ರೂವನ್ನು ಮುಖ್ಯ ಕೇಂದ್ರವಾಗಿ ಹೊಂದಿರುವ ಬ್ರಿಟಿಷ್ ಏರ್‍ವೇಸ್, ಈ ಕುರಿತು ಮುಂದಿನ ಸೂಚನೆ ಬರುವವರೆಗೂ ಜನರು ಪ್ರಯಾಣ ಮಾಡದಂತೆ ತಿಳಿಸಿದೆ. ಆಮ್ಸ್ಟರ್‌ಡ್ಯಾಮ್‌ನ ಶಿಫೋಲ್ ವಿಮಾನ ನಿಲ್ದಾಣವು ಇಂದು ಹೀಥ್ರೂಗೆ ಮತ್ತು ಅಲ್ಲಿಂದ ಹೊರಡುವ ದಿನದ 30 ವಿಮಾನಗಳಲ್ಲಿ ಅರ್ಧದಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಇನ್ನು ಹಾಂಕ್ ಕಾಂಗ್ ವಿಮಾನಯಾನ ಸಂಸ್ಥೆಯು, ಕ್ಯಾಥೆ ಪೆಸಿಫಿಕ್ ಏರ್ವೇಸ್ ಕೂಡ ತನ್ನೆಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅಂದಹಾಗೆ ಇಂದು ಹೀಥ್ರೂಗೆ ಆರು ವಿಮಾನಗಳನ್ನು ನಿಗದಿಪಡಿಸಲಾಗಿತ್ತು. ಒಂದು ಸೇವೆ - CX257 - ಈಗಾಗಲೇ ಹೊರಟಿತ್ತು ಮತ್ತು ಅದನ್ನು ಹಿಂತಿರುಗಿಸಿಕೊಳ್ಳಲಾಗಿದೆ.
ಇತ್ತ ಆಸ್ಟ್ರೇಲಿಯಾದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಕ್ವಾಂಟಾಸ್, ಈ ಪರಿಸ್ಥಿತಿಯ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕ್ವಾಂಟಾಸ್‌ನ ಎರಡು ವಿಮಾನಗಳು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಡಿ ಗೌಲ್‌ಗೆ ತಿರುಗಿಸಲಾಗಿದೆ. ಇವುಗಳು ಸಿಂಗಾಪುರದಿಂದ ಹಾರಾಟ ನಡೆಸುತ್ತಿದ್ದವು ಎನ್ನಲಾಗಿದೆ. ಇನ್ನು ಈ ಘಟನೆ ಅಮೆರಿಕ ಮೂಲದ ಯುನೈಟೆಡ್ ಏರ್‌ಲೈನ್ಸ್ ತನ್ನ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರಿದೆ ಎನ್ನಲಾಗಿದೆ.


Click it and Unblock the Notifications