ನವದೆಹಲಿ, ಮೇ 5: ಶಾಖದ ಅಲೆಯು ಭಾರತದ ಹಲವಾರು ಪ್ರದೇಶಗಳ ಮೇಲೆ ಪರಿಣಾಮ ಬೀರುವುದನ್ನು ಮುಂದುವರೆಸಿದೆ. ಕನಿಷ್ಠ 13 ಸ್ಥಳಗಳಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ತಿಳಿದು ಬಂದಿದೆ. ಪೂರ್ವ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಪ್ರಾಥಮಿಕವಾಗಿ ಶಾಖದ ಅಲೆಯು ಮುಂದುವರೆದಿದೆ.
ಮುಂದಿನ ದಿನಗಳಲ್ಲಿ ಉತ್ತರ ಬಯಲು ಪ್ರದೇಶಗಳು, ಮಧ್ಯ ಪ್ರದೇಶಗಳು ಮತ್ತು ಪರ್ಯಾಯ ಭಾರತದ ಪಕ್ಕದ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಿನ ಶಾಖದ ದಿನಗಳು ಬರಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಶುಕ್ರವಾರ ಗಂಗಾನದಿ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ತೀವ್ರ ಬಿಸಿಯಾದ ಪರಿಸ್ಥಿತಿಗಳು ಮುಂದುವರಿದಿವೆ. ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ವಿದರ್ಭ, ಮಧ್ಯ ಮಹಾರಾಷ್ಟ್ರ, ಗಂಗಾನದಿ ಪಶ್ಚಿಮ ಬಂಗಾಳದ ಭಾಗಗಳಲ್ಲಿ ಗರಿಷ್ಠ ತಾಪಮಾನವು 43-46 ಡಿಗ್ರಿ ಸೆಲ್ಸಿಯಸ್, ಮರಾಠವಾಡ ಮತ್ತು ಉತ್ತರ ಒಳಭಾಗದ ಕರ್ನಾಟಕದ ಭಾಗಗಳಲ್ಲಿ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಗುಜರಾತ್ ಜಾರ್ಖಂಡ್‌ನಲ್ಲಿ ಅಧಿಕ ತಾಪಮಾನವಿದೆ.
ಶಾಖದ ಅಲೆ ಪರಿಸ್ಥಿತಿ ಮೇ 5-6 ರವರೆಗೆ ಮುಂದುವರಿಯುತ್ತದೆ ಮತ್ತು ನಂತರ ಪೂರ್ವ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಕಡಿಮೆಯಾಗುತ್ತದೆ ಎಂದು IMD ಹೇಳಿದೆ.
ಮೇ ತಿಂಗಳಲ್ಲಿ ಶಾಖದ ದಿನಗಳು:
ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್ ಪ್ರದೇಶಗಳಲ್ಲಿ ಮೇ ತಿಂಗಳಲ್ಲಿ ಸುಮಾರು 8 ರಿಂದ 11 ಶಾಖದ ದಿನಗಳಲ್ಲಿ ಶಾಖದ ಅಲೆ ಇರಲಿದೆ. ರಾಜಸ್ಥಾನದ ಉಳಿದ ಭಾಗಗಳು, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳು, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗದ ಕರ್ನಾಟಕ ಮತ್ತು ತೆಲಂಗಾಣವು ತಿಂಗಳ ಅವಧಿಯಲ್ಲಿ ಐದರಿಂದ ಏಳು ದಿನಗಳಲ್ಲಿ ಶಾಖದ ಅಲೆ ಇರಬಹುದು.
ಭಾರತದ ಅಧಿಕ ತಾಪಮಾನದ ನಗರಗಳು:
ನಂದ್ಯಾಲ್ (ರಾಯಲಸೀಮಾ) -46.3 ಡಿಗ್ರಿ ಸೆಲ್ಸಿಯಸ್
ರೆಂಟಚಿಂತಲ (ಆಂಧ್ರ ಪ್ರದೇಶ)- 45.2 ಡಿಗ್ರಿ ಸೆಲ್ಸಿಯಸ್
ಖಮ್ಮಂ (ತೆಲಂಗಾಣ)- 45 ಡಿಗ್ರಿ ಸೆಲ್ಸಿಯಸ್
ಕಲೈಕುಂಡ (ಪಶ್ಚಿಮ ಬಂಗಾಳ)- 44.6 ಡಿಗ್ರಿ ಸೆಲ್ಸಿಯಸ್
ಬೌಧ್ (ಒಡಿಶಾ)- 44.6 ಡಿಗ್ರಿ ಸೆಲ್ಸಿಯಸ್
ಈರೋಡ್ (ತಮಿಳುನಾಡು)-43.4 ಡಿಗ್ರಿ ಸೆಲ್ಸಿಯಸ್


Click it and Unblock the Notifications