ನವದೆಹಲಿ, ಆಗಸ್ಟ್ 11: ಅಮೇರಿಕಾ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ " ಹಿಂಡೆನ್ ಬರ್ಗ್ ರಿಸರ್ಚ್ " ಮತ್ತೊಮ್ಮೆ ಭಾರತ ಕೇಂದ್ರೀತ ವರದಿ ಪ್ರಕಟಿಸುವುದಾಗಿ ಘೋಷಿಸಿದೆ. ಶನಿವಾರ ತನ್ನ ಎಕ್ಸ್ ಖಾತೆಯಲ್ಲಿ ಮತ್ತೊಂದು ಪ್ರಮುಖ ಭಾರತ-ಕೇಂದ್ರಿತ ರಹಸ್ಯ ವರದಿಯ ಬಗ್ಗೆ ಸುಳಿವು ನೀಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದು ಉದ್ಯಮ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ಭಾರತದಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದಾನಿ ಸಮೂಹದ "ಇನ್ಸೈಡರ್ ಟ್ರೇಡಿಂಗ್" ಮತ್ತು ಮತ್ತು ಷೇರು ಮಾರುಕಟ್ಟೆಯಲ್ಲಿನ ಇತರ ಉಲ್ಲಂಘನೆಗಳ ವಿರುದ್ಧ ಆರೋಪಗಳನ್ನು ಪ್ರಕಟಿಸಿದ ಒಂದು ವರ್ಷದ ನಂತರ ಅಮೆರಿಕಾ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಶನಿವಾರ ಸಂಭವನೀಯ ಭಾರತ-ಕೇಂದ್ರಿತ ವರದಿಯ ಬಗ್ಗೆ ಸುಳಿವು ನೀಡುವ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಇದು ತೀವ್ರ ಕುತೂಹಲಕ್ಕೆ ಎಡೆಮಾಡಿದೆ. ಹಿಂಡನ್‌ಬರ್ಗ್ ಮಾಡಿದ ಹಣಕಾಸಿನ ದುರುಪಯೋಗದ ಆರೋಪಗಳಿಂದ ಅದಾನಿ ಷೇರುಗಳ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿತ್ತು. ಆದರೆ ಈ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು.

ಹಿಂಡನ್ ಬರ್ಗ್ ವರದಿ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯದಲ್ಲಿ $150 ಬಿಲಿಯನ್ ಕುಸಿತ ಕಂಡಿತ್ತು. 2023ರ ಜನವರಿ 23ರಂದು ಅಂದರೆ ವರದಿ ಪ್ರಕಟಕ್ಕೂ ಹಿಂದಿನ ದಿನ ಅದಾನಿ ಎಂಟರ್ ಪ್ರೈಸಸ್ ಷೇರು ಮೌಲ್ಯ 3,434.50 ರೂ. ಇತ್ತು. ಕಳೆದ ವರ್ಷ ಫೆಬ್ರವರಿ 27ರಂದು 1,194.20 ರೂ. ಇತ್ತು. ಈ ವರ್ಷದ ಮೇ ತಿಂಗಳ ವೇಳೆಗೆ ಷೇರು ಷೇರು ಮೌಲ್ಯ ಶೇ189ರಷ್ಟು ಹೆಚ್ಚಳಗೊಂಡು ಮತ್ತೆ ಯಥಾ ಸ್ಥಿತಿಗೆ ಬಂದಿತ್ತು.
ಹಿಂಡನ್‌ಬರ್ಗ್ ಶನಿವಾರದಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ʼʼಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡದು ನಡೆಯಲಿದೆʼʼ (Something big soon India) ಎಂದು ಬರೆದುಕೊಂಡಿದೆ.
ಹಿಂಡನ್‌ಬರ್ಗ್ ವರದಿಯಲ್ಲಿ ಏನಿತ್ತು?
ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯಯಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಹಣಕಾಸು ಅಕ್ರಮ ನಡೆಸಿದೆ ಎಂದು ಆರೋಪಿಸಿತ್ತು. ಇದು ದೇಶದಲ್ಲಿ ಸಂಚಲ ಸೃಷ್ಟಿಸಿತ್ತು. ಅದಾನಿ ಗ್ರೂಪ್ನಿಂದ ಕೃತಕವಾಗಿ ಷೇರು ಉಬ್ಬರವಾಗುವಂತೆ ಮಾಡಲಾಗಿರುವುದು ಸೇರಿದಂತೆ ಬಹಳಷ್ಟು ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ 100 ಪುಟಗಳ ವರದಿಯಲ್ಲಿ ಮಾಡಿತ್ತು. ಈ ಬೆಳವಣಿಗೆಯ ಬಳಿಕ ಅದಾನಿ ಗ್ರೂಪ್ ಷೇರು ಮೌಲ್ಯವು ದಿಢೀರನೆ ನೆಲಕಚ್ಚಿತ್ತು.
ಹಿಂಡನ್‌ಬರ್ಗ್ ವರದಿ ಕುರಿತು ಅದಾನಿ ವಿರುದ್ದ ಇನ್ ವೆಸ್ಟಿಗೆಷನ್ ಮಾಡಬೇಕು ಎಂದು ಹಲವಾರು ಮಂದಿ ಸರ್ವೋಚ್ಚನ್ಯಾಯಾಲಯದ ಕದ ತಟ್ಟಿದ್ದರು. ಅಲ್ಲದೆ ಅದಾನಿ ಗ್ರೂಪ್ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲಗಿದ್ದು ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸುಪ್ರೀ ಕೋರ್ಟ್ 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಅದಾನಿ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದರಿಂದಾಗಿ ಗೌತಮ್ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್ ಸಿಕ್ಕಿತ್ತು.


Click it and Unblock the Notifications