HMPV ಸೊಂಕು ದೇಶದಲ್ಲಿ ಪತ್ತೆಯಾದಾಗಿನಿಂದ ಜನರಲ್ಲಿ ಆತಂಕ ಕೂಡ ಹೆಚ್ಚಾಗ್ತಿದೆ. ದಿನೇದಿನೆ ಭಾರತದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿದಿನ ಜನರು ಭಯದಲ್ಲಿ ಬದುಕುವಂತಾಗಿದೆ. ಹೀಗಾಗಿ ಈ ಸೋಂಕು ಒಬ್ಬರಿಂದ ಒಬ್ಬರಿಗೆ ತಾಗದಂತೆ ತಡೆಯಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಸೂಚನೆಯನ್ನ ನೀಡಿದೆ.
ಇನ್ನು ಈ ಸೋಂಕು 2001ರಿಂದ ಇದೆ, ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) ಜೊತೆಗಿನ ಪರಿಶೀಲನಾ ಸಭೆಯಲ್ಲಿ, ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ಹೇಳಿದ್ರು.

ದೇಶದಲ್ಲಿ ಉಸಿರಾಟದ ಕಾಯಿಗಳು ಹೆಚ್ಚಾಗ್ತಿವೆ ಹೀಗಾಗಿ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ವಹಿಸಬೇಕಾಗುತ್ತದೆ. ಅಲ್ಲದೆ ಈ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಾವು ಜಾಗೃತಿಯನ್ನ ವಹಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಚೀನಾದಲ್ಲಿ ಮೊದಲ ಬಾರಿ ಈ HMPV ಸೊಂಕು ಪತ್ತೆಯಾದಾಗಿನಿಂದ ಎಲ್ಲೆಲ್ಲೂ ಕಳವಳ ಹೆಚ್ಚಾಗಿದೆ. ಇದರ ಜೊತೆಗೆ ಭಾರತದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಎರಡು ಪ್ರಕರಣಗಳು ದಾಖಲಾದ್ರೆ ಇನ್ನು ಉಳಿದಂತೆ ಗುಜರಾತಿನ ಅಹಮದಾಬಾದ್‌ನಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಹಾಗೆ ಮಹರಾಷ್ಟ್ರದಲ್ಲಿ ಎರಡು ಶಂಕಿತ HMPV ಪ್ರಕರಣಗಳು ವರದಿಯಾಗಿವೆ. ಹೀಗಾಗಿ ರೋಗಿಗಳ ಹೆಚ್ಚಿನ ತನಿಖೆಗಾಗಿ AIIMS ನಾಗ್ಪುರ ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಗೆ ಕಳುಹಿಸಲಾಗಿದೆ. ಈಗ ಚಳಿ ಪ್ರಮಾಣ ಕೂಡ ಹೆಚ್ಚಾಗುತ್ತಿರುವುದರಿಂದ ಈ ಸೋಂಕು ಹರಡುವ ಸಧ್ಯತೆ ಕೂಡ ಹೆಚ್ಚಿದೆ. ಉಸಿರಾಟದ ಸೊಂಕು ಉಂಟುಮಾಡುವ ವೈರಸ್‌ಗಳಲ್ಲಿ HMPV ಕೂಡ ಒಂದಾಗಿದೆ. ಹೀಗಾಗಿ ಮುಂಜಾಗ್ರತೆ ಕ್ರಮ ವಹಿಸುವುದು ಅಗತ್ಯ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಈ ಸೋಂಕು ಮಕ್ಕಳು ಮತ್ತು ವಯಸ್ಸಾದವರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಹೀಗಾಗಿ ಜಾಗೃತಿ ವಹಿಸಬೇಕು ಎಂದು ಕೇಂದ್ರ ತಿಳಿಸಿದೆ. ಅಲ್ಲದೆ ಈ ಬಗ್ಗೆ ಯಾರು ಕೂಡ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೂಡ ಸರ್ಕಾರ ತಿಳಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸಿದ್ದು, ಈ ವೈರಸ್ ಭಾರತಕ್ಕೇನು ಹೊಸದಲ್ಲ ಹಾಗೆ ಇದಕ್ಕೂ ಮೊದಲು ಈ ವೈರಸ್ ಭಾರತದಲ್ಲಿ ಇತ್ತು ಹೀಗಾಗಿ ಭಯಭಿತರಾಗುವ ಅಗತ್ಯ ಇಲ್ಲ ಎನ್ನಲಾಗ್ತಿದೆ.
ಇನ್ನು ಈ ಪ್ರಕರಣಗಳು ಮತ್ತೆ ಹೆಚ್ಚಾಗದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ HMPV ಕುರಿತು ಭಯಭೀತರಾಗುವ ಅಗತ್ಯ ಇಲ್ಲ ಎಮದು ಸಾಕಷ್ಟು ಮುಂಜಾಗ್ರತಾ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಐಸಿಎಂಆರ್ ಅಂಕಿಅಂಶಗಳ ಪ್ರಕಾರ, ಎಚ್‌ಎಂಪಿವಿ 3% ಉಸಿರಾಟದ ರೋಗಕಾರಕಗಳನ್ನು ಹೊಂದಿದೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳ ಆರೋಗ್ಯ ಇಲಾಖೆಗಳು ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲನೆ ಮಾಡಲು ಪ್ರಾರಂಭಿಸಿವೆ ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಸಾರ್ವಜನಿಕರಿಗೆ ಆರೋಗ್ಯ ಸಲಹೆಗಳನ್ನು ನೀಡಲು ಮುಂದಾಗಿವೆ.
HMPV ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ತಿಳಿಯಿರಿ
HMPV ಸಾಮಾನ್ಯವಾಗಿ ರೋಗ ನಿರೋಧಕ ಅಂಶ ಕಡಿಮೆ ಇರುವವರಲ್ಲಿ ಕಂಡುಬರುತ್ತದೆ. ಇನ್ನು ಆರೋಗ್ಯವಂತ ವ್ಯಕ್ತಿಗಳಲ್ಲಿ ನಿಧಾನವಾಗಿ ಇದರ ಗುಣಲಕ್ಷಣಗಳು ಕಾಣಲು ಶುರುವಾಗುತ್ತವೆ. ಮೂಗು ಕಟ್ಟುವುದು, ಜ್ವರ, ಗಂಟಲು ನೋವು, ಹೀಗೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಇದರ ಜೊತೆಗೆ ಇದು ಸಾಕಷ್ಟು ಉಸಿರಾಟದ ಸಮಸ್ಯೆಗಳನ್ನ ಎದುರಿಸುವಂತೆ ಮಾಡುತ್ತದೆ. ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ತ್ವರಿತ ಉಸಿಟಾದ ಸಮಸ್ಯೆ, ಸೈನೋಸಿಸ್ ತುಟಿ ಮತ್ತು ಬೆರಳುಗಳು ನೀಲಿಯಾದ್ರೆ ಇದು ಪ್ರಕರಣದ ತೀವ್ರತೆಯನ್ನ ಹೇಳುತ್ತದೆ.
ಸಧ್ಯಕ್ಕೆ ಈ ಸೋಂಕನ್ನು ತಡೆಗಟ್ಟಲು ಯಾವುದೇ ನಿರ್ಧಿಷ್ಟ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ನಾವು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಈ ರೋಗ ಬಾರದಂತೆ ತಡೆಯಬಹುದು. ಈಗಾಗಲೇ ಅನಾರೋಗ್ಯವನ್ನ ಹೊಂದಿರುವವರು ವಯಸ್ಸಾದವರು ಮಕ್ಕಳು ಹೆಚ್ಚು ವಿಶ್ರಾಂತಿ ಹಾಗೆ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆ ಬಾರದಂತೆ ನಿಯಂತ್ರಿಸಬಹುದು. ಇನ್ನು ಇಂತಹ ರೋಗ ಲಕ್ಷಣಗಳು ಹೆಚ್ಛಾದರೆ ನೀವು ಆಸ್ಪತ್ರೆಗೆ ದಾಖಲಾಗುವುದು ಉತ್ತಮ.


Click it and Unblock the Notifications