HMPV Virus: ಭಾರತದಲ್ಲಿ ಮೂರು ಪ್ರಕರಣಗಳು ಪತ್ತೆ, ಆಸ್ಪತ್ರೆ ಷೇರು 4% ಏರಿಕೆ!

ಭಾರತದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV)ನ ಮೂರು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಆಸ್ಪತ್ರೆ ಷೇರುಗಳು ಏರಿಕೆಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಪ್ರಕರಣಗಳನ್ನ ದೃಡಪಡಿಸಿದ ನಂತರ ಇತ್ತ ಆಸ್ಪತ್ರೆ ಷೇರುಗಳು ಗಮನಾರ್ಹ ಏರಿಕೆಯನ್ನ ಕಂಡಿವೆ.

ಇನ್ನು HMPV ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಚಲಾವಣೆಯಲ್ಲಿದೆ ಹಾಗೆ HMPV ಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ತಿಳಿದುಬಂದಿದೆ . ಬೆಂಗಳೂರಿನಲ್ಲಿ ಎರಡು ಹಾಗೆ ಗುಜರಾತ್‌ನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಚೀನಾದಲ್ಲಿ ವೈರಸ್‌ ಆತಂಕ ಹೆಚ್ಚಾಗುತ್ತಿದ್ದು, ಈ ಮಧ್ಯೆ ಈ ವೈರಸ್‌ ಭಾರತಕ್ಕೂ ಕಾಲಿಟ್ಟುವುದು ಅಚ್ಚರಿಯನ್ನ ಮೂಡಿಸಿದೆ.

3 HMPV ಪ್ರಕರಣ ಪತ್ತೆ! ಆಸ್ಪತ್ರೆ ಷೇರು 4% ಏರಿಕೆ!

ಆಸ್ಪತ್ರೆ ಷೇರುಗಳು ಏರಿಕೆ

HMPV ವೈರಸ್‌ ಪತ್ತೆಯಾಗುತ್ತಿದ್ದಂತೆ ಆಸ್ಪತ್ರೆ ಷಾರುಗಳು ಕೂಡ ಏರಿಕೆಯಾಗಿದೆ. ಬೆಂಗಳೂರಿನ ನಾಾಯಣ ಹೃದಯಾಲಯ ಶೇಕಡಾ 3.3ರಷ್ಟು ಏರಿಕೆಯಾಗಿ 1,353.75 ರೂ. ತಲುಪಿದೆ. ರೈನ್‌ಬೋ ಚಿಲ್ಡ್ರನ್ಸ್ ಮೆಡಿಕೇರ್ ಶೇಕಡಾ 4 ರಷ್ಟು ಏರಿಕೆಯಾಗಿ 1620 ರೂ ತಲುಪುವ ಮೂಲಕ ಇದರ ಷೇರುಗಳು ತಿನದ ಗರಷ್ಠ ಮೊತ್ತವನ್ನ ತಲುಪಿವೆ. ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಹ ಶೇಕಡಾ 3.4 ರಷ್ಟು ಏರಿಕೆ ಕಂಡು 649 ರೂಪಾಯಿಗೆ ತಲುಪಿದೆ. ಅಪೊಲೊ ಹಾಸ್ಪಿಟಲ್ ಎಂಟರ್‌ಪ್ರೈಸಸ್ ಮತ್ತು ಆಸ್ಟರ್ ಡಿಎಂ ಹೆಲ್ತ್‌ಕೇರ್ ಎರಡೂ ಕೂಡ ಶೇಕಡಾ 2 ರಷ್ಟು ಏರಿಕೆಯನ್ನ ಕಂಡಿವೆ.

ಮಾರುಕಟ್ಟೆಯ ಚಂಚಲತೆಯನ್ನು ಅಳತೆ ಮಾಡುವ ಇಂಡಿಯಾ VIX ಸೂಚ್ಯಂಕವು 13% ರಷ್ಟು ಏರಿಕೆಯಾಗಿದೆ. ಇದು ಸಣ್ಣ-ಕ್ಯಾಪ್ ಮತ್ತು ಮಧ್ಯಮ ಷೇರುಗಳಲ್ಲಿ ವ್ಯಾಪಕ ಮಾರಾಟವನ್ನು ಪ್ರತಿಬಿಂಬಿಸುತ್ತದೆ. HDFC ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಹೆವಿವೇಯ್ಟ್‌ಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ಸೆನ್ಸೆಕ್ಸ್ 78,065 ಅಂಕಗಳ ಕನಿಷ್ಠ ಮಟ್ಟಕ್ಕೆ ಮತ್ತು ನಿಫ್ಟಿ 23,600 ಅಂಕಗಳ ಸಮೀಪ ತಲುಪಿದೆ.

ಸಾರ್ವಜನಿರಿಗೆ ಸರ್ಕಾರ ಭರವಸೆ

ಬೆಂಗಳೂರಿನಲ್ಲಿ ಮೊದಲ HMPVಯ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ಎರಡು ತಿಂಗಳ ಮಗುವಿನಲ್ಲಿ ಈ ವೈರಸ್‌ ಪತ್ತೆಯಾಗಿದೆ. ಯಾವುದೇ ಪ್ರಯಾಣದ ಇತಿಹಾಸವಿಲ್ಲದಿದ್ದರೂ ಕೂಡ ಮಗುವಿನಲ್ಲಿ ವೈರಸ್‌ ಪತ್ತೆಯಾಗಿದೆ. ಸಧ್ಯ ಈ ಮಗು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಅಲ್ಲದೆ ಮಗುವಿನ ಈಗ ಸಧ್ಯದ ಪರಿಸ್ಥಿತಿಯನ್ನ ಕಂಡು ಆರೋಗ್ಯ ಸಚಿವಾಲಯ ಭಯಪಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಇನ್ನು ಭಾರತವು ವಿವಿಧ ಚಾನೆಲ್‌ಗಳ ಮೂಲಕ ಜಾಗತಿಕ HMPV ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಸಚಿವಾಲಯವು HMPV ಪ್ರಕರಣಗಳಿಗೆ ಲ್ಯಾಬ್ ಪರೀಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಜೊತೆಗೆ ವರ್ಷವೆಲ್ಲಾ HMPV ಟ್ರೆಂಡ್‌ಗಳನ್ನು ಪರಿಶೀಲನೆ ಮಾಡಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)ಗೆ ವಹಿಸಿದೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಈ ಕುರಿತು ಸಾಕಷ್ಟು ಕ್ಮಗಳನ್ನ ತೆಗೆದುಕೊಳ್ಳಲು ಮುಂದಾಗಿದೆ. ಇನ್ನು HMPV ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಚಲಾವಣೆಯಲ್ಲಿದೆ ಹಾಗೆ HMPV ಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ತಿಳಿದುಬಂದಿದೆ .

ಕೋವಿಡ್‌ನ ದಿನಗಳನ್ನ HMPV ಮತ್ತೆ ನೆನಪು ಮಾಡುತ್ತಾ ಎಂದು ಜನರು ಆತಂಕವನ್ನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ರಾಯಿಟರ್ಸ್‌ ವರದಿ ಪ್ರಕಾರ ಈ HMPV ವೈರಸ್‌ ಚೀನಾದಲ್ಲಿ ಅತೀ ಹೆಚ್ಚು ವರದಿಯಾಗಿದೆ ಎಂದು ತಿಳಿದುಬಂದಿದೆ. ಹಾಗೆ ಇದು ಇತರೆ ಸಾಂಕ್ರಮಿಕ ರೋಗಗಳನ್ನ ಹರಡುವ ಸಾಧಯತೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.

HMPV ವೈರಸ್‌ ಹೇಗೆ ಹರಡುತ್ತದೆ?

HMPV ವೈರಸ್‌ ಉಸಿರಾಟದ ಸಮಸ್ಯೆಯನ್ನ ಉಂಟುಮಾಡಬಹುದು, ಹಾಗೆ ಇದು ಎಲ್ಲಾ ವರ್ಗದ ವಯಸ್ಸಿನವರಿಗೂ ಕೂಡ ಇದರ ಸೋಂಕು ತಾಗಬಹುದು. ಅಲ್ಲದೆ ಪ್ರಮುಖವಾಗಿ ಚಿಕ್ಕ ಮಕ್ಕಳು, ಹಿರಿಯ ವಯಸ್ಕರರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ರೋಗ ನಿರೋಧಕ ಶಕ್ತಿಯನ್ನ ಕಡಿಮೆ ಹೊಂದರುವವರು ಈ ರೋಗಕ್ಕೆ ಬೇಗ ತುತ್ತಾಗುತ್ತಾರೆ. ಈ ಸೋಂಕು ಮೊದಲು 2001 ನೇ ಇಸಿವಿಯಲ್ಲಿ ಪತ್ತೆಯಾಗಿತ್ತು.

ಅಲ್ಲದೆ ಈ ವೈರಸ್‌ ಚಳಿಗಾಲದಲ್ಲಿ ಇತರೆ ವೈರಸ್‌ಗಳಂತೆ ಬಿಂಭಿಸುತ್ತವೆ, ಹಾಗೆ ಇತರೆ ರೋಗಲಕ್ಷಣಗಳಂತೆ ಈ ವೈರಸ್‌ ಕಾಣಿಸಿಕೊಳ್ಳುತ್ತದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ವರದಿ ಮಾಡಿದೆ.

ಈ HMPV ವೈರಸ್‌ ಲಕ್ಷಣಗಳನ್ನ ನೋಡುವುದಾದ್ರೆ, ಕೆಮ್ಮ, ಜ್ವರ, ಮೂಗು ಕಟ್ಟುವುದು, ಉಸಿರಾಟದ ತೊಂದರೆಗಳು ಮೊದಲು ಕಾಣಿಸಿಕೊಳ್ಳುತ್ತವೆ. ನಂತರ ಬ್ರಾಂಕೈಟಿಸ್ ಹಾಗೆ ನ್ಯುಮೋನಿಯಾದಂತಹ ಇತರೆ ಮಸ್ಯೆಗಳು ಶುರುವಾಗಬಹುದು. ಕೋವಿಡ್‌ನಂತೆಯೇ ಇದು ಕೂಡ ಉಸಿರಾಟದ ಸಮಸ್ಯೆಯನ್ನ ಉಂಟು ಮಾಡುತ್ತದೆ. ಈ ರೋಗ ಲಕ್ಷಣಗಳು ತೀವ್ರವಾದಂತೆ ನಮ್ಮ ಸಮಸ್ಯೆಗಳು ಕೂಡ ಉಲ್ಬಣವಾಗಬಹುದು. ಇನ್ನು ಈ ಸೋಂಕನ್ನು ತಡೆಗಟ್ಟಲು ಸಧ್ಯಕ್ಕೆ ಯಾವುದೇ ನಿರ್ಧಿಷ್ಟ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ನಾವು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಈ ರೋಗ ಬಾರದಂತೆ ತಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+